Vastu Tips: ಸೂರ್ಯಾಸ್ತದ ನಂತರ ಈ ವಸ್ತುಗಳನ್ನು ಯಾರಿಗೂ ಕೊಡಬಾರದು
ವಾಸ್ತು ಪ್ರಕಾರ, ಸೂರ್ಯಾಸ್ತದ ಬಳಿಕ ಮುಸ್ಸಂಜೆಯಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ಅಮಂಗಳಕರ ಎಂದು ಭಾವಿಸಲಾಗುತ್ತದೆ. ಅವು ಮನೆಯ ಸುಖ-ಸಂತೋಷದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ನಂಬಲಾಗಿದೆ. ಹಾಗಿದ್ದರೆ, ಸೂರ್ಯಾಸ್ತದ ನಂತರ ಯಾವ ವಸ್ತುಗಳನ್ನು ಬೇರೆಯವರಿಗೆ ನೀಡಬಾರದು ಎಂದು ತಿಳಿಯೋಣ...
ವಾಸ್ತು ಪ್ರಕಾರ, ಮುಸ್ಸಂಜೆಯಲ್ಲಿ ಬೇರೆಯವರಿಗೆ ಹಣ ನೀಡಬಾರದು. ಇದು ಮನೆಯಲ್ಲಿ ಬಡತನಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
ಹಾಲನ್ನು ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಎಂದು ಭಾವಿಸಲಾಗಿದೆ. ಹಾಗಾಗಿ, ಸಂಜೆ ವೇಳೆ ಬೇರೆಯವರಿಗೆ ಹಾಲು ನೀಡುವುದರಿಂದ ಲಕ್ಷ್ಮಿ ಮನೆಯಿಂದ ಹೊರಟು ಹೋಗುತ್ತಾಳೆ ಎಂದು ನಂಬಲಾಗಿದೆ.
ಮೊಸರು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಹಾಗಾಗಿ, ಸಂಜೆ ವೇಳೆ ಬೇರೆಯವರಿಗೆ ಮೊಸರು ನೀಡುವುದರಿಂದ ಅಂತಹ ಮನೆಯಲ್ಲಿ ಸುಖ-ಸಂತೋಷ, ಸಮೃದ್ಧಿ ಕಡಿಮೆ ಆಗುತ್ತದೆ ಎಂದು ಭಾವಿಸಲಾಗಿದೆ.
ಸೂರ್ಯಾಸ್ತದ ಬಳಿಕ ಬೇರೆಯವರಿಗೆ ಅರಿಶಿನವನ್ನು ನೀಡುವುದರಿಂದ ಜಾತಕದಲ್ಲಿ ಗುರು ಗ್ರಹ ದುರ್ಬಲಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈರುಳ್ಳಿ ಮತ್ತು ಬೆಳ್ಳುಳ್ಳಿ ಕೇತು ಗ್ರಹಕ್ಕೆ ಸಂಬಂಧಿಸಿದೆ. ಸೂರ್ಯಾಸ್ತದ ಬಳಿಕ ಇದನ್ನು ಮನೆಯಿಂದ ಹೊರಗೆ ನೀಡುವುದರಿಂದ ಕೇತು ದೋಷ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.