Vastu Tips: ಬೆಡ್ ರೂಂನಲ್ಲಿರುವ ಈ ವಸ್ತುಗಳು ನಿಮ್ಮ ದಾಂಪತ್ಯ ಜೀವನದಲ್ಲಿ ಕಲಹಕ್ಕೆ ಕಾರಣವಾಗಬಹುದು!

Mon, 20 Mar 2023-2:31 pm,

ಕೆಲವರಿಗೆ ಪ್ರಾಣಿಗಳೆಂದರೆ ಅಚ್ಚು-ಮೆಚ್ಚು. ಹಾಗಾಗಿಯೇ, ಅದರ ಚಿತ್ರಗಳನ್ನು ತಮ್ಮ ಬೆಡ್ ರೂಂನಲ್ಲಿ ಹಾಕಿರುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ಆಕ್ರಮಣಕಾರಿ ಪ್ರಾಣಿಗಳ ಚಿತ್ರಗಳನ್ನು ಎಂದಿಗೊ ಹಾಕಬಾರದು. ಇದು ಸಾಂಸಾರಿಕ ಜೀವನದಲ್ಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. 

ಅಲಂಕಾರಕ್ಕಾಗಿ ಕೆಲವರು ಮುಳ್ಳಿನ ಗಿಡಗಳನ್ನು ಬೆಡ್ ರೂಂನಲ್ಲಿ ಇಡುತ್ತಾರೆ. ಆದರೆ, ಇಂತಹ ಮುಳ್ಳಿನ ಗಿಡಗಳು ನಿಮ್ಮ ಜೀವನದಲ್ಲಿ ಅಪಶ್ರುತಿಯನ್ನು ಸೃಷ್ಟಿಸಬಹುದು ಎಂದು ಹೇಳಲಾಗುತ್ತದೆ. 

ನಿಸರ್ಗ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹಾಗಾಗಿಯೇ, ನಮ್ಮಲ್ಲಿ ಕೆಲವರು ನಿಸರ್ಗಕ್ಕೆ ಸಂಬಂಧಿಸಿದ ವರ್ಣಚಿತ್ರಗಳನ್ನು ತಮ್ಮ ಮಲಗುವ ಕೋಣೆಯಲ್ಲಿ ಹಾಕುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಸಮುದ್ರ, ಜಲಪಾತಗಳು ಅಥವಾ ನೀರಿನ ವರ್ಣಚಿತ್ರಗಳು ಪತಿ-ಪತ್ನಿಯರ ನಡುವಿನ ಜಗಳಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ, ಸುಖ ದಾಂಪತ್ಯ ಜೀವನಕ್ಕಾಗಿ ದಂಪತಿಗಳು ಮಲಗುವ ದಿಕ್ಕಿನ ಬಗ್ಗೆಯೂ ಗಮನಹರಿಸುವುದು ಬಹಳ ಮುಖ್ಯ. ದಂಪತಿಗಳ ಕೋಣೆ ಯಾವಾಗಲೂ ಉತ್ತರ ಅಥವಾ ವಾಯುವ್ಯ ಭಾಗದಲ್ಲಿದ್ದರೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link