Vastu Tips: ಈ ಗಿಡಗಳು ಮನೆಯಲ್ಲಿ ಅಥವಾ ಮನೆಯ ಹತ್ತಿರದಲ್ಲಿರಬಾರದು, ಕಾರಣ ಇಲ್ಲಿದೆ

Tue, 15 Mar 2022-6:16 pm,

1. ಅಕೇಶಿಯಾ ಗಿಡ - ಅಕೇಶಿಯಾ ಗಿಡವನ್ನು ಮನೆಯೊಳಗೆ ಅಥವಾ ಹತ್ತಿರ ನೆಡಬಾರದು. ವಾಸ್ತುವಿನ ದೃಷ್ಟಿಯಿಂದ ಇದು ಅಶುಭವೆಂದು ಪರಿಗಣಿಸಲಾಗಿದೆ. ಈ ಗಿಡವನ್ನು ನೆಟ್ಟ ಮನೆಯಲ್ಲಿನ ಸದಸ್ಯರ ಮಧ್ಯೆ ಪರಸ್ಪರ ಹೊಂದಾಣಿಕೆ ಇರುವುದಿಲ್ಲ ಎಂಬ ನಂಬಿಕೆ ಇದೆ. ಮನೆಯಲ್ಸಲಿ ದಾ ಗಲಾಟೆ ನಡೆಯುತ್ತಲೇ ಇರುತ್ತದೆ.  

2. ಹತ್ತಿ ಗಿಡ - ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಹತ್ತಿ ಅಥವಾ ರೇಷ್ಮೆ  ಹತ್ತಿಯ ಗಿಡ ನೆಡಬಾರದು. ಈ ಗಿಡಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ರವಾನಿಸುತ್ತವೆ. ಇವು ಜೀವನದಲ್ಲಿ ದುರದೃಷ್ಟ ಮತ್ತು ಬಡತನವನ್ನು ಹೆಚ್ಚಿಸುತ್ತವೆ.

3. ಗೋರಂಟಿ ಗಿಡ - ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮೆಹಂದಿ ಗಿಡ ಅಥವಾ ಗೋರಂಟಿ ಗಿಡ ನೆಡಬಾರದು. ಈ ಸಸ್ಯದಲ್ಲಿ ದುಷ್ಟಶಕ್ತಿಗಳು ವಾಸಿಸುತ್ತವೆ ಎಂದು ನಂಬಲಾಗಿದೆ. ಅಲ್ಲದೆ, ಈ ಸಸ್ಯವು ಎಲ್ಲೆಲ್ಲಿ ಇರುತ್ತದೆಯೋ, ಅದರ ಸುತ್ತಲೂ ನಕಾರಾತ್ಮಕ ಶಕ್ತಿಯು ಹರಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಈ ಸಸ್ಯವನ್ನು ಎಂದಿಗೂ ಮನೆಯೊಳಗೆ ಅಥವಾ ಮನೆಯ ಹತ್ತಿರ ನೆಡಬಾರದು.  

4. ಹುಣಸೆ ಮರ - ವಾಸ್ತು ಪ್ರಕಾರ, ಮನೆಯಲ್ಲಿ ಅಥವಾ ಮನೆಯ ಹತ್ತಿರದಲ್ಲಿ  ಹುಣಸೆ ಮರವನ್ನು ನೆಡಬಾರದು. ವಾಸ್ತವದಲ್ಲಿ ನಕಾರಾತ್ಮಕ ಶಕ್ತಿಯು ಈ ಸಸ್ಯದಲ್ಲಿ ನೆಲೆಸಿರುತ್ತದೆ. ಇದಲ್ಲದೇ ಹುಣಸೆ ಮರ ಇರುವ ಜಾಗದಲ್ಲಿ ಮನೆ ಕಟ್ಟುವುದನ್ನು ತಪ್ಪಿಸಬೇಕು.  

5. ಒಣಗಿದ ಗಿಡ - ವಾಸ್ತು ಶಾಸ್ತ್ರದ ಪ್ರಕಾರ ಒಣ ಗಿಡಗಳು ಮನೆಯಲ್ಲಿ ಅಥವಾ ಮನೆಯ ಆವರಣದಲ್ಲಿ ಇರಬಾರದು. ಮನೆಯಲ್ಲಿ  ಮಡಿಕೆಯಲ್ಲಿ ಯಾವುದೇ ಒಂದು ಸಸ್ಯ ಒಣಗಿದ್ದರೆ, ಅದನ್ನು ತಕ್ಷಣವೇ ತೆಗೆದುಹಾಕಬೇಕು, ಏಕೆಂದರೆ ಇಂತಹ ಸಸ್ಯಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ರವಾನಿಸುತ್ತವೆ. ಇದರಿಂದಾಗಿ ಜೀವನದಲ್ಲಿ ದುಃಖಗಳು ಮತ್ತು ತೊಂದರೆಗಳು ಎದುರಾಗುತ್ತಲೇ ಇರುತ್ತವೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link