Vastu Tips: ನಿಮ್ಮ ಮನೆಯ ಹತ್ತಿರವೂ ದೇವಸ್ಥಾನ ಇದೆಯಾ? ಹಾಗಾದರೆ ಈ ವರದಿಯನ್ನು ತಪ್ಪದೆ ಓದಿ
1. ದೇವಿಯ ದೇವಸ್ಥಾನ - ಒಂದು ವೇಳೆ ನಿಮ್ಮ ಮನೆಯ ಬಳಿಯೂ ಕೂಡ ದೇವಿಯ ದೇವಸ್ಥಾನವಿದ್ದರೆ, ನಿಮ್ಮ ಮನೆಯ ಮುಖ್ಯ ಗೇಟ್ ಮೇಲೆ ಆ ದೇವಿಯ ಪ್ರಮುಖ ಅಸ್ತ್ರವನ್ನು ಸ್ಥಾಪಿಸಿ. ಇದರ ಜೊತೆಗೆ ಆ ದೇವಿಯ ಭಾವಚಿತ್ರವನ್ನು ಮುಖ್ಯದ್ವಾರದ ಮೇಲೆ ಅಂಟಿಸಿ. ಇಲ್ಲಿ ನೀವು ದೇವಿಯ ವಾಹನದ ಚಿತ್ರವನ್ನು ಕೂಡ ಅಂಟಿಸಬಹುದು.
2. ಲಕ್ಷ್ಮಿ ದೇವಸ್ಥಾನ (Goddess Lakshmi)- ಒಂದು ವೇಳೆ ನಿಮ್ಮ ನಿವಾಸದ ಬಳಿ ಭಗವತಿ ದೇವಿ ಲಕ್ಷಿಯ ದೇವಸ್ಥಾನವಿದ್ದರೆ, ಬಾಗಿಲ ಮೇಲೆ ಕಮಲದ ಆಕೃತಿಯನ್ನು ಬಿಡಿಸಿಕೊಳ್ಳಿ. ಇದಲ್ಲದೆ ನೀವು ಬೇರೆ ಉಪಾಯವನ್ನು ಕೂಡ ಮಾಡಬಹುದು. ನೀವು ಶ್ರೀ ವಿಷ್ಣುವಿನ ಫೋಟೋವನ್ನು ಅಂಟಿಸಿ ಅದಕ್ಕೆ ಕಮಲಗಟ್ಟೆಯ ಮಾಲೆ ಅರ್ಪಿಸಿ.
3. ಶಿವನ ದೇವಸ್ಥಾನ - ಒಂದು ವೇಳೆ ನಿಮ್ಮ ಮನೆಯ ಬಳಿ ಶಿವನ ದೇವಸ್ಥಾನವಿದ್ದರೆ, ಶಿವನ ದೇವಷ್ಟಾನವಿರುವ ದಿಕ್ಕಿನೆಡೆಗೆ ಮುಖಮಾಡಿರುವ ಗಣಪತಿಯ ವಿಗ್ರಹವನ್ನು ಮನೆಯಲ್ಲಿ ಸ್ಥಾಪಿಸಿ. ಹೀಗೆ ಮಾಡುವುದರಿಂದ ವಾಸ್ತುದೋಷ ನಿವಾರಣೆಯಾಗುತ್ತದೆ. ಒಂದು ವೇಳೆ ಶಿವನ ದೇವಸ್ಥಾನ ಮನೆಯ ಬಾಗಿಲ ನೇರ ಮುಂದೆಯೇ ಇದ್ದರೆ, ಮನೆಯ ಮುಖ್ಯದ್ವಾರದ ಹೊಸ್ತಿಲ ಬಳಿ ತಾಮ್ರದ ಹಾವನ್ನು ಹೂತು ಹಾಕಿ.
4. ಭೈರವನಾಥ ಮಂದಿರ - ಒಂದು ವೇಳೆ ನಿಮ್ಮ ಮನೆಯ ಎದುರು ಭೈರವನಾಥನ ದೇವಸ್ಥಾನವಿದ್ದರೆ, ನಿತ್ಯ ಬೆಳಗ್ಗೆ ನಿಮ್ಮ ಮನೆಯ ಮುಖ್ಯದ್ವಾರದ ಮೇಲೆ ಕಾಗೆಗೆ ರೊಟ್ಟಿಯನ್ನು ತಿನ್ನಿಸಿ.
5. ಶ್ರೀರಾಮನ ದೇವಸ್ಥಾನ - ಒಂದು ವೇಳೆ ಶ್ರೀರಾಮನ ದೇವಸ್ಥಾನದ ಬಳಿ ನಿಮ್ಮ ಮನೆ ಇದ್ದರೆ, ವಾಸ್ತು ದೋಷ ನಿವಾರಣೆಗಾಗಿ ಮನೆಯ ಮುಖ್ಯದ್ವಾರದ ಮೇಲೆ ಬಾಣವಿಲ್ಲದ ಧನುಷ್ಯದ ಆಕೃತಿಯನ್ನು ಬಿಡಿಸಿ.
6. ಇತರೆ ಅವತಾರಗಳ ದೇವಸ್ಥಾನಗಳು - ಒಂದು ವೇಳೆ ನಿಮ್ಮ ಮನೆ ದೇವರ ಇತರ ಯಾವುದೇ ಆವತಾರಗಳ ದೇವಸ್ಥಾನದ ಹತ್ತಿರವಿದ್ದರೆ, ಮನೆಯ ಮುಖ್ಯದ್ವಾರದ ಮೇಲೆ ಪಂಚಮುಖಿ ಹನುಮನ ಚಿತ್ರ ಅಂಟಿಸಿ. ಪಂಚಮುಖಿ ಆಂಜನೇಯ ಮನೆಯಲ್ಲಿರುವ ಎಲ್ಲ ವಾಸ್ತುದೋಷಗಳನ್ನು ನಿವಾರಿಸಿ, ಸುಖ-ಶಾಂತಿ ದಯಪಾಲಿಸುತ್ತಾನೆ.