Vastu Tips:ಧನತ್ರಯೋದಶಿ-ದೀಪಾವಳಿ ಮುನ್ನ ಮನೆಯ ಈ ಜಾಗಗಳನ್ನು ಸ್ವಚ್ಛಗೊಳಿಸಿ, ದೇವಿ ಲಕ್ಷ್ಮಿ ಮನೆಯಲ್ಲಿಯೇ ನೆಲೆಸುತ್ತಾಳೆ

Sat, 23 Oct 2021-12:35 pm,

1. ಲಕ್ಷ್ಮಿ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ವಾಸ್ತು ಟಿಪ್ಸ್ - ಲಕ್ಷ್ಮಿ ದೇವಿಯು ಸ್ವಚ್ಛತೆ (CLEAN THESE 3 PLACES) ಬೆಳಕನ್ನು ಪ್ರೀತಿಸುತ್ತಾಳೆ, ಅದಕ್ಕಾಗಿಯೇ ದೀಪಾವಳಿಯ ಮೊದಲು, ಮನೆಯನ್ನು ಸ್ವಚ್ಛಗೊಳಿಸಲಾಗುತ್ತದೆ ಮತ್ತು ಬಣ್ಣ ಬಳಿಯಲಾಗುತ್ತದೆ. ಲಕ್ಷ್ಮಿ ಜೀ ಅಂತಹ ಶುದ್ಧ ಸ್ಥಳಗಳಲ್ಲಿ ವಾಸಿಸುತ್ತಾಳೆ. ನೀವು ಸಹ ಲಕ್ಷ್ಮಿ ಜಿಯ ಆಶೀರ್ವಾದವನ್ನು ಪಡೆಯಲು ಬಯಸುತ್ತಿದ್ದರೆ, ಧನತ್ರಯೋದಶಿ (DHANTERAS TIPS) ಮತ್ತು ದೀಪಾವಳಿಗಾಗಿ ವಾಸ್ತು ಶಾಸ್ತ್ರದಲ್ಲಿ ತಿಳಿಸಲಾದ ಕೆಲವು ವಿಷಯಗಳನ್ನು ಖಂಡಿತವಾಗಿಯೂ ಅನುಸರಿಸಿ.

2. ಮನೆಯ ಈಶಾನ್ಯ ಕೋನವನ್ನು ಸ್ವಚ್ಛಗೊಳಿಸಿ - ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪ್ರಮುಖ ಸ್ಥಳವೆಂದರೆ ಅದು ಈಶಾನ್ಯ ದಿಕ್ಕಿನ ಜಾಗ. ಇದು ದೇವತೆಗಳ ಸ್ಥಳವಾಗಿದೆ, ಈ ದಿಕ್ಕಿನಲ್ಲಿ ಅಡುಗೆಮನೆಗಳು ಮತ್ತು ಪೂಜಾ ಮನೆಗಳನ್ನು ನಿರ್ಮಿಸಲಾಗುತದೆ. ಧನತ್ರಯೋದಶಿ ಮತ್ತು ದೀಪಾವಳಿಯ ದಿನದಂದು, ಈಶಾನ್ಯ ಮೂಲೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಆ ಜಾಗದಲ್ಲಿಅನಗತ್ಯವಾಗಿ ಏನನ್ನೂ ಇರಿಸಬೇಡಿ. ಮನೆಯ ಈಶಾನ್ಯ ಮೂಲೆಯು ಸ್ವಚ್ಛವಾಗಿದ್ದರೆ, ಲಕ್ಷ್ಮಿ ದೇವಿ, ಧನ್ವಂತರಿ ಮತ್ತು ಕುಬೇರನ ಕೃಪೆಯಿಂದ ಮನೆಯಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ನೆಲೆಸಿರುತ್ತದೆ.   

3. ಬ್ರಹ್ಮ ಸ್ಥಾನದಿಂದ ಮುರಕಲುಗೊಂಡ ನಿರುಪಯುಕ್ತ ವಸ್ತುಗಳನ್ನು ತೆಗೆದು ಹಾಕಿ - ಮನೆಯ ಈಶಾನ್ಯ ಮೂಲೆಯ ನಂತರ, ಎರಡನೆಯ ಪ್ರಮುಖ ಭಾಗವೆಂದರೆ ಮನೆಯ ಬ್ರಹ್ಮ ಸ್ಥಳ. ಮನೆಯ ಮಧ್ಯ ಭಾಗವನ್ನು ಬ್ರಹ್ಮ ಸ್ಥಾನ ಎಂದು ಕರೆಯಲಾಗುತ್ತದೆ. ಸಾಧ್ಯವಾದರೆ ಈ ಸ್ಥಳವನ್ನು ಯಾವಾಗಲೂ ತೆರೆದಿರಬೇಕು ಮತ್ತುಗಾಳಿಯಾಡುವಂತಿರಬೇಕು. ಆ ಜಾಗದಲ್ಲಿ ಎಂದಿಗೂ ಭಾರವಾದ ಪೀಠೋಪಕರಣಗಳು ಅಥವಾ ಅನಗತ್ಯ ವಸ್ತುಗಳನ್ನು ಇರಿಸಬೇಡಿ. ಈ ಸ್ಥಳದಲ್ಲಿ ಮುರಿದ ಪೀಠೋಪಕರಣಗಳನ್ನು ಇಡಬೇಡಿ. ಒಂದು ವೇಳೆ ಇರಿಸಿದ್ದಾರೆ ಆ  ವಸ್ತುಗಳನ್ನು ತಕ್ಷಣ ತೆಗೆದುಹಾಕಿ ಮತ್ತು ವಿಶೇಷವಾಗಿ ಧನತ್ರಯೋದಶಿ-ದೀಪಾವಳಿಯ ದಿನದಂದು ಅದನ್ನು ಸ್ವಚ್ಛಗೊಳಿಸಿ.

4. ಪೂರ್ವ ದಿಕ್ಕಿನಿಂದ ಸಕಾರಾತ್ಮಕ ಶಕ್ತಿ ಮನೆ ಪ್ರವೇಶಿಸುತ್ತದೆ - ಸೂರ್ಯನು ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಾನೆ ಮತ್ತು ಮನೆಯಲ್ಲಿ ಸಕಾರಾತ್ಮಕತೆಯ ಸಂವಹನವೂ ಈ ದಿಕ್ಕಿನಿಂದಲೇ ನಡೆಯುತ್ತದೆ. ಆದ್ದರಿಂದ, ಮನೆಯ ಪೂರ್ವ ದಿಕ್ಕು ಯಾವಾಗಲೂ ಸ್ವಚ್ಛವಾಗಿರಬೇಕು. ಧನತ್ರಯೋದಶಿ ಮತ್ತು ದೀಪಾವಳಿಯ ದಿನದಂದು, ಬೆಳಿಗ್ಗೆ ಬೇಗನೆ ಎದ್ದು ಮನೆಯ ಪೂರ್ವ ದಿಕ್ಕನ್ನು ಸ್ವಚ್ಛಗೊಳಿಸಿ.

5. ದೇವಿ ಲಕ್ಷ್ಮಿಯ ಕೃಪೆ ಖಂಡಿತ ಸಿಗಲಿದೆ - ಮನೆಯ ಈ ಮೂರು ಸ್ಥಳಗಳು ಸ್ವಚ್ಛವಾಗಿದ್ದರೆ, ಲಕ್ಷ್ಮಿಯು ಮನೆಯಲ್ಲಿ ನೆಲೆಸುತ್ತಾಳೆ. ಅಲ್ಲದೆ, ಮನೆಯಲ್ಲಿ ಯಾವಾಗಲೂ ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ನೆಲೆಸಿ ಮನೆಯ ಸದಸ್ಯರೆಲ್ಲರೂ ಕೂಡ ಪ್ರಗತಿ ಸಾಧಿಸುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link