Uric Acid: ಯೂರಿಕ್ ಆಸಿಡ್ ಇದ್ದವರಿಗೆ ಈ ತರಕಾರಿಗಳು ವಿಷಕ್ಕೆ ಸಮಾನ!
ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದಾಗ ಕೀಲುಗಳಲ್ಲಿ ಅಸಹನೀಯ ನೋವುಂಟಾಗುತ್ತದೆ. ಯೂರಿಕ್ ಆಸಿಡ್ ಸಮಸ್ಯೆ ಇರುವವರಿಗೆ ಕೆಲವು ಸೊಪ್ಪು ತರಕಾರಿಗಳನ್ನು ವಿಷಕ್ಕೆ ಸಮಾನ ಎನ್ನಲಾಗುತ್ತದೆ. ಹಾಗಾಗಿ, ಯೂರಿಕ್ ಆಸಿಡ್ ಸಮಸ್ಯೆ ಇರುವವರು ಈ ತರಕಾರಿಗಳನ್ನು ತಿನ್ನಲೇಬಾರದು!
ಹಲವು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಪಾಲಕ್ ಸೊಪ್ಪು ಆರೋಗ್ಯಕ್ಕೆ ಪ್ರಯೋಜನಕಾರಿಯೇ ಆಗಿದ್ದರು, ಇದರಲ್ಲಿ ಪ್ಯೂರಿನ್ ಮಟ್ಟ ಹೇರಳವಾಗಿದ್ದು ಇದು ದೇಹದಲ್ಲಿ ಯೂರಿಕ್ ಆಮ್ಲವಾಗಿ ಪರಿವರ್ತನೆಯಾಗುತ್ತದೆ.
ದೈನಂದಿನ ಆಹಾರದಲ್ಲಿ ಹೆಚ್ಚಾಗಿ ಬಳಸಲ್ಪಡುವ ಟೊಮಾಟೊ ಕೂಡ ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣವನ್ನು ಹೆಚ್ಚಿಸುತ್ತದೆ.
ಹೂಕೋಸು ಹಾಗೂ ಬ್ರೊಕೊಲಿ ಅಂತಹ ತರಕಾರಿಗಳಲ್ಲಿಯೂ ಕೂಡ ಪ್ಯೂರಿನ್ ಮಟ್ಟ ಹೆಚ್ಚಾಗಿದ್ದು ಇದು ಸಹ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ.
ಮಶ್ರೂಮ್/ಅಣಬೆಗಳಲ್ಲಿಯೂ ಪ್ಯೂರಿನ್ ಹೇರಳವಾಗಿದ್ದು ಇದೂ ಸಹ ಯೂರಿಕ್ ಆಸಿಡ್ ಸಮಸ್ಯೆ ಇರುವವರಲ್ಲಿ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಬೀಟ್ರೂಟ್ ಸೇವನೆಯಿಂದ ರಕ್ತದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾಗಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.