ಡಯಾಬಿಟಿಸ್ ಎಷ್ಟೇ ಹೈ ಆಗಿದ್ರೂ ಈ ತರಕಾರಿಗಳನ್ನು ತಿಂದರೆ ಥಟ್ಟನೆ ಕಡಿಮೆಯಾಗುತ್ತೆ ಬ್ಲಡ್ ಶುಗರ್.. !
ಮಧುಮೇಹ ರೋಗಿಗಳಲ್ಲಿ ಶುಗರ್ ಲೆವೆಲ್ ಆಗಾಗ್ಗೆ ಹೆಚ್ಚಾಗುತ್ತದೆ. ಆದರೆ, ನಿಮ್ಮ ದೈನಂದಿನ ಆಹಾರಗಳಲ್ಲಿ ಕೆಲವು ತರಕಾರಿಗಳನ್ನು ತಿನ್ನುವುದರಿಂದ ಬ್ಲಡ್ ಶುಗರ್ ಎಷ್ಟೇ ಹೈ ಆಗಿದ್ದರೂ ಕೂಡ ಸುಲಭವಾಗಿ ಕಂಟ್ರೋಲ್ ಮಾಡಬಹುದು. ನೈಸರ್ಗಿಕವಾಗಿ ಶುಗರ್ ಕಂಟ್ರೋಲ್ ಮಾಡಬಲ್ಲ ತರಕಾರಿಗಳೆಂದರೆ...
ಹಾಗಲಕಾಯಿ: ರುಚಿಯಲ್ಲಿ ಕಹಿ ಎಂಬ ಕಾರಣಕ್ಕೆ ಕೆಲವರು ಹಾಗಲಕಾಯಿ ಹೆಸರು ಕೇಳಿದ್ರೆ ಮೂಗು ಮುರಿತಾರೆ. ಆದರೆ, ಇದರಲ್ಲಿ ಚರಂಟಿನ್ ಮತ್ತು ಪಾಲಿಪೆಪ್ಟೈಡ್-ಪಿ ಸಂಯುಕ್ತಗಳಿದ್ದು ಇದರ ಸೇವನೆಯಿಂದ ಶುಗರ್ ನಿಯಂತ್ರಣದಲ್ಲಿರುತ್ತದೆ.
ಪಾಲಕ್ ಸೊಪ್ಪು: ಪಾಲಕ್ ಸೊಪ್ಪು ಮೆಗ್ನೀಸಿಯಮ್ ಮತ್ತು ಫೈಬರ್ನಲ್ಲಿ ಹೆರಳವಾಗಿರುವುದರಿಂದ ಇದರ ಸೇವನೆಯಿಂದ ದೇಹದಲ್ಲಿ ಶುಗರ್ ಲೆವೆಲ್ ಸ್ಥಿರತೆಗೊಳ್ಳುತ್ತದೆ. ಜೊತೆಗೆ ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಕೂಡ ಸುಧಾರಿಸುತ್ತದೆ.
ಬೆಂಡೆಕಾಯಿ: ಕರಗುವ ಫೈಬರ್ನಲ್ಲಿ ಪ್ಯಾಕ್ ಮಾಡಲಾಗಿರುವ ಬೆಂಡೆಕಾಯಿ ದೇಹವು ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಿ ಬ್ಲಡ್ ಶುಗರ್ ಸ್ಪೈಕ್ ತಡೆಯುತ್ತದೆ. ಹಾಗಾಗಿ ಮಧುಮೆಹಿಗಳಿಗೆ ಇದೊಂದು ಅತ್ಯುತ್ತಮವಾದ ತರಕಾರಿ ಆಗಿದೆ.
ಬ್ರೊಕೊಲಿ: ಬ್ರೊಕೊಲಿಯಲ್ಲಿ ಸಲ್ಫೋರಾಫೇನ್ ಎಂಬ ಸಂಯುಕ್ತವಿದ್ದು ಇದು ಇನ್ಸುಲಿನ್ ಪ್ರತಿರೋಧವನ್ನು ಸುಧಾರಿಸಿ ಬ್ಲಡ್ ಶುಗರ್ ಹೆಚ್ಚಾಗುವುದನ್ನು ನಿಯಂತ್ರಿಸುತ್ತದೆ. ಹಾಗಾಗಿ, ಮಧುಮೇಹಿಗಳು ಈ ತರಕಾರಿಯನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದು.
ಸಿಹಿಗೆಣಸು: ಸಿಹಿಗೆಣಸಿನಲ್ಲಿ ಅಡಕವಾಗಿರುವ ಕಡಿಮೆ-ಗ್ಲೈಸೆಮಿಕ್ ಸೂಚ್ಯಂಕವು ಬ್ಲಡ್ ಶುಗರ್ ಸ್ಥಿರವಾಗಿರುವಂತೆ ಮಾಡುತ್ತದೆ. ಹಾಗಾಗಿ, ಮಧುಮೆಹಿಗಳಿಗೆ ಈ ತರಕಾರಿ ವರದಾನವಿದ್ದಂತೆ ಎನ್ನಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.