ವೆಂಕಟೇಶ್‌ ಅಯ್ಯರ್‌-ಪ್ರಿಯಾಂಕಾ ಜವಾಲ್ಕರ್ ಲವ್ವಿಡವ್ವಿ! ವದಂತಿಗೆ ಪುರಾವೆ ನೀಡುತ್ತಿದೆ ಈ ಕಮೆಂಟ್‌

Sat, 16 Jul 2022-11:25 am,

ಟೀಂ ಇಂಡಿಯಾದ ಆಟಗಾರ ವೆಂಕಟೇಶ್ ಅಯ್ಯರ್ ಮತ್ತು ದಕ್ಷಿಣ ಭಾರತದ ನಟಿ ಪ್ರಿಯಾಂಕಾ ಜವಾಲ್ಕರ್ ಅವರ ಸಂಭಾಷಣೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೆಂಕಟೇಶ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿಲ್ಲದಿದ್ದರೂ, ತೆಲುಗು ನಟಿ ಪ್ರಿಯಾಂಕಾ ಜವಾಲ್ಕರ್ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಇದು ಸಾಕಷ್ಟು ವೈರಲ್ ಆಗಿದೆ.

ಪ್ರಿಯಾಂಕಾ ಜವಾಲ್ಕರ್ ಅವರ ಒಂದು ಕಮೆಂಟ್‌, ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ಚರ್ಚೆ ಪ್ರಾರಂಭವಾಗುವಂತೆ ಮಾಡಿದೆ. ಪ್ರಿಯಾಂಕಾ ಫೋಟೋ ಮೇಲೆ ಅಯ್ಯರ್ 'ಕ್ಯೂಟ್' ಎಂದು ಬರೆದಿದ್ದಾರೆ. ಅಯ್ಯರ್ ಅವರ ಈ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ, 'ಯಾರು? ನೀನು?' ಎಂದು ಹೇಳಿದ್ದಾರೆ. 

29 ವರ್ಷದ ಪ್ರಿಯಾಂಕಾ ಜವಾಲ್ಕರ್ ಆಂಧ್ರಪ್ರದೇಶದವರು. ಪ್ರಿಯಾಂಕಾ ಜವಾಲ್ಕರ್ 2017 ರಲ್ಲಿ ಚಿತ್ರರಂಗಕ್ಕೆ  ಪಾದಾರ್ಪಣೆ ಮಾಡಿದರು. ಅವರ ಮೊದಲ ಚಿತ್ರ ಕಾಲಾ ವರಂ ಆಯೆ. ಬಳಿಕ ಟ್ಯಾಕ್ಸಿವಾಲಾ, ತಿಮರುಸು ಮತ್ತು ಎಸ್‌ಆರ್ ಕಲ್ಯಾಣಮಂಟಪಂ ಚಿತ್ರಗಳಲ್ಲೂ ಪ್ರಿಯಾಂಕಾ ನಟಿಸಿದ್ದಾರೆ.

ವೆಂಕಟೇಶ್ ಅಯ್ಯರ್ ಕಳೆದ ಐಪಿಎಲ್ ಸೀಸನ್‌ನಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು. ಅಯ್ಯರ್ ಕಳೆದ ಐಪಿಎಲ್ ಋತುವಿನಲ್ಲಿ 10 ಪಂದ್ಯಗಳನ್ನು ಆಡಿದ್ದು, 41.11 ರ ಸರಾಸರಿಯಲ್ಲಿ 4 ಅರ್ಧ ಶತಕಗಳನ್ನು ಒಳಗೊಂಡಂತೆ 370 ರನ್‌ ಗಳಿಸಿದ್ದಾರೆ. ಕೊಲ್ಕತ್ತಾ ನೈಟ್‌ ರೈಡರ್ಸ್‌ ಈ ಋತುವಿನಲ್ಲಿ 8 ಕೋಟಿ ರೂ.ಗೆ ಈ ಯುವ ಆಲ್ ರೌಂಡರ್ ವೆಂಕಟೇಶ್‌ ಅಯ್ಯರ್‌ನನ್ನು ಖರೀದಿ ಮಾಡಿತ್ತು.

ವೆಂಕಟೇಶ್ ಅಯ್ಯರ್ ಟೀಂ ಇಂಡಿಯಾ ಪರ 2 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಈ ಓಡಿಐ ಪಂದ್ಯಗಳಲ್ಲಿ 12 ರ ಸರಾಸರಿಯಲ್ಲಿ 24 ರನ್ ಗಳಿಸಿದ್ದಾರೆ. ಜೊತೆಗೆ 9 ಟಿ20 ಪಂದ್ಯಗಳಲ್ಲಿ 33.25 ಸರಾಸರಿಯಲ್ಲಿ 133 ರನ್‌ ಬಾರಿಸಿದ್ದಾರೆ ಹಾಗೂ 5 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link