ಶುಕ್ರ ಬುಧರಿಂದ ಮೂರು ರಾಶಿಯವರಿಗೆ ಮಣ್ಣೂ ಹೊನ್ನಾಗುವ ಕಾಲ, ಅದೃಷ್ಟದ ಬೆಂಬಲದಿಂದ ಬೆನ್ನತ್ತಿ ಬರುವುದು ರಾಜವೈಭೋಗ
2025ರ ಜನವರಿ 04ರಂದು ಶುಕ್ರ ಶತಭಿಷಾ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಅದೇ ದಿನ ಬುಧ ಧನು ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
ವರ್ಷದ ಆರಂಭದಲ್ಲೇ ಎರಡು ಶುಭ ಗ್ರಹಗಳ ಸಂಚಾರದಿಂದ ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿದ್ದು, ಮಣ್ಣೂ ಕೂಡ ಹೊನ್ನಾಗುವ ಸಮಯ. ರಾಜವೈಭೋಗವೇ ಬೆನ್ನೇರುವುದು ಎನ್ನಲಾಗುತ್ತಿದೆ.
ಕರ್ಕಾಟಕ ರಾಶಿ: ಅದೃಷ್ಟದ ಬೆಂಬಲದಿಂದ ನೀವು ಕೈ ಹಾಕಿದ ಕೆಲಸಗಳಲ್ಲೆಲ್ಲಾ ಬಾರೀ ಯಶಸ್ಸನ್ನು ಕಾಣುವಿರಿ. ವ್ಯವಹಾರದಲ್ಲಿ ನಿಮ್ಮ ನಿರೀಕ್ಷೆಗೂ ಮೀರಿದ ಲಾಭದಿಂದಾಗಿ ಹಣದ ಸುರಿಮಳೆಯೇ ಆಗಲಿದೆ. ಆರೋಗ್ಯವೂ ಉತ್ತಮವಾಗಿರುತ್ತದೆ.
ವೃಶ್ಚಿಕ ರಾಶಿ: ಶುಕ್ರ ಬುಧ ಗೋಚಾರದಿಂದ ಈ ರಾಶಿಯ ಉದ್ಯೋಗಸ್ಥರಿಗೆ ಉನ್ನತ ಹುದ್ದೆಯನ್ನು ಅಲಂಕರಿಸುವ ಯೋಗವಿದೆ. ಉದ್ಯೋಗ ರಂಗದಲ್ಲಿ ಭಾರೀ ಯಶಸ್ಸಿನ ಜೊತೆಗೆ ವೇತನ ಹೆಚ್ಚಳ ಸಂಭವವೂ ಇದೆ. ಹೊಸ ಮನೆ, ವಾಹನ ಖರೀದಿ ಯೋಗವಿದ್ದು, ಸುಖದ ಸುಪ್ಪತ್ತಿಗೆಯಲ್ಲೇ ಜೀವನ ಸಾಗಿಸುವಿರಿ.
ಧನು ರಾಶಿ: ಶುಕ್ರ ಬುಧ ಗ್ರಹಗಳ ವಿಶೇಷ ಆಶೀರ್ವಾದದಿಂದ ವೃತ್ತಿ ರಂಗದಲ್ಲಿ ಮಾನಸಿಕ ಒತ್ತಡಗಳು ಕಡಿಮೆಯಗಲಿವೆ. ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಆರೋಗ್ಯ ಸುಧಾರಿಸಲಿದೆ. ವ್ಯಾಪಾರಸ್ಥರು ನಿಮ್ಮ ಹಳೆಯ ಹೂಡಿಕೆಗಳಿಂದ ಬಂಪರ್ ಲಾಭವನ್ನು ಗಳಿಸುವಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.