2025ರಲ್ಲಿ ಶುಕ್ರ-ರಾಹು ಸಂಯೋಗದಿಂದ ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಠಾತ್ ಧನಲಾಭ, ಹೆಜ್ಜೆ ಹೆಜ್ಜೆಗೂ ವಿಜಯಮಾಲೆ!

Thu, 05 Dec 2024-7:07 am,

ಐಷಾರಾಮಿ ಜೀವನದ ಅಂಶ ಶುಕ್ರನು ಹೊಸ ವರ್ಷದ ಮೊದಲ ತಿಂಗಳಲ್ಲಿ ಅರ್ಥಾತ್ 2025ರ ಜನವರಿ 28ರಂದು ಮೀನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. 

ಈಗಾಗಲೇ ರಾಹು ಮೀನ ರಾಶಿಯಲ್ಲಿ ಸಂಚರಿಸುತ್ತಿರುವುದರಿಂದ ಶುಕ್ರ ಗೋಚಾರದಿಂದ ಮೀನ ರಾಶಿಯಲ್ಲಿ ಶುಕ್ರ-ರಾಹು ಯುತಿ ನಿರ್ಮಾಣವಾಗಲಿದೆ. 

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾಹು ಶುಕ್ರನ ಶಿಷ್ಯನಾಗಿದ್ದು, ದುಷ್ಟಗ್ರಹವೇ ಆದರೂ ಶುಕ್ರನೊಂದಿಗೆ ಇದ್ದಾಗ ರಾಹು ಕೂಡ ಶುಭ ಫಲಗಳನ್ನೇ ನೀಡುತ್ತಾನೆ. ಹಾಗಾಗಿ ಶುಕ್ರ ರಾಹು ಯುತಿಯು ಕೆಲವು ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಠಾತ್ ಧನಲಾಭ, ಹೆಜ್ಜೆ ಹೆಜ್ಜೆಗೂ ವಿಜಯಮಾಲೆಯನ್ನು ನೀಡಲಿದೆ ಎನ್ನಲಾಗುತ್ತದೆ. 

ಕರ್ಕಾಟಕ ರಾಶಿ:  ಶುಕ್ರ ರಾಹು ಸಂಯೋಗವು ಈ ರಾಶಿಯವರಿಗೆ ಕಂಡ ಕನಸೆಲ್ಲಾ ನನಸಾಗುವ ಸಮಯವಾಗಿದೆ. ಆರೋಗ್ಯ ಸಮಸ್ಯೆಗಳು ದೂರಾಗಿ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ವೃತ್ತಿ ಬದುಕಿನಲ್ಲಿ ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಯಶಸ್ಸು ಲಭಿಸಿ, ನಿಮ್ಮ ಖ್ಯಾತಿ ಹೆಚ್ಚಾಗಲಿದೆ. 

ತುಲಾ ರಾಶಿ:  2025ರ ವರ್ಷ ಈ ರಾಶಿಯವರಿಗೆ ಸಂತೋಷವನ್ನು ಹೊತ್ತು ತರಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಸಿಗುವ ಸಂಭವವಿದ್ದು, ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಪ್ರೀತಿ ಮತ್ತು ವೈವಾಹಿಕ ಬದುಕಿನಲ್ಲಿ ಉತ್ತಮ ಸಮಯ. ಕೌಟುಂಬಿಕ ಸಮಸ್ಯೆಗಳು ದೂರವಾಗಿ, ಸಂತೋಷದ ಸಮಯವನ್ನು ಆನಂದಿಸುವಿರಿ.

ವೃಶ್ಚಿಕ ರಾಶಿ:  ಶುಕ್ರ ರಾಹು ಸಂಯೋಗವು ಈ ರಾಶಿಯವರಿಗೆ ಲಾಭದಾಯಕವಾಗಿದ್ದು ಬಹಳ ದಿನಗಳಿಂದ ನಿಮ್ಮ ಜೀವನದಲ್ಲಿ ಎದುರಾಗಿದ್ದ ವೃತ್ತಿ, ವೈಯಕ್ತಿಕ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು, ಹೊಸ ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ನಿಮ್ಮ ನೆಚ್ಚಿನ ಉದ್ಯೋಗ ಸಿಗಲಿದೆ. ಶತ್ರುಗಳ ವಿರುದ್ಧ ಜಯ ನಿಮ್ಮದೇ ಆಗಿರಲಿದೆ. ದಿಢೀರ್ ಧನಲಾಭದಿಂದ ಆರ್ಥಿಕ ಅಭಿವೃದ್ಧಿ ಕಾಣುವಿರಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link