ಇನ್ನೇನು 8 ದಿನದಲ್ಲಿ ಈ ರಾಶಿಯವರಿಗೆ ಶುಕ್ರದೆಸೆ ಶುರು: ಅದೃಷ್ಟ, ಸಂಪತ್ತು, ಸ್ಥಾನ, ಪ್ರತಿಷ್ಠೆ ಒಮ್ಮೆಗೆ ಅರಸಿ ಬರುತ್ತೆ!

Thu, 29 Jun 2023-5:53 am,

ಜುಲೈ 7 ರಂದು, ಸಂಪತ್ತು, ಐಷಾರಾಮಿ ಬದುಕು ಮತ್ತು ದೈಹಿಕ ಸಂತೋಷದ ಅಂಶವಾದ ಶುಕ್ರನು ತನ್ನ ಸ್ಥಾನವನ್ನು ಬದಲಾಯಿಸಲಿದ್ದಾನೆ. ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸಿದಾಗ ಕೆಲವು ರಾಶಿಗಳು ವಿಶೇಷ ಪ್ರಯೋಜನಗಳನ್ನು ಪಡೆಯುತ್ತವೆ.

ಮೇಷ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ಗೋಚರವು ಮೇಷ ರಾಶಿಯವರಿಗೆ ವಿಶೇಷವಾಗಿ ಫಲಕಾರಿಯಾಗಲಿದೆ. ಶುಕ್ರನ ಸಂಚಾರದಿಂದ ಈ ರಾಶಿಯವರಿಗೆ ಕಂಕಣ ಬಲ ಕೂಡಿ ಬರಲಿದೆ. ಮನೆಯಲ್ಲಿ ಶುಭ ಕಾರ್ಯ ನಡೆಯುವುದು. ಈ ಸಮಯದಲ್ಲಿ ಕುಟುಂಬದ ಸಂಪೂರ್ಣ ಬೆಂಬಲವಿದೆ.

ಸಿಂಹ ರಾಶಿ: ಶುಕ್ರ ಸಂಕ್ರಮಣದಿಂದಾಗಿ ಸಿಂಹ ರಾಶಿಯ ಜನರ ಜೀವನದ ಮೇಲೆ ಅದರ ಸ್ಪಷ್ಟ ಪರಿಣಾಮ ಗೋಚರಿಸುತ್ತದೆ. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಉನ್ನತ ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ. ಅಷ್ಟೇ ಅಲ್ಲ, ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ.

ಧನು ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರ ಸಂಕ್ರಮಣದ ಅವಧಿಯನ್ನು ಧನು ರಾಶಿಯವರಿಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಈ ರಾಶಿಯವರಿಗೆ ತಂದೆಯ ಸಂಪೂರ್ಣ ಬೆಂಬಲ ದೊರೆಯುತ್ತದೆ. ಶಿಕ್ಷಕರ ಆಶೀರ್ವಾದ ಸಿಗಲಿದೆ. ಧೈರ್ಯ ಮತ್ತು ಶೌರ್ಯವು ಹೆಚ್ಚಾಗುತ್ತದೆ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link