Venus Transit 2023: ದೀಪಾವಳಿಗೂ ಮೊದಲೇ ಬೆಳಗಲಿದೆ ಈ 3 ರಾಶಿಯವರ ಭಾಗ್ಯ ಜ್ಯೋತಿ, ಸುರಿಯಲಿದೆ ಹಣದ ಮಳೆ

Tue, 17 Oct 2023-6:25 am,

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಶುಕ್ರನನ್ನು ಸಂಪತ್ತಿನ ಅಧಿಪತಿ, ತೃಪ್ತಿ, ಉತ್ತಮ ಆರೋಗ್ಯ ಮತ್ತು ತೀಕ್ಷ್ಣ ಬುದ್ಧಿವಂತಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. 

ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರ ಗ್ರಹವು ಬಲವಾಗಿದ್ದಾಗ ಆತ ವೃತ್ತಿ-ವ್ಯವಹಾರದಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣುತ್ತಾನೆ. ಉತ್ತಮ ಆರೋಗ್ಯವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. 

ಅದೇ ರೀತಿ ವ್ಯಕ್ತಿಯ ಜಾತಕದಲ್ಲಿ ಶುಕ್ರ ಅಶುಭ ಸ್ಥಾನದಲ್ಲಿದ್ದಾಗ ಆತ ಜೀವನದಲ್ಲಿ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಾನೆ. ಯಾವುದೇ ಕೆಲಸವೂ ಕೈಗೂಡುವುದಿಲ್ಲ ಎಂತಲೂ ಹೇಳಲಾಗುತ್ತದೆ. 

ಇದೀಗ ಶುಕ್ರನು ಇನ್ನೆರಡು ವಾರಗಳ ಬಳಿಕ ತನ್ನ ರಾಶಿ ಚಕ್ರವನ್ನು ಬದಲಾಯಿಸಲಿದ್ದಾನೆ.  

ಶುಕ್ರನು 3 ನವೆಂಬರ್ 2023 ರಂದು ಕನ್ಯಾರಾಶಿಗೆ ಪ್ರವೇಶಿಸಲಿದ್ದಾನೆ. ಇದರ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಶುಕ್ರ ರಾಶಿ ಬದಲಾವಣೆಯಿಂದಾಗಿ ದೀಪಾವಳಿಗೂ ಮೊದಲೇ ಮೂರು ರಾಶಿಯವರ ಭಾಗ್ಯ ಜ್ಯೋತಿ ಬೆಳಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಚಕ್ರಗಳು ಯಾವುವೆಂದರೆ... 

ಶುಕ್ರ ಸಂಚಾರದ ಪ್ರಭಾವದಿಂದಾಗಿ ಮಿಥುನ ರಾಶಿಯವರು ತೀರ್ಥಯಾತ್ರೆಗೆ ತೆರಳುವ ಅವಕಾಶವನ್ನು ಪಡೆಯಬಹುದು. ವೃತ್ತಿ ಬದುಕಿನಲ್ಲಿ ನೀವು ಬಯಸಿದಂತೆ ಉನ್ನತ ಸ್ಥಾನವನ್ನು ಅಲಂಕರಿಸಬಹುದು. ವ್ಯಾಪಾರಸ್ಥರು ದೀಪಾವಳಿಯ ಸಮಯದಲ್ಲಿ ಭರ್ಜರಿ ಲಾಭವನ್ನು ಕಾಣಬಹುದು. 

ಶುಕ್ರ ರಾಶಿ ಬದಲಾವಣೆಯ ಪರಿಣಾಮದಿಂದಾಗಿ ಕನ್ಯಾ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಖ್ಯಾತಿ ಹೆಚ್ಚಾಗಲಿದೆ. ನಿಮ್ಮ ಸಂಬಳದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ, ನೀವು ಪ್ರತಿ ಹೆಜ್ಜೆಯಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನೀವು ಪೂರ್ವಜರ ಆಸ್ತಿಯಿಂದಲೂ ಲಾಭ ಪಡೆಯಬಹುದು. 

ಶುಕ್ರ ಗೋಚಾರ 2023ರ ಪ್ರಭಾವದಿಂದಾಗಿ ವೃಶ್ಚಿಕ ರಾಶಿಯವರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ನೀವು ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಉತ್ತಮ ಕಂಪನಿಯಿಂದ ಆಫರ್ ಲೆಟರ್ ಪಡೆಯುವ ಸಾಧ್ಯತೆ ಇದೆ.  ವ್ಯಾಪಾರಸ್ಥರು ಹೆಚ್ಚು ಲಾಭವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಉಳಿತಾಯ ಮೊದಲಿಗಿಂತ ಹೆಚ್ಚಾಗಲಿದೆ. ಉತ್ತಮ ಆರೋಗ್ಯ ಭಾಗ್ಯವೂ ಇದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link