Venus Transit 2024: ಸಿಂಹದಲ್ಲಿ ಶುಕ್ರನ ಪ್ರವೇಶ; ಈ 3 ರಾಶಿಯವರಿಗೆ ಸಿಗಲಿದೆ ಅದೃಷ್ಟ!

Sat, 20 Jul 2024-9:27 am,

ಶುಕ್ರನು ಪ್ರಸ್ತುತ ಕರ್ಕಾಟಕದಲ್ಲಿ ಸಂಚರಿಸುತ್ತಿದ್ದು, ಜುಲೈ 31ರಂದು ಸಿಂಹ ರಾಶಿಯನ್ನು ಪ್ರವೇಶಿಸುತ್ತದೆ. ಶುಕ್ರನು ಸಿಂಹರಾಶಿಗೆ ಪ್ರವೇಶಿಸುವುದರಿಂದ ಎಲ್ಲಾ ರಾಶಿಗಳ ಮೇಲೂ ಅದರ ಪ್ರಭಾವ ಕಂಡುಬರುತ್ತದೆ. ಶುಕ್ರನು ಸಿಂಹರಾಶಿಗೆ ಪ್ರವೇಶ ಮಾಡುವುದರಿಂದ ಕೆಲವರ ಅದೃಷ್ಟ ಖುಲಾಯಿಸಲಿದೆ. ಸಿಂಹ ರಾಶಿಯಲ್ಲಿ ಶುಕ್ರನ ಸಂಕ್ರಮಣದಿಂದ ಯಾವ ರಾಶಿಯವರಿಗೆ ಅದೃಷ್ಟದ ಬೆಂಬಲ ದೊರೆಯಲಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ. 

ಈ ಸಮಯದಲ್ಲಿ ಶುಕ್ರನು ಕರ್ಕಾಟಕ ರಾಶಿಯ 2ನೇ ಮನೆಗೆ ಹೋಗುತ್ತದೆ. ಹೀಗಾಗಿ ಕರ್ಕಾಟಕ ರಾಶಿಯವರು ಸಾಕಷ್ಟು ಸುಖ-ಸಂಪತ್ತನ್ನು ಪಡೆಯುತ್ತಾರೆ. ಈ ರಾಶಿಯವರ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ನಿಮ್ಮ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗಿಗಳಿಗೆ ಬಡ್ತಿಯ ಅವಕಾಶವಿರುತ್ತದೆ. ಅದೃಷ್ಟದ ಬೆಂಬಲ ಇರುವುದರಿಂದ ವ್ಯಾಪಾರಿಗಳು ಸಾಕಷ್ಟು ಲಾಭ ಪಡೆಯಬಹುದು. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಏರಿಕೆ ಕಂಡುಬರಲಿದೆ. ಸಂಗಾತಿ ಜೊತೆಗಿನ ಸಂಬಂಧ ಆಹ್ಲಾದಕರವಾಗಿರುತ್ತದೆ. ನಿಮ್ಮ ಪ್ರೇಮ ಜೀವನ ಸುಖಮಯವಾಗಿರುತ್ತದೆ ಮತ್ತು ಆರೋಗ್ಯ ಸಮಸ್ಯೆಗಳು ಪರಿಹಾರವಾಗಲಿವೆ.

ಶುಕ್ರನು ಸಿಂಹ ರಾಶಿಯ ಮೊದಲ ಮನೆಗೆ ಸಾಗಲಿದೆ. ಇದು ಈ ರಾಶಿಯವರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ನೀಡುತ್ತದೆ. ನೀವು ನಿಮ್ಮ ಗುರಿಯನ್ನು ಸುಲಭವಾಗಿ ತಲುಪುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಸ್ಪರ್ಧಿಗಳು ನಿಮಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಾರೆ. ಆದರೆ ನೀವು ಅದರಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ವೃತ್ತಿಯಲ್ಲಿ ನೀವು ಅಧಿಕ ಆರ್ಥಿಕ ಲಾಭವನ್ನು  ಪಡೆಯುತ್ತೀರಿ. ಹೊಸ ಆದಾಯದ ಮೂಲಗಳು ಸಿಗಲಿವೆ. ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಮತ್ತು ಪ್ರೇಮ ಜೀವನ ಚೆನ್ನಾಗಿರುತ್ತದೆ. ನಿಮ್ಮ ದಾಂಪತ್ಯ ಜೀವನವು ಮಧುರವಾಗಿರುತ್ತದೆ.

ಶುಕ್ರನು ಕುಂಭ ರಾಶಿಯ 7ನೇ ಮನೆಗೆ ಹೋಗಲಿದೆ. ಹೀಗಾಗಿ ಈ ರಾಶಿಯವರು ತಮ್ಮ ಪ್ರೀತಿಯ ಜೀವನದ ಮೇಲೆ ಗಮನ ಹರಿಸಬೇಕು. ವೃತ್ತಿಪರವಾಗಿ ನೀವು ಮತ್ತಷ್ಟು ಪ್ರಗತಿ ಸಾಧಿಸುತ್ತೀರಿ. ವಿದೇಶದಲ್ಲಿ ಕೆಲಸ ಮಾಡುವ ಆಸೆಯಿದ್ದರೆ ಅದು ಈಡೇರಲಿದೆ. ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡುವ ಅವಕಾಶ ದೊರೆಯಲಿದೆ. ಹೊಸ ಆದಾಯದ ಮೂಲಗಳು ಸಿಗಲಿವೆ. ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ ದೊರೆಯಲಿದೆ. ನೀವು ಈಗಾಗಲೇ ಹೂಡಿಕೆ ಮಾಡಿದ್ದರೆ, ಅದರಿಂದ ಅಧಿಕ ಆದಾಯ ಪಡೆಯುವ ಸಾಧ್ಯತೆಯಿದೆ. ನಿಮ್ಮ ಎಲ್ಲಾ ಕೆಲಸದಲ್ಲೂ ಧನಲಾಭ ದೊರೆಯಲಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link