Shukra Gochar 2024: ತಿಂಗಳಾಂತ್ಯದಲ್ಲಿ ಸಂಪತ್ತುಕಾರಕನ ರಾಶಿ ಬದಲಾವಣೆ, 5 ರಾಶಿಯವರಿಗೆ ಶುಕ್ರದೆಸೆ

Wed, 13 Mar 2024-6:40 am,

ಜ್ಯೋತಿಷ್ಯ ಶಾಸ್ತ್ರದಲ್ಲಿ, ಸಂಪತ್ತು, ವೈಭವ, ಸಂತೋಷ, ಸಮೃದ್ಧಿ, ಐಷಾರಾಮಿ ಕಾರಕ ಗ್ರಹವೆಂದು ಪರಿಗಣಿಸಲಾಗಿರುವ ಶುಕ್ರನು ಮಾರ್ಚ್ 31, 2024ರಂದು ಸಂಜೆ 4.31ರ ಸುಮಾರಿಗೆ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಏಪ್ರಿಲ್ 24 ರವರೆಗೂ ಶುಕ್ರನು ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಇದರೊಂದಿಗೆ ಶುಕ್ರ-ರಾಹು ಸಂಯೋಗ ಏರ್ಪಡಲಿದೆ. ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಇದನ್ನು 5 ರಾಶಿಯವರಿಗೆ ಶುಭ ಸಮಯ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವೆಂದರೆ... 

ಶುಕ್ರ ಸಂಚಾರ, ಶುಕ್ರ-ರಾಹು ಯುತಿಯಿಂದಾಗಿ ,ಅರ್ಕಾಟಕ ರಾಶಿಯವರ ಅದೃಷ್ಟವೇ ಬದಲಾಗಲಿದೆ. ಈ ಸಮಯದಲ್ಲಿ ನಿಮಗೆ ಸಾಕಷ್ಟು ಅವಕಾಶಗಳು ಲಭ್ಯವಾಗಲಿದ್ದು, ಇವುಗಳನ್ನು ಸದುಪಯೋಗ ಪಡಿಸಿಕೊಳ್ಳುವುದರಿಂದ ಅಪಾರ ಯಶಸ್ಸನ್ನು ಗಳಿಸುವಿರಿ. ಹೊಸ ಉದ್ಯೋಗಾವಕಾಶಗಳಿಗಾಗಿ ಕಾಯುತ್ತಿರುವವರಿಗೆ ಇದು ಸುಸಮಯ. 

ಶುಕ್ರ ರಾಶಿ ಬದಲಾವಣೆಯಿಂದ ಸಿಂಹ ರಾಶಿಯವರು ಹಲವು ಮೂಲಗಳಿಂದ ಹಣ ಗಳಿಸುವ ಸಾಧ್ಯತೆ ಇದೇ. ನೀವು ಮ್ಯೂಚುವಲ್ ಫಂಡ್,  ಸ್ಟಾಕ್ ಮಾರ್ಕೆಟ್ ಸೇರಿದಂತೆ ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೆ ಲಾಭ ಗಳಿಸುವಿರಿ. ಈ ಸಮಯವು ಸಿಂಹ ರಾಶಿಯ ವ್ಯಾಪಾರಸ್ಥರಿಗೆ ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಲಿದೆ. 

ಶುಕ್ರ ರಾಶಿ ಪರಿವರ್ತನೆಯು ಕನ್ಯಾ ರಾಶಿಯವರಿಗೆ ವಿಶೇಷವಾಗಿ ವೃತ್ತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚಿ ಪ್ರಯೋಜನವನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದ್ದು ಪ್ರಮೋಷನ್ ಸಾಧ್ಯತೆ ಇದೆ. ಸ್ವಂತ ವ್ಯವಹಾರ ಮಾಡುತ್ತಿರುವವರಿಗೆ ಅದೃಷ್ಟದ ಸಂಪೂರ್ಣ ಬೆಂಬಲದಿಂದ ಬಂಪರ್ ಲಾಭವಾಗಲಿದೆ. 

ಶುಕ್ರ ಸಂಚಾರದಿಂದ ನಿರ್ಮಾಣವಾಗಲಿರುವ ಶುಕ್ರ-ರಾಹು ಯುತಿಯಿಂದ ವೃಶ್ಚಿಕ ರಾಶಿಯವರಿಗೆ ಒಂದರ್ಥದಲ್ಲಿ ಶುಕ್ರದೆಸೆಯೇ ಆರಂಭವಾಗಲಿದೆ. ಈ ವೇಳೆ ನಿಮ್ಮ ನೆಚ್ಚಿನ ಕೆಲಸ ದೊರೆಯಲಿದ್ದು ಶುಕ್ರನು ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸಲಿದ್ದಾನೆ. ಉದ್ಯೋಗ ಬದಲಾಯಿಸಲು ಪ್ರಯತ್ನಿಸುತ್ತಿರುವವರಿಗೆ ಅನೇಕ ರೀತಿಯ ಉದ್ಯೋಗದ ಆಫರ್‌ಗಳು ಲಭ್ಯವಾಗಲಿದೆ. ಹಣದ ಹರಿವು ಹೆಚ್ಚಾಗಲಿದ್ದು,  ಭವಿಷ್ಯಕ್ಕಾಗಿ ಸಂಪತ್ತನ್ನು ಕ್ರೋಢೀಕರಿಸುವಿರಿ. 

ಸ್ವ ರಾಶಿಯಲ್ಲಿ ಶುಕ್ರನ ಸಂಚಾರದಿಂದ ರೂಪುಗೊಳ್ಳಲಿರುವ ಶುಕ್ರ-ರಾಹು ಯುತಿಯು ಮೀನ ರಾಶಿಯವರ ಜೀವನದಲ್ಲಿ ಅಪಾರ ಧನ-ಸಂಪತ್ತನ್ನು ತರಲಿದೆ. ಈ ಸಂದರ್ಭದಲ್ಲಿ ನಿಮ್ಮ ಸಾಲಗಳನ್ನು ತ್ವರಿತವಾಗಿ ಮರುಪಾವತಿ ಮಾಡುವಿರಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ಕಾರ್ಯವೈಖರಿಯನ್ನು ಪ್ರಶಂಸಿಸಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link