ಮೌನಿ ಅಮಾವಾಸ್ಯೆ ದಿನವೇ ಮೀನ ರಾಶಿಗೆ ಶುಕ್ರನ ಪ್ರವೇಶ: ಈ ರಾಶಿಯವರಿಗೆ ತೆರೆಯಲಿದೆ ಭಾಗ್ಯದ ಬಾಗಿಲು, ಮಣ್ಣೂ ಹೊನ್ನಾಗುವ ಸಮಯ
)
ಇಂದು (ಜನವರಿ 29, 2025) ಮಾಘ ಮಾಸದ ಅಮಾವಾಸ್ಯೆ ಆಗಿದೆ. ಇದನ್ನು ದೇಶಾದ್ಯಂತ ಮೌನಿ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಇಂದು ಸುಮಾರು 10 ಕೋಟಿಗೂ ಹೆಚ್ಚು ಭಕ್ತರು ಗಂಗಾ ಸ್ನಾನ ಮಾಡಲಿದ್ದಾರೆ ಎನ್ನಲಾಗುತ್ತಿದೆ.
)
2025ರಲ್ಲಿ ಮೌನಿ ಅಮಾವಾಸ್ಯೆಯ ದಿನವೇ ಸಂಪತ್ತು, ವೈಭವಕಾರಕನಾದ ಶುಕ್ರ ರಾಶಿ ಪರಿವರ್ತನೆ ಹೊಂದಿ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ.
)
ಮೀನ ರಾಶಿಚಕ್ರ ಚಿಹ್ನೆಯಲ್ಲಿ ಶುಕ್ರನ ಪ್ರವೇಶದೊಂದಿಗೆ ಕೆಲವರ ಜೀವನದಲ್ಲಿ ಶುಕ್ರ ದೆಸೆಯಿಂದ ಅದೃಷ್ಟದ ಬಾಗಿಲುಗಳು ತೆರೆಯಲಿದ್ದು, ಮಣ್ಣೂ ಕೂಡ ಬಂಗಾರವಾಗುವ ಸಮಯ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಮೇಷ ರಾಶಿ: ಮೌನಿ ಅಮಾವಾಸ್ಯೆಯಂದು ಶುಕ್ರನ ಸಂಚಾರ ಈ ರಾಶಿಯವರಿಗೆ ವೃತ್ತಿ ರಂಗದಲ್ಲಿ ಹೊಸ ಹೊಸ ಅವಕಾಶಗಳನ್ನು ತರಲಿದೆ. ಆದಾಯ ಹೆಚ್ಚಾಗಲಿದ್ದು, ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಕೂಡ ಸುವರ್ಣ ಸಮಯ.
ಮಿಥುನ ರಾಶಿ: ಮೌನಿ ಅಮಾವಾಸ್ಯೆಯಂದು ಮೀನ ರಾಶಿಗೆ ಪ್ರವೇಶಿಸಲಿರುವ ಶುಕ್ರ ಈ ರಾಶಿಯವರ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ನೀಡಲಿದ್ದಾನೆ. ಉದ್ಯೋಗದಲ್ಲಿ ದೊಡ್ಡ ಪ್ರಸ್ತಾಪವನ್ನು ಪಡೆಯುವ ಸಂಭಾವವೈದೇ. ಸಮಾಜದಲ್ಲಿ ಕೀರ್ತಿ, ಮನ್ನಣೆ ಪಡೆಯುವಿರಿ.
ತುಲಾ ರಾಶಿ: ಮಾಘ ಅಮಾವಾಸ್ಯೆಯಲ್ಲಿ ಶುಕ್ರನ ಸಂಚಾರ ಈ ರಾಶಿಯವರಿಗೆ ಮನೆಯಲ್ಲಿ ಸಂತಸವನ್ನು ಹೆಚ್ಚಿಸಲಿದೆ. ವ್ಯವಹಾರಸ್ಥರಿಗೆ ಅಪಾರ ಲಾಭದ ಅವಕಾಶಗಳಿದ್ದು ಸಂಪತ್ತು ವೃದ್ಧಿಯಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.