ಹೊಸ ವರ್ಷದಿಂದ ಈ ರಾಶಿಯವರಿಗೆ ಶುಕ್ರ ದೆಸೆ... ಸಕಲವೂ ಕೈಗೂಡುವ ಪರ್ವಕಾಲ..!
ಜ್ಯೋತಿಷ್ಯದಲ್ಲಿ ಪ್ರೀತಿ ಆಕರ್ಷಣೆ, ಐಷಾರಾಮಿಯ ಅಂಶ ಎಂದು ಬಣ್ಣಿಸಲಾಗುವ ಶುಕ್ರನು ಡಿಸೆಂಬರ್ 28ರಂದು ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಇಲ್ಲಿ ಶನಿಯೊಂದಿಗೆ ಸಂಯೋಗ ಹೊಂದಲಿದ್ದಾನೆ.
ಕುಂಭ ರಾಶಿಗೆ ಶುಕ್ರನ ಪ್ರವೇಶದೊಂದಿಗೆ ಶನಿ ಶುಕ್ರರ ಸಂಯೋಗದಿಂದ ಕೆಲವು ರಾಶಿಯವರ ಬದುಕಿನಲ್ಲಿ ಶುಕ್ರ ದೆಸೆ ಆರಂಭವಾಗಲಿದೆ. ಈ ಸಮಯದಲ್ಲಿ ಅವರ ಕನಸುಗಳೆಲ್ಲಾ ನನಸಾಗಲಿದೆ ಎನ್ನಲಾಗುತ್ತಿದೆ.
ಮೇಷ ರಾಶಿ: ಹೊಸ ವರ್ಷದಲ್ಲಿ ಶುಕ್ರ ದೆಸೆಯಿಂದ ಈ ರಾಶಿಯವರಿಗೆ ಹಣಕಾಸಿನ ವಿಚಾರಗಳಲ್ಲಿ ಶುಭ ಸುದ್ದಿ ಸಿಗಲಿದೆ. ಹೂಡಿಕೆಯಿಂದ ಆದಾಯ ಹೆಚ್ಚಾಗಲಿದೆ. ಪ್ರೀತಿಯ ಸಂಬಂಧಗಳು ಗಟ್ಟಿಯಾಗಲಿವೆ. ವಿದ್ಯಾರ್ಥಿಗಳಿಗೂ ಕೂಡ ಶುಭ ಸಮಯ.
ಮಿಥುನ ರಾಶಿ: ಶುಕ್ರ ಗ್ರಹದ ಶುಭ ಪರಿಣಾಮದಿಂದ ಈ ರಾಶಿಯವರಿಗೆ ಜೀವನದ ಪ್ರತಿ ಆಯಾಮದಲ್ಲೂ ಅದೃಷ್ಟ ಖುಲಾಯಿಸಲಿದೆ. ಹೊಸ ಮನೆ, ವಾಹನ ಖರೀದಿಸುವ ಯೋಗವಿದೆ. ವ್ಯಾಪಾರ-ವ್ಯವಹಾರದಲ್ಲಿ ಭರ್ಜರಿ ಲಾಭವನ್ನು ನಿರೀಕ್ಷಿಸಬಹುದು.
ಸಿಂಹ ರಾಶಿ: ಹೊಸ ವರ್ಷದ ಆರಂಭದಲ್ಲೇ ಶುಕ್ರ ದೆಸೆ ನಿಮ್ಮ ಕೈ ಹಿಡಿಯಲಿದ್ದು ಪ್ರೀತಿಯಲ್ಲಿ ಯಶಸ್ಸನ್ನು ಪಡೆಯುವಿರಿ. ಹೊಸ ಪಾಲುದಾರಿಕೆ ವ್ಯವಹಾರವನ್ನು ಆರಂಭಿಸಲು ಶುಭ ಸಮಯ. ಇನ್ನೂ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿ ಬರುವ ಪರ್ವಕಾಲ.
ವೃಶ್ಚಿಕ ರಾಶಿ: ಶುಕ್ರ ಸಂಕ್ರಮಣವು ಹೊಸ ವರ್ಷದಲ್ಲಿ ಈ ರಾಶಿಯವರ ಜೀವನದಲ್ಲಿ ಹೊಸ ಚೈತನ್ಯವನ್ನು ತರಲಿದೆ. ಉದ್ಯೋಗದಲ್ಲಿ ಕೀರ್ತಿ ಯಶಸ್ಸಿನ ಜೊತೆಗೆ ಹೊಸ ವ್ಯವಹಾರವನ್ನು ಆರಂಭಿಸಲು ಯೋಚಿಸುತ್ತಿರುವವರಿಗೆ ಶುಭ. ಹಣದ ಹರಿವು ಹೆಚ್ಚಾಗಲಿದ್ದು ಹೊಸ ಮನೆ, ವಾಹನ ಖರೀದಿ ಯೋಗವಿದೆ.
ಕುಂಭ ರಾಶಿ: ಶುಕ್ರದೆಸೆಯಿಂದ ಈ ರಾಶಿಯವರ ಜೀವನದಲ್ಲಿ ಮಹತ್ತರ ಬದಲಾವಣೆಗಳು ಕಂಡು ಬರಲಿವೆ. ಆರೋಗ್ಯ ಉತ್ತಮವಾಗಿರಲಿದ್ದು, ಜೀವನದಲ್ಲಿ ಹೊಸ ಪ್ರೀತಿಯ ಆಗಮನವಾಗಲಿದೆ. ನಿಮ್ಮಿಂದ ದೂರವಿರುವ ಮಕ್ಕಳು ಮನೆಗೆ ಬರುವುದರಿಂದ ನಿಮ್ಮ ಸಂತೋಷ ಇಮ್ಮಡಿಗೊಳ್ಳಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.