ಇನ್ನು 25 ದಿನಗಳಲ್ಲಿ ಈ ರಾಶಿಯವರನ್ನು ಸಿರಿವಂತರನ್ನಾಗಿಸುತ್ತಾನೆ ಶುಕ್ರ

Fri, 07 Apr 2023-3:46 pm,

ಶುಕ್ರ ಸಂಕ್ರಮಣ ಆರ್ಥಿಕ ಸ್ಥಿತಿ, ಸಂತೋಷ, ಪ್ರೇಮ ಜೀವನ ಮತ್ತು ವೈವಾಹಿಕ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅದರಲ್ಲೂ 5 ರಾಶಿಯವರ ಜೀವನದ ಮೇಲೆ ಶುಕ್ರ  ಭಾರೀ ಪ್ರಭಾವವನ್ನು ಬೀರಲಿದ್ದಾನೆ. ಶುಕ್ರ ಸಂಕ್ರಮಣದಿಂದ ಶುಭ ಫಲ ಪಡೆಯುವ ರಾಶಿಗಳು ಯಾವುವು ನೋಡೋಣ. 

ಮೇಷ ರಾಶಿ : ಶುಕ್ರ ಸಂಚಾರವು ಮೇಷ ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ತರಲಿದೆ. ಈ ರಾಶಿಯವರು ಶುಭ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಸ್ಥಗಿತಗೊಂಡಿರುವ ಕೆಲಸ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಕುಟುಂಬದೊಂದಿಗೆ ಸ್ಮರಣೀಯ ಪ್ರವಾಸ ಅಥವಾ ತೀರ್ಥಯಾತ್ರೆಗೆ ಹೋಗಬಹುದು. 

ವೃಷಭ ರಾಶಿ : ಶುಕ್ರ ಸಂಕ್ರಮಣವು ವೃಷಭ ರಾಶಿಯವರ ವ್ಯಕ್ತಿತ್ವದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಜನರು ನಿಮ್ಮ ಮಾತುಗಳನ್ನು ಕೇಳುತ್ತಾರೆ ಮತ್ತು ಅದರಂತೆ ನಡೆದುಕೊಳ್ಳುತ್ತಾರೆ. ಸಮಾಜದಲ್ಲಿ ಈ ರಾಶಿಯವರ ಗೌರವ, ಕೀರ್ತಿ ಹೆಚ್ಚುವುದು. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. 

ಕನ್ಯಾ ರಾಶಿ : ಶುಕ್ರ ಸಂಚಾರವು ಕನ್ಯಾ ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಯನ್ನು ನೀಡುತ್ತದೆ. ವ್ಯಾಪಾರ ವ್ಯವಹಾರದಲ್ಲಿ ವೃದ್ಧಿಯಾಗಲಿದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ವಿದೇಶ ಪ್ರವಾಸಕ್ಕೆ ಹೋಗುವ ಸಂಭವವಿದೆ. 

ಮಕರ ರಾಶಿ : ಶುಕ್ರನ ರಾಶಿ ಬದಲಾವಣೆಯು ಮಕರ ರಾಶಿಯವರಿಗೆ ತಮ್ಮ ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದ ಲಾಭವನ್ನು ನೀಡುತ್ತದೆ. ಹೊಸ ಜವಾಬ್ದಾರಿ ನಿಮ್ಮ ಹೆಗಲೇರಬಹುದು. ಎದುರಿಗಿರುವವರ ಮೇಲೆ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಆದಾಯವೂ ಹೆಚ್ಚಾಗಬಹುದು. 

ಕುಂಭ ರಾಶಿ :  ಕುಂಭ ರಾಶಿಯವರು ಎದುರಿಸುತ್ತಿರುವ  ಸಮಸ್ಯೆಗಳಿಂದ ಪರಿಹಾರ ಸಿಗಬಹುದು. ಹೊಸ ಮನೆ-ಕಾರು ಖರೀದಿಸುವ ಭಾಗ್ಯ ಕೂಡಿ ಬರಲಿದೆ. ಪ್ರಮೋಷನ್-ಇನ್ಕ್ರಿಮೆಂಟ್ ಪಡೆಯಬಹುದು. ಆದಾಯ ಹೆಚ್ಚಳದಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link