Laxmi Yog: ಮಂಗಳಕರ `ಲಕ್ಷ್ಮಿ ಯೋಗ`ದಿಂದ ಇನ್ನೇನು 3 ದಿನಗಳಲ್ಲಿ ಈ ರಾಶಿಯವರ ಬಾಳಾಗುವುದು ಬಂಗಾರ-ಹೆಜ್ಜೆ ಹೆಜ್ಜೆಗೂ ಗೆಲುವು!
ಶುಕ್ರನು ರಾತ್ರಿ 7.29 ಕ್ಕೆ ಕರ್ಕ ರಾಶಿಯಲ್ಲಿ ಸಂಕ್ರಮಣ ಮಾಡಲಿದ್ದಾನೆ. ಈ ಸಮಯದಲ್ಲಿ, ಮಕರ ರಾಶಿಯಲ್ಲಿ ಲಕ್ಷ್ಮಿ ಯೋಗವು ರೂಪುಗೊಳ್ಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕರ ರಾಶಿಯವರಿಗೆ ಲಕ್ಷ್ಮೀ ಯೋಗದಿಂದ ವಿಶೇಷ ಸಂಪತ್ತು ಸಿಗಲಿದೆ. ಇನ್ನುಳಿದ ಕೆಲ ರಾಶಿಗಳಿಗೂ ಜಯಮಾಲೆ ಹಾಕಲಿದೆ ಈ ಯೋಗ. ಆ ರಾಶಿಗಳು ಯಾವುವು ಎಂದು ತಿಳಿಯೋಣ.
ಮೇಷ ರಾಶಿ: ಮೇಷ ರಾಶಿಯ ಜನರು ಶುಕ್ರ ಸಂಚಾರದಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ, ಭೂಮಿ, ವಾಹನ ಅಥವಾ ಮನೆ ಇತ್ಯಾದಿಗಳನ್ನು ಖರೀದಿಸಬಹುದು. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಅಷ್ಟೇ ಅಲ್ಲ ಈ ಜನರ ಸಂಬಳವೂ ಹೆಚ್ಚುತ್ತದೆ. ಜೀವನದಲ್ಲಿ ಸಂತೋಷವು ಮರಳುತ್ತದೆ. ವ್ಯಾಪಾರಸ್ಥರಿಗೂ ಈ ಸಮಯ ಅನುಕೂಲಕರವಾಗಿದೆ.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಮಂಗಳಕರ ಮತ್ತು ವಿತ್ತೀಯ ಲಾಭಗಳೆರಡೂ ದೊರೆಯುತ್ತವೆ. ಕುಟುಂಬದ ಆರ್ಥಿಕ ಸ್ಥಿತಿ ವೃದ್ಧಿಯಾಗಲಿದೆ. ಈ ಸಮಯದಲ್ಲಿ ಕುಟುಂಬದ ಸದಸ್ಯರು ಮದುವೆಯಾಗಬಹುದು. ಪ್ರೇಮ ಸಂಬಂಧಕ್ಕೆ ಕುಟುಂಬ ಸದಸ್ಯರ ಒಪ್ಪಿಗೆ ಸಿಗಲಿದೆ. ಆದಾಯದ ಸಾಧನಗಳಲ್ಲಿ ಹೆಚ್ಚಳ ಕಂಡುಬರುವುದು.
ಕಟಕ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇ 30 ರಂದು ಶುಕ್ರನು ಕಟಕ ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ರೀತಿಯಾಗಿ ಜನರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ಈ ಸಮಯದಲ್ಲಿ ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ. ಲಾಭವಿರುತ್ತದೆ ಮತ್ತು ಉದ್ಯೋಗಿಗಳ ಸಂಬಳದಲ್ಲಿ ಹೆಚ್ಚಳವಾಗುತ್ತದೆ. ವ್ಯಾಪಾರದಲ್ಲಿಯೂ ಲಾಭ ಕಂಡುಬರುತ್ತಿದೆ. ಈ ಸಮಯ ಆಭರಣ ವ್ಯಾಪಾರಿಗಳಿಗೂ ಅನುಕೂಲಕರವಾಗಿದೆ.
ಮಕರ ರಾಶಿ: ಶುಕ್ರ ಸಂಕ್ರಮಣದಿಂದ ಈ ರಾಶಿಯಲ್ಲಿ ಲಕ್ಷ್ಮೀಯೋಗವು ರೂಪುಗೊಳ್ಳಲಿದೆ. ಹೀಗಾಗಿ ಈ ರಾಶಿಯವರು ಈ ಅವಧಿಯಲ್ಲಿ ಲಕ್ಷ್ಮೀ ಕಟಾಕ್ಷ ಪಡೆಯುತ್ತಾರೆ. ಹಣಕಾಸಿನ ಲಾಭದ ಜೊತೆಗೆ ಆಸ್ತಿದಾರರೂ ಆಗುತ್ತಾರೆ. ವೈವಾಹಿಕ ಸುಖವು ಉತ್ತುಂಗದಲ್ಲಿರುತ್ತದೆ. ಈ ಸಮಯದಲ್ಲಿ ನೀವು ಹೆಸರು ಮತ್ತು ಖ್ಯಾತಿಯನ್ನು ಗಳಿಸುವಿರಿ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)