ಐದು ದಿನಗಳ ಬಳಿಕ ಧನ ಕಾರಕ `ಶಶಿ ಮಂಗಳ ಯೋಗ` ಈ ರಾಶಿಗಳ ಜನರಿಗೆ ಭಾರಿ ಧನಲಾಭದ ಜೊತೆಗೆ ಘನತೆ-ಗೌರವ-ಪ್ರತಿಷ್ಠೆ ಹೆಚ್ಚಳ!
ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶಶಿ ಮಂಗಳ ಯೋಗವನ್ನು ಅತ್ಯಂತ ಶುಭ ಯೋಗ ಎಂದು ಭಾವಿಸಲಾಗುತ್ತದೆ. ಈ ಯೋಗ ನಿರ್ಮಾಣಗೊಳ್ಳುವುದರಿಂದ ಜಾತಕದವರ ಆರ್ಥಿಕ ಸ್ಥಿತಿಯಲ್ಲಿ ಅಪಾರ ಸುಧಾರಣೆ ಕಂಡುಬರುತ್ತದೆ ಹಾಗೂ ಸಮಾಜದಲ್ಲಿ ಘನತೆ-ಗೌರವ ಪ್ರಾಪ್ತಿಯಾಗುತ್ತದೆ. ಈ ಮೈತ್ರಿಯನ್ನು ಧನಕಾರಕ ಎಂದು ಭಾವಿಸಲಾಗುತ್ತದೆ. ಇದರಲ್ಲಿ ಮಂಗಳ ಸಾಹಸ ಮತ್ತು ಉತ್ಸಾಹ ಭಾವದಲ್ಲಿ ಬಂದರೆ, ಚಂದ್ರ ಶಾಂತಿ, ಆಕರ್ಷಣೆ, ಧನ ಹಾಗೂ ದೀರ್ಘಾಯು ದಯಪಾಲಿಸುತ್ತಾನೆ. ಹೀಗಿರುವಾಗ ಈ ಶಶಿ ಮಂಗಳ ಯೋಗ ಯಾವ ರಾಶಿಗಳ ಪಾಲಿಗೆ ಶುಭವಾಗಿದೆ ತಿಳಿದುಕೊಳ್ಳೋಣ ಬನ್ನಿ,
ಮಿಥುನ ರಾಶಿ: ಶಶಿಮಂಗಳ ಯೋಗದಿಂದ ಈ ಜಾತಕದ ಜನರಿಗೆ ಮಾನಸಿಕ ಒತ್ತಡದಿಂದ ಮುಕ್ತಿ ಸಿಗಲಿದೆ. ನೀವು ನಿಮ್ಮ ಸಾಹಸ, ಪರಾಕ್ರಮ ಹಾಗೂ ಆತ್ಮವಿಶ್ವಾಸದ ಬಲದಿಂದ ಹಲವು ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ಸನ್ನು ಸಾಧಿಸುವಿರಿ. ಇದರ ಜೊತೆಗೆ ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ಶಶಿ ಮಂಗಳ ಯೋಗ ನಿಮ್ಮೊಳಗೆ ಹೊಸ ಪ್ರತಿಭೆ ಹುಟ್ಟುಹಾಕಲಿದೆ. ಇದರಿಂದ ನೀವು ಪ್ರತಿಯೊಂದು ಕ್ಷೇತ್ರದಲ್ಲಿ ನಿಮ್ಮ ಪ್ರಭಾವವನ್ನು ಬೇರುವಲ್ಲಿ ಯಶಸ್ಸನ್ನು ಕಾಣುವಿರಿ. ಶತ್ರುಗಳ ಮೇಲೆ ವರ್ಚಸ್ಸು ಸಾಧಿಸುವಿರಿ. ಹಣ ಹೂಡಿಕೆಗೆ ಯೋಚಿಸುತ್ತಿದ್ದರೆ ಈ ಅವಧಿಯಲ್ಲಿ ನೀವು ಹೂಡಿಕೆ ಮಾಡಬಹುದು. ಲಾಭಕಾರಿ ಸಾಬೀತಾಗಲಿದೆ.
ಸಿಂಹ ರಾಶಿ: ಈ ಯೋಗ ನಿಮ್ಮ ಗೋಚರ ಜಾತಕದ ನಾಲ್ಕನೇ ಭಾವದಲಿ ನಿರ್ಮಾಣಗೊಳ್ಳುತ್ತಿದೆ. ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಇದರ ಜೊತೆಗೆ ಮಕ್ಕಳ ಕಡೆಯಿಂದ ದೊಡ್ಡ ಸಮಾಚಾರ ಸಿಗುವ ಸಾಧ್ಯತೆ ಇದೆ. ವಾಹನ-ಸಂಪತ್ತು ಖರೀದಿಸಲು ಇದು ಉತ್ತಮ ಸಮಯವಾಗಿದೆ. ಬಾಳಸಂಗಾತಿಯ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ವ್ಯಾಪಾರಕ್ಕೆ ಸಂಬಂಧಿಸಿದ ಜಾತಕದವರಿಗೆ ಲಾಭ ಸಿಗಲಿದೆ. ನೌಕರವರ್ಗದ ಜನರಿಗೆ ಪದೋನ್ನತಿಯ ಜೊತೆಗೆ ಮಹತ್ವದ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ.
ವೃಶ್ಚಿಕ ರಾಶಿ: ಈ ಶಶಿ ಮಂಗಳ ಯೋಗ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ರೂಪುಗೊಳ್ಳುತ್ತಿದೆ. ನಿಮಗೆ ಪ್ರತಿಯೊಂದು ಕ್ಷಣದಲ್ಲಿ ಲಾಭ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ ಆರೋಗ್ಯ ಕೂಡ ಉತ್ತಮವಾಗಿರಲಿದೆ. ಸ್ವಭಾವದಲಿ ಸ್ವಲ್ಪ ಆಕ್ರಮಣಕಾರಿ ಧೋರಣೆ ಇದ್ದರೂ ಕೂಡ ಚಂದ್ರ ನಿಮ್ಮನ್ನು ಶಾಂತಗೊಳಿಸಲಿದ್ದಾನೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿಯೂ ಕೂಡ ನಿಮಗೆ ಯಶಸ್ಸು ಸಿಗಲಿದೆ. ಸಂಪತ್ತಿನ ಖರೀದಿ ಹಾಗೂ ಮಾರಾಟದಿಂದ ನಿಮಗೆ ಲಾಭ ಸಿಗಲಿದೆ. ಯಾತ್ರೆಯ ಪ್ರಬಲ ಯೋಗಗಳು ರೂಪುಗೊಳ್ಳುತ್ತಿವೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)