ಶೀಘ್ರದಲ್ಲೇ ತುಲಾ ರಾಶಿಯಲ್ಲಿ ಮಂಗಳ-ಬುಧರ ಮೈತ್ರಿ. ಧನ ಕುಬೇರನ ಕೃಪೆಯಿಂದ ಈ ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ ಯೋಗ.!
ವೈದಿಕ ಪಂಚಾಂಗದ ಪ್ರಕಾರ ತುಲಾ ರಾಶಿಯಲ್ಲಿ ಮಂಗಳ ಹಾಗೂ ಬುಧನ ಮೈತ್ರಿ ನೆರವೇರಲಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
ಮೇಷ ರಾಶಿ: ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ಈ ಮೈತ್ರಿ ನೆರವೇರುತ್ತಿರುವ ಕಾರಣ ಈ ಮೈತ್ರಿ ನಿಮ್ಮ ಪಾಲಿಗೆ ಸಾಕಷ್ಟು ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಈ ಅವಧಿಯಲ್ಲಿ ವಿವಾಹಿತರ ವೈವಾಹಿಕ ಜೀವನ ಸಂತಸದಿಂದ ಕೂಡಿರಲಿದೆ. ಒಂದು ವೇಳೆ ಪಾರ್ಟ್ನರಶಿಪ್ ನಲ್ಲಿ ಯಾವುದಾದರೊಂದು ವ್ಯವಹಾರ ಆರಂಭಿಸಲು ಬಯಸುತ್ತಿದ್ದರೆ, ಈ ಯುತಿ ನಿಮ್ಮ ಪಾಲಿಗೆ ಅತ್ಯುತ್ತಮ ಸಾಬೀತಾಗಲಿದೆ. ಅವಿವಾಹಿತರಿಗೆ ಈ ಅವಧಿಯಲ್ಲಿ ವಿವಾಹ ಪ್ರಸ್ತಾವನೆ ಸಿಗುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಮುಂದುವರೆಯಲು ನೀವು ಕೆಲ ದೊಡ್ಡ ನಿರ್ಣಯಗಳನ್ನು ಕೈಗೊಳ್ಳಬೇಕಾಗಬಹುದು. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸದಲ್ಲಿ ಸಾಕಷ್ಟು ವೃದ್ಧಿ ಇರಲಿದ್ದು, ಹೊಸ ಉತ್ಸಾಹದ ಸಂಚಾರ ನಿಮ್ಮಲ್ಲಿ ಕಂಡುಬರಲಿದೆ.
ಮಿಥುನ ರಾಶಿ: ಈ ಮೈತ್ರಿ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ನೆರವೇರುತ್ತಿರುವ ಕಾರಣ ಇದು ಮಿಥುನ ರಾಶಿಯ ಜಾತಕದವರ ಪಾಲಿಗೆ ಅಂತ್ಯಂತ ಮಂಗಳಕರ ಸಾಬೀತಾಗಲಿದೆ. ಹೀಗಾಗಿ ಈ ಅವಧಿಯಲ್ಲಿ ಮಕ್ಕಳ ಕಡೆಯಿಂದ ನಿಮಗೆ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಮಾಧ್ಯಮ, ರಿಸರ್ಚ್, ಜೋತಿಷ್ಯ ಹಾಗೂ ಆಧ್ಯಾತ್ಮಕ್ಕೆ ಸಂಬಂಧಿಸಿದ ಜನರ ಪಾಲಿಗೆ ಈ ಸಮಯ ಅದ್ಭುತ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಪ್ರಾಪ್ತಿಯ ಯೋಗ ಕೂಡ ಇದೆ. ಷೇರು ಮಾರುಕಟ್ಟೆ, ಲಾಟರಿ ಇತ್ಯಾದಿ ವ್ಯವಹಾರಗಳಲ್ಲಿ ನೀವು ಸಾಕಷ್ಟು ಹಣ ಗಳಿಕೆ ಮಾಡುವಿರಿ. ಪ್ರೇಮ ಸಂಬಂಧದಲ್ಲಿ ನಿಮಗೆ ಸಾಕಷ್ಟು ಯಶಸ್ಸು ಸಿಗಲಿದೆ.
ಧನು ರಾಶಿ: ತುಲಾ ರಾಶಿಯಲ್ಲಿ ಮಂಗಳ-ಬುಧರ ಯುತಿ ನಿಮ್ಮ ಪಾಲಿಗೆ ಅತ್ಯದ್ಭುತವಾಗಿರಲಿದೆ. ಏಕೆಂದರೆ ಇದು ನಿಮ್ಮ ಗೋಚರ ಜಾತಕದ ಆದಾಯ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಜಬರ್ದಸ್ತ್ ಹೆಚ್ಚಳವಾಗುವ ಸಾಧ್ಯತೆ ಇದೆ. ಇದಲ್ಲದೆ ಆದಾಯದ ಹೊಸ ಮಾರ್ಗಗಳು ಕೂಡ ತೆರೆದುಕೊಳ್ಳಲಿವೆ. ಸ್ವಂತ ವ್ಯಾಪಾರ ಮಾಡುತ್ತಿದ್ದರೆ ನಿಮಗೆ ಉತ್ತಮ ರೀಟರ್ನ್ ಸಿಗುವ ನಿರೀಕ್ಷೆಯನ್ನು ನೀವು ಹೊಂದಬಹುದು. ಮಕ್ಕಳ ಏಳಿಗೆಯ ಅವಧಿ ಇದಾಗಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಹಳೆ ಹೂಡಿಕೆಯಿಂದ ಉತ್ತಮ ಲಾಭ ಸಿಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)