ಶೀಘ್ರದಲ್ಲೇ ಧನದಾತನ ನೇರನಡೆ ಆರಂಭ, 3 ರಾಶಿಗಳ ಜನರ ಜೀವನದಲ್ಲಿ ಲಕ್ಷ್ಮಿ ಕೃಪೆಯಿಂದ ಭಾರಿ ಧನವೃಷ್ಟಿ!
Shukra Nera Nade 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಕರ್ಕ ರಾಶಿಯಲ್ಲಿ ಧನದಾತ ಶುಕ್ರ ತನ್ನ ನೆರನಡೆಯನ್ನು ಆರಂಭಿಸಲಿದ್ದಾನೆ. ಇದರಿಂದ ಮೂರು ರಾಶಿಗಳ ಜಾತಕದವರಿಗೆ ವೃತ್ತಿಜೀವನ ಮತ್ತು ವ್ಯಾಪಾರದಲ್ಲಿ ಉನ್ನತಿಯ ಯೋಗ ಸಿಗುವ ಸಾಧ್ಯತೆ ಇದೆ (Spiritual News In Kannada).
ಮಿಥುನ ರಾಶಿ: ಶುಕ್ರ ನಿಮ್ಮ ಗೋಚರ ಜಾತಕದ ಧನ ಭಾವ ಹಾಗೂ ಮಾತಿನ ಭಾವದಲ್ಲಿ ತನ್ನ ನೇರನಡೆ ಆರಂಭಿಸುತ್ತಿರುವ ಕಾರಣ ಆತನ ಈ ಸ್ಥಿತಿ ಪರಿವರ್ತನೆ ನಿಮ್ಮ ಪಾಲಿಗೆ ಅತ್ಯಂತ ಶುಭ ಫಲಗಳನ್ನು ನೀಡಲಿದೆ. ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಉಂಟಾಗಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಜೊತೆಗೆ ನಿಮ್ಮ ಆತ್ಮವಿಶ್ವಾಸದಲ್ಲಿ ಸಾಕಷ್ಟು ವೃದ್ಧಿಯಾಗಲಿದೆ. ಈ ಅವಧಿಯಲ್ಲಿ ನಿಮ್ಮ ಲೀಡರ್ಶಿಪ್ ಕ್ಷಮತೆಯಲ್ಲಿ ಹೆಚ್ಚಳವನ್ನು ನೀವು ಗಮನಿಸುವಿರಿ ಮತ್ತು ನಿಮಗೆ ನಿಮ್ಮ ಮಾತಿನಲ್ಲಿನ ಪ್ರಭಾವ ಕಂಡುಬರಲಿದೆ. ಜನರು ಅದರಿಂದ ಪ್ರಭಾವಿತರಾಗಲಿದ್ದಾರೆ. ವ್ಯಾಪಾರಿಗಳ ಸಿಲುಕಿ ಹಾಕಿಕೊಂಡಿರುವ ಹಣ ಅವರತ್ತ ಮರಳಲಿದೆ.
ತುಲಾ ರಾಶಿ: ಶುಕ್ರಗ್ರಹದ ನೇರನಡೆ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ಶುಕ್ರ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಮಾರ್ಗಿಯಾಗಲಿದ್ದಾನೆ. ಇದರಿದ ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ. ಈ ಅವಧಿಯಲ್ಲಿ ನೀವು ಹೊಸ ಕೆಲಸ ಕೂಡ ಆರಂಭಿಸಬಹುದು. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ದೊಡ್ಡ ಆರ್ಡರ್ ಸಿಗುವ ಸಾಧ್ಯತೆಯಿದೆ. ಇದರಿಂದ ನಿಮಗೆ ಸಾಕಷ್ಟು ಲಾಭವಾಗಲಿದೆ. ನೌಕರವರ್ಗದ ಜನರಿಗೆ ನೌಕರಿಯಲ್ಲಿ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ ಮತ್ತು ನಿಮಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಭಾಗ್ಯ ಪ್ರಾಪ್ತಿಯಾಗಲಿದೆ.
ವೃಶ್ಚಿಕ ರಾಶಿ: ಶುಕ್ರನ ನೇರ ನಡೆ ನಿಮ್ಮ ಗೋಚರ ಜಾತಕದ ನವಮಭಾವದಲ್ಲಿ ನೆರವೇರುತ್ತಿದ್ದು, ಇದು ನಿಮ್ಮ ಪಾಲಿಗೆ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಭಾಗ್ಯ ಸೂರ್ಯನಂತೆ ಹೊಳೆಯಲಿದೆ. ನಿಂತುಹೋದ ನಿಮ್ಮ ಕೆಲಸಗಳು ಪುನಃ ವೇಗ ಪಡೆದುಕೊಳ್ಳಲಿವೆ. ಸಣ್ಣ ಪುಟ್ಟ ಯಾತ್ರೆಗಳು ಸಂಭವಿಸುವ ಸಾಧ್ಯತೆ ಇದೆ. ವಿಧ್ಯಾರ್ಥಿಗಳ ಪಾಲಿಗೆ ಸಮಯ ಅನುಕೂಲಕರವಾಗಿದೆ. ಶುಕ್ರ ನಿಮ್ಮ ಜಾತಕದ ಶಷ್ಟಮ ಹಾಗೂ ದ್ವಾದಶ ಭಾವಕ್ಕೆ ಅಧಿಪತಿ. ಹೀಗಾಗಿ ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗಲಿದೆ. ಈ ಅವಧಿಯಲ್ಲಿ ನೀವು ಸಾಕಷ್ಟು ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುವಿರಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)