ನಿಂತು ಹೋಗಲಿದೆ ಈ ನೆಟ್ ವರ್ಕ್ ನ 3G ಸರ್ವಿಸ್..!

Wed, 10 Mar 2021-4:02 pm,

ಟೆಕ್ ಸೈಟ್ ಟೆಲಿಕಾಂಟಾಕ್ ಪ್ರಕಾರ, Vi  ತನ್ನ 3G ಸೇವೆಯನ್ನು ಶೀಘ್ರದಲ್ಲೇ ನಿಲ್ಲಿಸಲಿದೆ. 2022 ರ ಅಂತ್ಯದ ವೇಳೆಗೆ 3 ಜಿ ಸೇವೆಗಳನ್ನು ದೇಶಾದ್ಯಂತ ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಕಂಪನಿಯ ಎಂಡಿ ಮತ್ತು ಸಿಇಒ ರವೀಂದ್ರ ಠಕ್ಕರ್ ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, Vi ಈಗ ತನ್ನ ಎಲ್ಲ ಗ್ರಾಹಕರನ್ನು 3G ನೆಟ್‌ವರ್ಕ್‌ನಿಂದ 4 G ಮತ್ತು 5 G ಗೆ ವರ್ಗಾಯಿಸುವ ಇರಾದೆ ಹೊಂದಿದೆ. ಈ ಕಾರಣದಿಂದಾಗಿಯೇ ಕಂಪನಿಯು ಈಗ ತನ್ನ 3G ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ.  

Vi ಈಗ ದೇಶದಲ್ಲಿ 5 G ನೆಟ್‌ ವರ್ಕ್ ಪ್ರಾರಂಭಿಸಲು ತಯಾರಿ ನಡೆಸುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸರ್ಕಾರದಿಂದ ಅನುಮತಿ ಪಡೆದ ನಂತರ ಕಂಪನಿಯು ದೇಶದಲ್ಲಿ ಸೂಪರ್ ಫಾಸ್ಟ್ 5 G ನೆಟ್‌ವರ್ಕ್ ಅನ್ನು ಪ್ರಾರಂಭಿಸುತ್ತದೆ.  

ಒಂದು ವೇಳೆ, ನೀವು 3 G ನೆಟ್‌ವರ್ಕ್ ಸಂಪರ್ಕವನ್ನು ಹೊಂದಿದ್ದರೆ, ನಂತರ ನೀವು ನಿಮ್ಮ ಹತ್ತಿರದ Vi ಸ್ಟೋರ್‌ಗೆ ಹೋಗಿ ಹೊಸ 4 G ಸಂಪರ್ಕವನ್ನು ಪಡೆಯಬಹುದು. ಕಂಪನಿಯು ಈ ಬಗ್ಗೆ ಗ್ರಾಹಕರಿಗೆ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದೆ.

ಮಾಹಿತಿಯ ಪ್ರಕಾರ, ಪ್ರಸ್ತುತ, Vi ಯಲ್ಲಿ ಸುಮಾರು 1.1 ಕೋಟಿ ಗ್ರಾಹಕರು 3 G ಸಂಪರ್ಕ ಹೊಂದಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link