ಹೆಣ್ಣಿಗೆ ಸೀರೆ ಯಾಕೆ ಅಂದಾ.. ಪತಿ ವಿಕ್ಕಿ ಕೌಶಲ್‌ ಜೊತೆ ಮುದ್ದಾಗಿ ಕರ್ವಾ ಚೌತ್‌ ಆಚರಿಸಿದ ಕತ್ರೀನಾ ಕೈಫ್‌! ಮುದ್ದಾದ ಫೋಟೋಸ್‌ ವೈರಲ್‌

Fri, 25 Oct 2024-1:31 pm,

Vicky kaushal Katrina kaif viral photos: ಬಾಲಿವುಡ್‌ನ ಕ್ಯೂಟ್‌ ಪೇರ್‌ಗಳಲ್ಲಿ ವಿಕ್ಕಿ ಕೌಶಲ್‌ ಹಾಗೂ ಕತ್ರೀನಾ ಕೈಫ್‌ ಜೋಡಿ ಕೂಡ ಒಂದು. ಸದಾ ಜೋಡಿಯಾಗಿ ತಮ್ಮ ಕ್ಯೂಟ್‌ನೆಸ್‌ನಿಂದ ಸದ್ದು ಮಾಡುವ ಜೋಡಿ ಇದೀಗ ಕರ್ವಾ ಚೌತ್‌ ಅನ್ನು ಆಚರಿಸಿದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನಿಟ ಟೌನ್‌ನ ಹಾಟ್‌ ಟಾಪಿಕ್‌ ಆಗಿದ್ದಾರೆ.   

2021ರ ಡಿಸೆಂಬರ್‌ನಲ್ಲಿ ಕತ್ರೀನಾ ಕೈಫ್‌ ಹಾಗೂ ವಿಕ್ಕಿ ಕೌಶಲ್‌ ಜೋಡಿ ಮದುವೆಯಾಗಿದ್ದರು. ರಾಜಸ್ಥಾನದಲ್ಲಿ ನಡೆದ ಈ ಜೋಡಿಯ ಮದುವೆ ಗುಟ್ಟಾಗಿ ಸ್ವಲ್ಪ ಜನರ ಸಮ್ಮುಕದಲ್ಲಿ ನಡೆದಿತ್ತಾದರೂ, ದೇಶದಾದ್ಯಂತ ಈ ಮದುವೆ ವಿಚಾರ ಸದ್ದು ಮಾಡಿತ್ತು.  

ಮದುವೆಯಾದಾಗಿನಿಂದ ಇಂದಿನ ವರೆಗೂ ಈ ಜೋಡಿ ಯಾವಾಗ ಸಿಹಿ ಸುದ್ದಿ ಕೊಡುತ್ತಾರೆ ಎಂದು ವೈಟ್‌ ಮಾಡ್ತಾ ಇರುತ್ತಾರೆ. ಈ ಜೋಡಿಯ ಒಂದು ಸಣ್ಣ ಸುದ್ದಿಯೂ ಕೂಡ ಸಿಕ್ಕಾಪಟ್ಟೆ ವೈರಲ್‌ ಆಗುತ್ತದೆ.  

ಇದೀಗ ಈ ಜೋಡಿ ಇತ್ತೀಚೆಗೆ ಕರ್ವಾ ಚೌತ್‌ ಆಚರಿಸಿಕೊಂಡಿದ್ದು, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಸಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್‌ ಆಗುತ್ತಿದೆ.  

ಈ ಮುದ್ದಾದ ಜೋಡಿ ಕೆಂಪು ಉಡುಪನ್ನು ಧರಿಸಿ ಕರ್ವಾ ಚೌತ್‌ ಆಚರಿಸುತ್ತಿದ್ದು, ಈ ಫೋಟೋಗಳು ಸದ್ಯ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ. ಅಭಿಮಾನಿಗಳಂತೂ ಈ ಜೋಡಿಯ ಫೋಟೋಗಳು ನೋಡಿ ಫಿದಾ ಆಗಿದ್ದಾರೆ.   

ಈ ಮುದ್ದಾದ ಜೋಡಿಯ ಫೋಟೋಗಳು ನೋಡಿದ ನಂತರ, ಅಭಿಮಾನಿಗಳು ಗುಡ್‌ ನ್ಯೂಸ್‌ ಯಾವಾಗ ಕೊಡ್ತಿರಾ ಎಂದು ಕೇಳಲು ಆರಂಭಿಸಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link