ಶಮಿ ಜೊತೆಯಲ್ಲ, ನಟ ಸಲ್ಮಾನ್ ಖಾನ್ ಜೊತೆ ಮದುವೆ- 2ನೇ ಮದುವೆ ಬಗ್ಗೆ ಬಹಿರಂಗಪಡಿಸಿದ ಸಾನಿಯಾ ಮಿರ್ಜಾ
ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವಿಚ್ಛೇದನದ ನಂತರ, ಎರಡನೇ ಮದುವೆಯ ಬಗ್ಗೆ ಸಾಕಷ್ಟು ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಕ್ರಿಕೆಟಿಗ ಮೊಹಮ್ಮದ್ ಶಮಿಯನ್ನು ಸಾನಿಯಾ ಮಿರ್ಜಾ ವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಆಗಸ್ಟ್ 19ಕ್ಕೆ ಮದುವೆ ಸಮಾರಂಭ ಇದೆ ಎಂಬ ಸುದ್ದಿಯೂ ಹೊರ ಬರುತ್ತಿದೆ. ಮೊಹಮ್ಮದ್ ಶಮಿ ಪ್ರಸ್ತುತ 2024 ರ ಟಿ 20 ವಿಶ್ವಕಪ್‌ನಲ್ಲಿ ಆಡುತ್ತಿಲ್ಲವಾದರೂ, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗುತ್ತಿರುವುದು ಸುಳ್ಳಲ್ಲ.
ಈ ವದಂತಿಯ ನಂತರ ಸಾನಿಯಾ ಮಿರ್ಜಾ ತಂದೆ “ಈ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ” ಎಂದು ಹೇಳಿದ್ದರು.
ಆದರೆ ಇದೀಗ ಮೊಹಮ್ಮದ್ ಶಮಿ ಅಲ್ಲ, ಬಾಲಿವುಡ್’ನ ಈ ಸೂಪರ್ ಸ್ಟಾರ್ ಅನ್ನು ಇಷ್ಟಪಡುತ್ತೇನೆ ಎಂದು ಸಾನಿಯಾ ಮಿರ್ಜಾ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಫಿ ವಿತ್ ಕರಣ್ ಶೋನಲ್ಲಿ ತಾನು ಸಲ್ಮಾನ್ ಖಾನ್ ಅವರನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದಾಳೆ.
ಹಳೆಯ ವಿಡಿಯೋ ಇದಾಗಿದ್ದರೂ, ನೆಟಿಜನ್ಸ್ ಈ ವಿಡಿಯೋವನ್ನು ಮುನ್ನೆಲೆಗೆ ತಂದಿದ್ದು, ಜೊತೆಗೆ ಸಾನಿಯಾ ಶಮಿಯನ್ನು ಅಲ್ಲ, ಸಲ್ಮಾನ್ ಖಾನ್ ಅನ್ನು ಮದುವೆಯಾಗಬೇಕು ಎಂದು ಕಮೆಂಟ್ ಮಾಡಲು ಶುರು ಮಾಡಿದ್ದಾರೆ.
ಸಲ್ಮಾನ್ ಖಾನ್ ಒಂಟಿಯಾಗಿದ್ದು, ಸಾನಿಯಾ ವಿಚ್ಛೇದನ ಪಡೆದಿದ್ದಾರೆ. ಇವರಿಬ್ಬರು ಮದುವೆಯಾಗಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ಸಾನಿಯಾ ಮಿರ್ಜಾ ಮತ್ತು ಸಲ್ಮಾನ್ ಖಾನ್ ಬಹಳ ಹಿಂದಿನಿಂದಲೂ ಒಳ್ಳೆಯ ಸ್ನೇಹಿತರು. ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ಫೋಟೋಗಳಿವೆ.
ಹಾಗಾಗಿ ಈ ಗೆಳೆತನ ಮದುವೆ ಆಗಿ ಬದಲಾಗಲಿ ಎಂದು ನೆಟ್ಟಿಗರು ಹಾಗೂ ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ನೆಟ್ಟಿಗರ ಈ ಆಸೆಗೆ ಸಾನಿಯಾ ಅಥವಾ ಸಲ್ಮಾನ್ ಯಾವುದೇ ಹೇಳಿಕೆ ನೀಡಿಲ್ಲ.