Vidya Balan : ಹೇಗಿದೆ ನೋಡಿ ಬೇಗಮ್ ಜಾನ್ ಯೂನೀಕ್ ಲುಕ್ ..!
ಭಾರತ ವಿಭಜನೆಯ ಸಂದರ್ಭದಲ್ಲಿ ವೇಶ್ಯಾ ಗೃಹವನ್ನು ನಡೆಸುತ್ತಿದ್ದ ಮಹಿಳೆಯೊಬ್ಬಳ ಕತೆಯನ್ನು ‘ಬೇಗಮ್ ಜಾನ್’ ಒಳಗೊಂಡಿದೆ. ಯಾರಿಂದಲೂ ಅನುಕರಿಸಲಾಗದಂತಹ ಪಾತ್ರ ಪೋಷಣೆಯನ್ನು ವಿದ್ಯಾ ಆ ಚಿತ್ರದಲ್ಲಿ ನಡೆಸಿದ್ದರು. ಇದೇ ಕಾರಣಕ್ಕೆ ಈ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದರು.
ಖ್ಯಾತ ಗಣಿತ ಶಾಸ್ತ್ರಜ್ಞೆ ಶಕುಂತಲಾ ದೇವಿ ಜೀವನವನ್ನು ಆಧರಿಸಿದ ಅದೇ ಹೆಸರಿನ ಚಿತ್ರದಲ್ಲಿ ವಿದ್ಯಾರದ್ದು ಸಂಪೂರ್ಣ ‘ಔಟ್ ಆಫ್ ದಿ ಬಾಕ್ಸ್’ ನಟನೆ. ಶಕುಂತಲಾ ದೇವಿ ಅವರ ವ್ಯಕ್ತಿತ್ವ, ವೈಯಕ್ತಿಕ ಜೀವನ ಮೊದಲಾದವುಗಳನ್ನು ಕಟ್ಟಿಕೊಟ್ಟ ಈ ಚಿತ್ರದಲ್ಲಿ ವಿದ್ಯಾ ಅವರ ಮ್ಯಾನರಿಸಂ ಮೆಚ್ಚುಗೆ ಪಡೆದಿತ್ತು.
ಗೃಹಿಣಿಯಾಗಿ ‘ತುಮ್ಹಾರಿ ಸುಲು’ ಚಿತ್ರದಲ್ಲಿ ವಿದ್ಯಾ ಬಣ್ಣ ಹಚ್ಚಿದ್ದರು. ಆರ್ಜೆಯಾಗಿ ಕೆಲಸ ಸಿಕ್ಕಿದಾಗ ಬದುಕು ಹೇಗೆ ಬದಲಾಗುತ್ತದೆ ಎನ್ನುವುದನ್ನು ಚಿತ್ರ ಕಟ್ಟಿಕೊಟ್ಟಿತ್ತು.
ಸಿಲ್ಕ್ ಸ್ಮಿತಾ ಜೀವನವನ್ನು ಆಧರಿಸಿದ ಈ ಚಿತ್ರದಲ್ಲಿ ವಿದ್ಯಾ ಬಾಲನ್ ಅಭಿನಯ ಹಾಗೂ ಸ್ಮಿತಾ ಪಾತ್ರಕ್ಕೆ ಜೀವ ತುಂಬಿದ ರೀತಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಅತ್ಯಂತ ಬೋಲ್ಡ್ ಪಾತ್ರವನ್ನು ವಿದ್ಯಾ ಬಾಲನ್ ಬಹಳ ನಾಜೂಕಾಗಿ ನಿರ್ವಹಿಸಿದ್ದರು. ಈ ಚಿತ್ರದಲ್ಲಿನ ನಟನೆ ವಿದ್ಯಾ ಬಾಲನ್ ವೃತ್ತಿ ಜೀವನಕ್ಕೆ ದೊಡ್ಡ ತಿರುವು ನೀಡಿತು. ನಂತರ ಅವರಿಗೆ ನಾಯಕಿ ಪ್ರಧಾನ ಪಾತ್ರಗಳು ಅರಸಿಕೊಂಡು ಬರತೊಡಗಿದವು.