ದರ್ಶನ್ ಅರೆಸ್ಟ್ ಆಗ್ತಿದ್ದಂತೆ ಮನನೊಂದ ಪತ್ನಿ ವಿಜಯಲಕ್ಷ್ಮಿ ದಿಟ್ಟ ನಿರ್ಧಾರ? ಮುರಿದೇ ಹೋಯ್ತಾ ಈ ಸಂಬಂಧ!?
ಪವಿತ್ರಾ ಗೌಡಗಾಗಿ ನಡೆದಿದೆ ಎನ್ನಲಾದ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಬಂಧನವಾದರೂ ಪತ್ನಿ ವಿಜಯ ಲಕ್ಷ್ಮಿ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿಲ್ಲ.
ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮ ನೋವನ್ನು ಹೊರಹಾಕಿದ್ದಾರೆ.
ದರ್ಶನ್ ಬಂಧನದ ಬಳಿಕ ಎಲ್ಲಿಯೂ ಕಾಣಿಸಿಕೊಳ್ಳದ ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಮ್ ಮೂಲಕ ದುಃಖ ಹೊರಹಾಕಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಫೋಟೋ ಡಿಲೀಟ್ ಮಾಡಿದ್ದಾರೆ.
ವಿಜಯಲಕ್ಷ್ಮಿ ಪತಿ ನಟ ದರ್ಶನ್ ಅವರನ್ನು ಇನ್‌ಸ್ಟಾಗ್ರಾಮ್ ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ವಿಜಯಲಕ್ಷ್ಮಿ ಅವರ ಈ ನಡೆ ಸಾಕಷ್ಟು ದಚ್ಚು ಫ್ಯಾನ್ಸ್ ಆತಂಕಕ್ಕೆ ಕಾರಣವಾಗಿದೆ.
ದರ್ಶನ್ ಜೊತೆ ಇರುವ ಫೋಟೋ ಹಂಚಿಕೊಂಡು, ‘10 ವರ್ಷಗಳ ಸಂಬಂಧ’ ಎಂದು ಟ್ಯಾಗ್ಲೈನ್ ನೀಡಿ ಪವಿತ್ರ ಗೌಡ ಪೋಸ್ಟ್ ಮಾಡಿದ್ದರು. ಇದನ್ನು ವಿಜಯಲಕ್ಷ್ಮಿ ಖಂಡಿಸಿದಾಗ, ಇಬ್ಬರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾರ್ ನಡೆದಿತ್ತು.
ಇದೀಗ ಪವಿತ್ರಾ ಗೌಡಗಾಗಿ ದರ್ಶನ್ ಕೊಲೆ ಮಾಡಿದರು ಎನ್ನುವ ಆರೋಪ ವಿಜಯಲಕ್ಷ್ಮಿ ಅವರ ಮನಸ್ಸಿಗೆ ಸಾಕಷ್ಟು ನೋವುಂಟು ಮಾಡಿದೆ.
ದರ್ಶನ್ ಸೇರಿ ಎಲ್ಲರನ್ನೂ ವಿಜಯಲಕ್ಷ್ಮಿ ಅನ್‌ಫಾಲೋ ಮಾಡಿದ್ದು, ಅವರ ಮೌನ ಮುಂದಿನ ನಡೆಯ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.