ಸೂರ್ಯನ ಕೃಪೆಯಿಂದ ಶಕ್ತಿಶಾಲಿ ವಿಪರೀತ ರಾಜಯೋಗ ರಚನೆ, ಈ ಜನರಿಗೆ ಭಾರಿ ಧನಲಾಭ-ಪದೋನ್ನತಿ!
ಜೋತಿಷ್ಯ ಶಾಸ್ತ್ರದ ಪ್ರಕಾರ ಅಷ್ಟಮ ಭಾವಕ್ಕೆ ಅಧಿಪತಿಯಾಗಿರುವ ಗ್ರಹ ಶಷ್ಟಮ ಅಥವಾ ದ್ವಾದಶ ಭಾವದಲ್ಲಿ ಸಾಗಿದಾಗ ವಿಪರೀತ ರಾಜಯೋಗ ರಚನೆಯಾಗುತ್ತದೆ. ಪ್ರಸ್ತುತ ಧನು ರಾಶಿಗೆ ಸಂಕ್ರಮಿಸುತ್ತಿರುವ ಸೂರ್ಯ ಮಕರ ರಾಶಿಯ ಅಷ್ಟಮ ಭಾವದ ಅಧಿಪತಿಯಾಗಿ ಅದೇ ರಾಶಿಯ ದ್ವಾದಶ ಭಾವಕ್ಕೆ ಸಾಗುತ್ತಿದ್ದಾನೆ. ಇದರಿಂದ ಅಲ್ಲಿ ಸರಳ ಅಥವಾ ವಿಪರೀತ ಹೆಸರಿನ ಶುಭ ರಾಜಯೋಗ ನಿರ್ಮಾಣಗೊಳ್ಳುತ್ತದೆ. ಈ ಯೋಗ ನಿರ್ಮಾಣಗೊಳ್ಳುವುದರಿಂದ ಜಾತಕದವರಿಗೆ ಭಾರಿ ಯಶಸ್ಸು ಹಾಗೂ ಧನಲಾಭ ಪ್ರಾಪ್ತಿಯಾಗಿ, ಜೀವನದಲ್ಲಿ ಧನ-ಧಾನ್ಯ ವೃದ್ಧಿಯಾಗುತ್ತದೆ.
ಮಕರ ರಾಶಿ: ನಿಮ್ಮ ಗೋಚರ ಜಾತಕದ ದ್ವಾದಶ ಭಾವದಲ್ಲಿ ವಿಪರೀತ ರಾಜಯೋಗ ರಚನೆಯಾಗುತ್ತಿದೆ. ಇದರಿಂದ ನಿಮ್ಮ ಜೀವನದಲ್ಲಿ ನಡೆದುಕೊಂಡು ಬಂದ ಕಷ್ಟ ಕಾರ್ಪಣ್ಯಗಳ ನಿವಾರಣೆಯಾಗಲಿದೆ. ದೀರ್ಘಾವಧಿಯಿಂದ ನಿಂತುಹೋದ ಕೆಲಸ ಕಾರ್ಯಗಳು ಪೂರ್ಣಗೊಲ್ಲಳಿವೆ. ವಿದೇಶಕ್ಕೆ ಹೋಗಿ ಸಂಶೋಧನೆಯ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಮೇಲಾಧಿಕಾರಿಗಳ ಮುಂದೆ ನೀವು ನಿಮ್ಮ ಕೌಶಲ್ಯವನ್ನು ಮೆರೆಯುವಿರಿ. ಸರ್ಕಾರಿ ನೌಕರಿಗಾಗಿ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ.
ಮೇಷ ರಾಶಿ: ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ವಿಪರೀತ ರಾಜಯೋಗ ರಚನೆಯಾಗುತ್ತಿದೆ. ಇದರಿಂದ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದು ಪಾಲ್ಗೊಳ್ಳುವಿರಿ. ವಿದ್ಯಾರ್ಥಿಗಳಿಗೂ ಕೂಡ ಇದು ಸಾಕಷ್ಟು ಲಾಭವನ್ನು ತಂದುಕೊಡಲಿದೆ. ಮಕ್ಕಳ ಕಡೆಯಿಂದ ನಿಮಗೆ ಗುಡ್ ನ್ಯೂಸ್ ಸಿಗಲಿದೆ. ಈ ಅವಶಿಯಲ್ಲಿ ನಿಮ್ಮ ಸಾಹಸ ಮತ್ತು ಆತ್ಮವಿಶ್ವಾಸ ಎರಡೂ ಹೆಚ್ಚಾಗಲಿವೆ. ಪಿತ್ರಾರ್ಜಿತ ಸಂಪತ್ತು ಸಿಗುವ ಎಲ್ಲಾ ಸಾಧ್ಯತೆಗಳಿವೆ. ಕಾನೂನಿನ ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಆದಾಯದ ಹೊಸ ಮಾರ್ಗಗಳೂ ಕೂಡ ತೆರೆದುಕೊಳ್ಳಲಿವೆ.
ತುಲಾ ರಾಶಿ: ತುಲಾ ರಾಶಿಯ ಜಾತಕದವರಿಗೂ ಕೂಡ ವಿಪರೀತ ರಾಜಯೋಗ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಮಾತಿನ ಶೈಲಿಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ. ಸಮಾಜದಲ್ಲಿ ಸ್ಥಾನಮಾನ ಹೆಚ್ಚಾಗಲಿದೆ. ನೌಕರವರ್ಗದ ಜನರ ಕುರಿತು ಹೇಳುವುದಾದರೆ, ಉನ್ನತ ಅಧಿಕಾರಿಗಳು ನಿಮ್ಮ ಕೆಲಸದಿಂದ ಇಂಪ್ರೆಸ್ ಆಗಲಿದ್ದಾರೆ. ಬಿಸ್ನೆಸ್ ನಲ್ಲಿ ಹಲವು ಪ್ರಾಜೆಕ್ಟ್ ಗಳು ನಿಮ್ಮದಾಗಲಿವೆ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)