Viral News: 6 ವರ್ಷದ ಹುಡುಗಿ ಖರೀದಿಸಿರುವ ಈ ಭಯಾನಕ ಆಟಿಕೆ ನೋಡಿ

Fri, 22 Oct 2021-3:57 pm,

6 ವರ್ಷದ ಸ್ಕೈ(Sky)ನ ತಾಯಿ ಜೋಡಿ ಲು(Jodie Lu) ತನ್ನ ಮುದ್ದಿನ ಮಗಳನ್ನು ಅಜ್ಜಿಯರ ಮನೆಗೆ ಕಳುಹಿಸಿದ್ದಳು. ಆಕೆಯ ಅಜ್ಜಿಯಂದಿರು ಮಗುವಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರು. ಆಕೆಗೆ ಇಷ್ಟವಾದ ಎಲ್ಲ ವಸ್ತುಗಳನ್ನು ಕೊಡಿಸಿದ್ದರು. ಈ ವೇಳೆ ಸ್ಕೈ ಒಂದು ಆಟಿಕೆ ಅಂಗಡಿಗೆ ಹೋಗಿದ್ದಳು. ಆಕೆಯೇ ಇಡೀ ಆಟಿಕೆ ಅಂಗಡಿಯನ್ನು ಸುತ್ತಾಡಿ ಹುಡುಕಾಡಿ ಕೊನೆಗೆ ಒಂದು ಗೊಂಬೆಯನ್ನು ಇಷ್ಟಪಟ್ಟು ತೆಗೆದುಕೊಂಡು ಬಂದಿದ್ದಳು. ಅಸ್ಥಿಪಂಜರದಂತೆ ಇರುವ ಈ ಗೊಂಬೆ ತುಂಬಾ ಭಯಾನಕವಾಗಿ ಕಾಣುತ್ತದೆ.

ನೋಡಲು ತುಂಬಾ ಭಯಾನಕವಾಗಿ ಕಾಣುವ ಈ ಗೊಂಬೆಗೆ ಕಣ್ಣುಗಳ ಬದಲಾಗಿ ಆಳವಾದ ಕುಳಿಗಳಿವೆ. ಅವುಗಳಿಂದ ಕೆಂಪು ಬೆಳಕು ಹೊರಬರುತ್ತದೆ. ಇದು ಮಾತ್ರವಲ್ಲ ಈ ಅಸ್ಥಿಪಂಜರವು ಕುದುರೆಯ ಮೇಲೆ ಕುಳಿತಿದೆ. ಅದನ್ನು ಸ್ವಿಚ್ ಮಾಡಿದ ತಕ್ಷಣ ಚಲಿಸಲು ಪ್ರಾರಂಭಿಸುತ್ತದೆ ಜೊತೆಗೆ ಭಯಾನಕ ಧ್ವನಿಯಲ್ಲಿ ಹಾಡಲು ಶುರುಮಾಡುತ್ತದೆ.

ಸ್ಕೈ ಹ್ಯಾಲೋವೀನ್‌(Halloween)ಗಾಗಿ ಈ ಶಾಪಿಂಗ್ ಮಾಡಿದ್ದಾಳೆ. ಮನೆಗೆ ಬರುವ ಮೊದಲು ಆಕೆ ನನಗೆ ಈ ಆಟಿಕೆಯನ್ನು ವಿಡಿಯೋ ಕಾಲ್ ನಲ್ಲಿ ತೋರಿಸಿದಾಗ ನನಗೆ ಆಘಾತವಾಯಿತು. ಅದನ್ನು ಮನೆಗೆ ತರಬೇಡಿ ಎಂದು ನಾನು ಆಕೆಗೆ ತಿಳಿಹೇಳಿದೆ. ಇದು ನನಗೆ ಹಾರರ್ ಚಿತ್ರದ ಪಾತ್ರವಂತೆ ಕಾಣಿಸುತ್ತಿತ್ತು. ಹೀಗಾಗಿ ನಾನು ಸ್ವಲ್ಪ ಹೆದರಿಕೊಂಡಿದ್ದೆ. ಆದರೆ ಸ್ಕೈ ಆ ಭಯಾನಕ ಆಟಿಕೆ ಮನೆಗೆ ತರುತ್ತೇನೆ, ಏನೂ ತೊಂದರೆಯಾಗುವುದಿಲ್ಲವೆಂದು ನನಗೆ ಮನವರಿಕೆ ಮಾಡಿದಳು ಎಂದು ಆಕೆಯ ತಾಯಿ ಜೋಡಿ ಲು(Jodie Lu) ಹೇಳಿದ್ದಾರೆ.

ಜೋಡಿ ಲು(Jodie Lu) ಹೇಳುವ ಪ್ರಕಾರ ಆಕೆಯ ಮುದ್ದು ಮಗಳಾದ ಸ್ಕೈ ತುಂಬಾ ಧೈರ್ಯವಂತೆಯಂತೆ. ಆಕೆ ತನ್ನ ಒಡಹುಟ್ಟಿದ ಸಹೋದರ-ಸಹೋದರಿಯರಲ್ಲಿಯೇ ಅಂತ್ಯಂತ ನಿರ್ಭೀತ ಮತ್ತು ಧೈರ್ಯಶಾಲಿಯಾಗಿದ್ದಾಳೆ. ಆಕೆಯ ಧೈರ್ಯಕ್ಕೆ ಸ್ವತಃ ನಾನೇ ಬೆರಗುಗೊಂಡಿದ್ದೇನೆ. ಮನೆಗೆ ಬಂದಾಗಿನಿಂದ ಸ್ಕೈ ತನ್ನ 9 ವರ್ಷದ ಸಹೋದರಿ ಲೆಕ್ಸಿ ಮತ್ತು 3 ವರ್ಷದ ಸಹೋದರ ರೂ(Roo) ಅವರನ್ನು ಈ ಆಟಿಕೆಯಿಂದ ಬೆದರಿಸುವ ಮೂಲಕ ತನ್ನ ಕೆಲಸವನ್ನು ಅವರಿಂದ ಮಾಡಿಕೊಳ್ಳುತ್ತಿದ್ದಾಳೆ ಅಂತಾ ಹೇಳಿದ್ದಾರೆ.

ಅಕ್ಟೋಬರ್ 31ರಂದು ಹ್ಯಾಲೋವೀನ್‌ನಲ್ಲಿ ಕೂಡ ಸ್ಕೈ ಮಾಟಗಾತಿಯಂತೆ ಬಟ್ಟೆ ಧರಿಸಿ ತನ್ನ ಅಜ್ಜಿಯರ ಮನೆಗೆ ಹೋಗಲು ಪ್ಲಾನ್ ಮಾಡಿದ್ದಾಳೆ ಅಂತಾ ಆಕೆಯ ತಾಯಿ ಹೇಳಿದ್ದಾರೆ. ಈ ಬಾರಿ ಮತ್ತೆ ಆಕೆ ಯಾವ ರೀತಿಯ ಭಯಾನಕ ಆಟಿಕೆಯನ್ನು ಮನೆಗೆ ತರುತ್ತಾಳೋ ದೇವರಿಗೆ ಗೊತ್ತು ಅಂತಾ ತಾಯಿ ಹೆದರಿಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link