Viral News: ಮುಂದಿನ ವರ್ಷ ಭೂಮಿಯ ಮೇಲೆ ಕಾಣಿಸಿಕೊಳ್ಳಲಿವೆ ಮನುಷ್ಯರ ರೀತಿ ಕಾಣುವ ಮೀನುಗಳು! ಭವಿಷ್ಯವಾಣಿ ಮಾಡಿದ ವ್ಯಕ್ತಿ ಯಾರು ಗೊತ್ತಾ?
1. ಭೂಮಿಯ ಮೇಲೆ ಉಲ್ಕಾಶಿಲೆಗಳ ಮಳೆ - ಡೈಲಿ ಸ್ಟಾರ್‌ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಸಾಮಾಜಿಕ ಮಾಧ್ಯಮ (Social Media Platform)ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ನಲ್ಲಿನ (TikTok Account) ಖಾತೆಯೊಂದು ವೀಡಿಯೊವನ್ನು ಪೋಸ್ಟ್ ಮಾಡಿದೆ, ಅದರಲ್ಲಿ ಭೂಮಿಯ ಮೇಲೆ ಉಲ್ಕಾಶಿಲೆಗಳ ಮಳೆಯಾಗಲಿದೆ, ಅದು ಭೂಮಿಗೆ (Earth) ಅಪ್ಪಳಿಸಲಿದೆ ಎಂದು ಭವಿಷ್ಯ ನುಡಿದಿದೆ. ಇದರೊಂದಿಗೆ ಅನ್ಯಗ್ರಹ ಜೀವಿಗಳೂ ಭೂಮಿಗೆ ಬರಲಿವೆ ಎನ್ನಲಾಗಿದೆ.
2. ವಿಚಿತ್ರ ಹಕ್ಕು ಮಂಡಿಸಿದ ಟೈಮ್ ಟ್ರ್ಯಾವಲರ್ - ಟಿಕ್-ಟಾಕ್ ಖಾತೆಯಾಗಿರುವ @aesthetictimewarper ಮೂಲಕ ವಿಡಿಯೋ ಹಂಚಿಕೊಂಡು ಏಲಿಯನ್ಸ್ ಹಾಗೂ ಟೈಮ್ ಟ್ರ್ಯಾವಲಿಂಗ್ ಕುರಿತು ಹಕ್ಕು ಮಂಡಿಸಲಾಗಿದ್ದು ಇದೆ ಮೊದಲ ಬಾರಿ ಆಗಿಲ್ಲ. ಈ ಹಿಂದೆಯೂ ಕೂಡ ವ್ಯಕ್ತಿಯೋರ್ವ ಮಾನುಕುಲದ ರಕ್ಷಣೆಗಾಗಿ ಟೈಮ್ ಟ್ರಾವೆಲ್ ನಡೆಸಿ ಭವಿಷ್ಯದ ಪ್ರಪಂಚದಿಂದ ಬಂದಿರುವುದಾಗಿ ಹೇಳಿದ್ದ.
3. ಪರ್ಯಾಯ ಬ್ರಹ್ಮಾಂಡದ ಕುರಿತು ಹೇಳಿಕೆ ನೀಡಿ ಆಶ್ಚರ್ಯಕ್ಕೀಡು ಮಾಡಿದ್ದ - ಜುಲೈನಲ್ಲಿ, ವ್ಯಕ್ತಿಯು 2021 ಮತ್ತು 2022 ರ ಅಂತ್ಯದ ನಡುವಿನ ಐದು ಪ್ರಮುಖ ದಿನಾಂಕಗಳನ್ನು ಟಿಪ್ಪಣಿ ಮಾಡಲು ಕೇಳಿಕೊಂಡಿದ್ದನು. ಮೂರು ಹದಿಹರೆಯದವರು (Teens) ಡಿಸೆಂಬರ್‌ನಲ್ಲಿ ಪರ್ಯಾಯ ವಿಶ್ವಕ್ಕೆ (Alternate Universe) ಪೋರ್ಟಲ್ ತೆರೆಯಲು ಟಿ ರೆಕ್ಸ್ ಡೈನೋಸಾರ್ ಎಗ್ (T Rex Dinosaur Egg) ಅನ್ನು ಬಳಸಿ ಎಂದು ಟೈಮ್ ಟ್ರಾವೆಲಮಾಡಲಿದ್ದಾರೆ ಎಂದು ಆ ವ್ಯಕ್ತಿ ಹೇಳಿದ್ದ.
4. ಮಾನವ ಮೀನಿನ ಜೀವನದ ಇರುವಿಕೆ - 2022 ರಲ್ಲಿ, ಅಟ್ಲಾಂಟಿಸ್‌ನ ಪೌರಾಣಿಕ ಮುಳುಗಿದ ನಗರವು ಅಟ್ಲಾಂಟಿಕ್ ಮಹಾಸಾಗರದಲ್ಲಿ ಪತ್ತೆಯಾಗಲಿದೆ ಎಂದು ಕೂಡ ಆತ ಹಕ್ಕು ಮಂಡಿಸಿದ್ದ. ಇದು ಮಾನವ-ಮೀನು ಜೀವನಕ್ಕೆ ನೆಲೆಯಾಗಿದೆ ಎಂದು ಅದು ಹೇಳಿಕೊಂಡಿದೆ. ಒಂದು ರೀತಿಯಲ್ಲಿ, ಅಪಾಯಕಾರಿ ಮೀನುಗಳು ಮನುಷ್ಯರಂತೆ ಕಾಣುತ್ತವೆ ಎಂದು ಆತ ಹೇಳಿದ್ದ.
5. ಈ ಟಿಕ್-ಟಾಕ್ ಖಾತೆಯನ್ನು ಜನರು ಫೇಕ್ ಖಾತೆ ಎನ್ನುತ್ತಿದ್ದಾರೆ - ಆಗಸ್ಟ್‌ನಲ್ಲಿ ನಾಸಾ ಪ್ರತಿಬಿಂಬಿತ ಭೂಮಿಯನ್ನು ಕಂಡುಹಿಡಿಯಲಿದೆ ಮತ್ತು ಅಕ್ಟೋಬರ್‌ನಲ್ಲಿ ಎಂಟು ಮಾನವರು ಸೂರ್ಯನ ಅಪಾರ ಶಕ್ತಿಯಿಂದ ಮಹಾಶಕ್ತಿಗಳನ್ನು ಪಡೆಯುತ್ತಾರೆ ಎಂದು ಇದೇ ಟಿಕ್ ಟಾಕ್ ಖಾತೆಯಲ್ಲಿ ಹೇಳಲಾಗಿದೆ. ಆದರೆ ಬಳಕೆದಾರರು ಈ ಖಾತೆಯ ವೀಡಿಯೊಗಳನ್ನು ನಂಬುತ್ತಿಲ್ಲ, ಆದರೆ ಈ ಕುರಿತು ಗೇಲಿ ಮಾತ್ರ ಖಂಡಿತ ಮಾಡುತ್ತಿದ್ದಾರೆ. ಭವಿಷ್ಯ ನುಡಿದ ವ್ಯಕ್ತಿಯ ಖಾತೆಗೆ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ ಮತ್ತು ಅವನನ್ನು ನಕಲಿ ಎಂದು ಹೇಳಿದ್ದಾರೆ. ಇದಕ್ಕೆ, @aesthetictimewarper ನಾನು ಆ ಐದು ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಮತ್ತೊಮ್ಮೆ ಹೇಳುತ್ತೇನೆ ಎಂದಿದ್ದಾನೆ.