ಈ ಸ್ಪರ್ಧೆಯಲ್ಲಿ ನೀವು ನಿಮ್ಮ ಹೆಂಡ್ತಿನಾ ಹೆಗಲ ಮೇಲೆ ಹೊತ್ತು ಒಡ್ಬೆಕಂತೆ, ಗೆದ್ರೆ ಏನ್ ಸಿಗುತ್ತೆ ಗೊತ್ತಾ?

Mon, 07 Aug 2023-10:30 pm,

ವೈಫ್ ಕ್ಯಾರಿಯಿಂಗ್ ವರ್ಲ್ಡ್ ಚಾಂಪಿಯನ್‌ಶಿಪ್ 31 ವರ್ಷ ಹಳೆಯ ಕ್ರೀಡೆಯಾಗಿದೆ. ಇದು 1992 ರಲ್ಲಿ ಫಿನ್‌ಲ್ಯಾಂಡ್‌ನ ಉಕೊಂಕಾಂಟೊದ ಸೋಂಕಜಾರ್ವಿಯಲ್ಲಿ ಈ ಕ್ರೀಡೆಯನ್ನು ಮೊದಲ ಬಾರಿಗೆ ಆಯೋಜಿಸಲಾಯಿತು.  

ಈ ಸಂಪ್ರದಾಯದ ಎಲ್ಲಿಂದ ಆರಂಭಗೊಂಡಿತು ಎಂಬುದರ ನಿಖರ ಮಾಹಿತಿ ಇಲ್ಲ, ಆದರೆ ಪ್ರತಿಯೊಬ್ಬರೂ ಈ ಕುರಿತು ವಿಭಿನ್ನ ಕಥೆಗಳನ್ನು ಹೇಳುತ್ತಾರೆ. ಇಂದು ಪತಿ ಪತ್ನಿಯನ್ನು ಭುಜದ ಮೇಲೆ ಹೊತ್ತು ಸಾಗುವುದು ವಿಶ್ವಾದ್ಯಂತ ಟ್ರೆಂಡ್ ಆಗಿದ್ದು, ಹಲವು ದೇಶಗಳ ಜನರು ಈ ಆಟದಲ್ಲಿ ತೊಡಗಿದ್ದಾರೆ.  

ಭಾಗವಹಿಸುವವರು ತಮ್ಮ ಹೆಂಡತಿಯನ್ನು ಹಲವಾರು ವಿಧಗಳಲ್ಲಿ ಹೊತ್ತುಕೊಳ್ಳಲು ಅನುಮತಿಸಲಾಗಿದೆ. ಅಲ್ಲಿ ಹೆಂಡತಿ ತನ್ನ ಗಂಡನ ಭುಜದ ಸುತ್ತ ತನ್ನ ಕಾಲುಗಳನ್ನು ಲಾಕ್ ಮಾಡಿ ತಲೆಕೆಳಗಾಗಿ ನೇತಾಡುತ್ತಾಳೆ. ಗಂಡಂದಿರು ತಮ್ಮ ಹೆಂಡತಿಯನ್ನು ಹೆಗಲ ಮೇಲೆ ನೇತುಹಾಕಿ ಓಟವನ್ನು ನಡೆಸುತ್ತಾರೆ ಮತ್ತು ವಿಜೇತರಿಗೆ ಬಹುಮಾನ ಸಿಗುತ್ತದೆ.  

ಈ ಓಟವನ್ನು ಗೆಲ್ಲುವಲ್ಲಿ ಯಶಸ್ವಿಯಾದವರಿಗೆ ಅವರ ಹೆಂಡತಿಯ ತೂಕಕ್ಕೆ ಸಮನಾದ ಬಿಯರ್ ಬಹುಮಾನದ ರೂಪದಲ್ಲಿ ಪಡೆಯುತ್ತಾರೆ. ಈ ಆಟವು ವಿಶ್ವಾದ್ಯಂತ ಬಹಳ ಜನಪ್ರಿಯವಾಗಿದೆ. ಆಸ್ಟ್ರೇಲಿಯಾ, ಬ್ರಿಟನ್, ಅಮೆರಿಕ, ಭಾರತ, ಹಾಂಗ್ ಕಾಂಗ್ ಮತ್ತು ಜರ್ಮನಿ ಈಗ ಈ ಆಟವನ್ನು  ಅನುಸರಿಸುತ್ತಿವೆ.  

ವೈಫ್ ಕ್ಯಾರಿಯಿಂಗ್ ಚಾಂಪಿಯನ್‌ಶಿಪ್ ಅನ್ನು ವಿಶ್ವದ 7 ವಿಚಿತ್ರವಾದ 'ಶಕ್ತಿಯ ಸಾಹಸಗಳಲ್ಲಿ' ಒಂದೆಂದು ಪರಿಗಣಿಸಲಾಗಿದೆ. ನಾಮನಿರ್ದೇಶಿತ ಪತ್ನಿಯ ವಯಸ್ಸು ಕನಿಷ್ಠ 17 ವರ್ಷಗಳು ಮತ್ತು ಅವರ ತೂಕ ಕನಿಷ್ಠ 49 ಕೆಜಿ ಇರಬೇಕು. ಹೆಂಡತಿ ಹಗುರವಾಗಿದ್ದರೆ ಅಧಿಕಾರಿಗಳು ಕೊಡುವ ಭಾರವಾದ ಜೋಳಿಗೆಯನ್ನು ಹೊತ್ತುಕೊಂಡು ಓಡಬೇಕಾಗುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link