Viral News: ಹಣ ಉಳಿಸಲು ಪತಿಯ ಬಟ್ಟೆಯಿಂದ ಪತ್ನಿ ಈ ಕೆಲಸ ಮಾಡಿದಳು..!

Tue, 05 Oct 2021-6:00 pm,

ಕಡಿಮೆ ಬೆಲೆಯಲ್ಲಿ ಉತ್ತಮವಾದ ವಸ್ತುಗಳನ್ನು ಖರೀದಿಸಲು ಇಷ್ಟಪಡುವ ಗೃಹಣಿಯರಲ್ಲಿ ಗ್ರೇಸ್ ಸೆರ್ಗುಯಿ ಕೂಡ ಒಬ್ಬರು. ಅವರು ತುಂಬಾ ಬುದ್ಧಿವಂತಿಕೆಯಿಂದ ಈ ವಿಷಯವನ್ನು ಹ್ಯಾಂಡಲ್ ಮಾಡುತ್ತಾರೆ. ಶಾಪಿಂಗ್‌ಗಾಗಿ ಖರ್ಚು ಮಾಡಿದ ಪ್ರತಿ ಪೈಸೆ ಹಣವನ್ನು ಹೇಗೆ ಮರುಪಡೆಯುವುದು ಎಂದು ಅವರಿಗೆ ತಿಳಿದಿದೆ. ಇದಕ್ಕಾಗಿ ಅವರು ವಿಚಿತ್ರವಾದ ಕೆಲಸವನ್ನು ಮಾಡುತ್ತಾರೆ. ತನಗಾಗಿ ಪ್ರತ್ಯೇಕವಾಗಿ ಬಟ್ಟೆಗಳನ್ನು ಖರೀದಿಸದೆ, ಅವರು ಪತಿ ರಯಾನ್ ಕೆನ್ವರ್ಡ್ ಬಟ್ಟೆಗಳನ್ನು ಧರಿಸುತ್ತಾಳೆ ಮತ್ತು ಈ ಮೂಲಕ ಅವಳು ದೊಡ್ಡ ಮಟ್ಟದಲ್ಲಿ ಹಣ ಉಳಿಸುತ್ತಾಳೆ.

ದಿ ಸನ್ ನ ವರದಿಯ ಪ್ರಕಾರ, ದಂಪತಿಗಳು ಇತ್ತೀಚೆಗೆ ಚಳಿಗಾಲಕ್ಕಾಗಿ ಶಾಪಿಂಗ್ ಮಾಡಿದ್ದರು. ಅಚ್ಚರಿಯ ವಿಷಯವೆಂದರೆ ಇಬ್ಬರು ಸೇರಿ 77 ಸಾವಿರ ರೂ.ನಷ್ಟು ಹಣ ಉಳಿಸಿದ್ದಾರೆ. ಈ ದಂಪತಿ ಇಬ್ಬರಿಗೂ ಹೊಂದುವಂತಹ ಬಟ್ಟೆಗಳನ್ನೇ ಖರೀದಿಸಿದ್ದಾರೆ.

ಗ್ರೇಸ್ ಮತ್ತು ರಯಾನ್ ಯಾವಾಗಲೂ ಇಬ್ಬರೂ ಬಳಸಬಹುದಾದ ವಸ್ತುಗಳನ್ನು ಮಾತ್ರ ಖರೀದಿಸುತ್ತಾರೆ. ಇವುಗಳಲ್ಲಿ ಮುಖ್ಯವಾಗಿ ಬಟ್ಟೆ, ಕನ್ನಡಕ, ಬೆಲ್ಟ್ ಇತ್ಯಾದಿ ಸೇರಿವೆ. ಈ ರೀತಿಯಾಗಿ ಅವರ ಶಾಪಿಂಗ್‌ನ ವೆಚ್ಚವನ್ನು ಉಳಿಸಲಾಗುತ್ತದೆ. ನೀವು ಕೂಡ ಇದನ್ನೇ ಪಾಲಿಸಿ ಅಂತಾ ಸಲಹೆ ನೀಡಿದ್ದಾರೆ.

34 ವರ್ಷದ ಗ್ರೇಸ್ ಹೇಳುವ ಪ್ರಕಾರ, ‘ನಾವು ಖರೀದಿಸುವ ಕೆಲವು ಬಟ್ಟೆಗಳು ತುಂಬಾ ದುಬಾರಿಯಾಗಿವೆ. ಆದ್ದರಿಂದ ನಮ್ಮಿಬ್ಬರಿಗೂ ಪ್ರತ್ಯೇಕ ಬಟ್ಟೆಗಳನ್ನು ಖರೀದಿಸುವ ಬದಲು ನಾವು ಇಬ್ಬರ ನಡುವೆ ಒಂದು ಉತ್ಪನ್ನವನ್ನು ಮಾತ್ರ ತೆಗೆದುಕೊಳ್ಳುತ್ತೇವೆ. ಇಬ್ಬರೂ ಅದನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಬಳಸುತ್ತೇವೆ’ ಅಂತಾ ಹೇಳಿದ್ದಾರೆ.

ಈ ದಂಪತಿ ಇಬ್ಬರೂ ಧರಿಸಬಹುದಾದ ಬಟ್ಟೆಗಳನ್ನು ಹುಡುಕಲು ತುಂಬಾ ಕಷ್ಟಪಡುತ್ತಾರೆ. ಗ್ರೇಸ್ ಹೇಳುವ ಪ್ರಕಾರ, ‘ನಮಗೆ ಹೊಂದಾಣಿಕೆಯಾಗುವ ಶರ್ಟ್‌ಗಳನ್ನು ನಾವು ಖರೀದಿಸುತ್ತೇವೆ. ನಾವು ಅವುಗಳನ್ನು ಶೇ.50ರಷ್ಟು ರಿಯಾಯಿತಿ ದರದಲ್ಲಿ ಖರೀದಿಸಿದ್ದೇವೆ. ಈ ಕಾರಣದಿಂದಾಗಿ ನಾವು ಡಬಲ್ ಉಳಿತಾಯವನ್ನು ಪಡೆದುಕೊಂಡಿದ್ದೇವೆ. ಕೆಲವು ಬ್ರಾಂಡ್‌ಗಳು ತಮ್ಮ ಉತ್ಪನ್ನಗಳನ್ನು ನೇರವಾಗಿ ಯೂನಿಸೆಕ್ಸ್ ಎಂದು ಕರೆಯದಿದ್ದರೂ, ಅವುಗಳನ್ನು ಹುಡುಕಲು ನಾವು ಕಷ್ಟಪಡಬೇಕು. ಆದರೆ ನೀವು ಮತ್ತು ನಿಮ್ಮ ಸಂಗಾತಿ ಒಂದೇ ಶೈಲಿ ಮತ್ತು ಎತ್ತರವನ್ನು ಹೊಂದಿರುವಾಗ ಬಟ್ಟೆಗಳನ್ನು ಹಂಚಿಕೊಳ್ಳುವಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ನಾನು ಭಾವಿಸುತ್ತೇನೆ’ ಅಂತಾ ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link