ವಿರಾಟ್ ಕೊಹ್ಲಿ ಸಾವಿರ ಕೋಟಿ ಒಡೆಯ… ಹಾಗಾದ್ರೆ ಅನುಷ್ಕಾ ಶರ್ಮಾ ಎಷ್ಟು ಕೋಟಿ ಆಸ್ತಿಯ ಒಡತಿ?
ನಾವಿಂದು ಈ ವರದಿಯಲ್ಲಿ ಈ ಜೋಡಿಯ ವಾರ್ಷಿಕ ಆದಾಯ ಎಷ್ಟು? ಗಳಿಕೆಯಲ್ಲಿ ಯಾರು ಮುಂದೆ ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ವಿರಾಟ್ ಕೊಹ್ಲಿ ಗಳಿಕೆಯ ಬಗ್ಗೆ ಮಾತನಾಡುವುದಾದರೆ, ವಿಶ್ವದ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಕೊಹ್ಲಿ ಹೆಸರು ಕೂಡ ಸೇರಿದೆ. ಫೈನಾನ್ಶಿಯಲ್ ಎಕ್ಸ್’ಪ್ರೆಸ್ ಪ್ರಕಾರ, ಕ್ರಿಕೆಟಿಗನ ಒಟ್ಟು ಸಂಪತ್ತು 1050 ಕೋಟಿ ರೂ. ಇನ್ನು ಬಿಸಿಸಿಐನಿಂದ ವಾರ್ಷಿಕ 7 ಕೋಟಿ ರೂ. ಪಡೆಯುತ್ತಾರೆ.
ಇದಲ್ಲದೆ, ವಿರಾಟ್ ಅನೇಕ ದೊಡ್ಡ ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಇದರಿಂದಾಗಿ ಅವರು ಸಾಕಷ್ಟು ಗಳಿಸುತ್ತಾರೆ. ಡಿಎನ್‌ಎ ಪ್ರಕಾರ, ಕೊಹ್ಲಿ ಜಾಹೀರಾತಿಗೆ 7.5 ರಿಂದ 10 ಕೋಟಿ ರೂ. ಪಡೆಯುತ್ತಾರೆ.
ಇಷ್ಟೇ ಅಲ್ಲ, ವಿರಾಟ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್’ಗಳ ಮೂಲಕವೂ ಸಾಕಷ್ಟು ಹಣ ಗಳಿಕೆ ಮಾಡುತ್ತಾರೆ. ಡಿಎನ್‌ಎಯಲ್ಲಿನ ವರದಿಯ ಪ್ರಕಾರ, ವಿರಾಟ್ ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್’ಗಳಲ್ಲಿ ಒಂದು ಪೋಸ್ಟ್’ಗೆ ಸುಮಾರು 8.9 ಕೋಟಿ ರೂ. ಪಡೆಯುತ್ತಾರೆ. ಇನ್‌ಸ್ಟಾಗ್ರಾಮ್‌ನ ಅತ್ಯಂತ ಪ್ರಸಿದ್ಧ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕೊಹ್ಲಿಯ ಹೆಸರನ್ನು ಸೇರಿಸಲಾಗಿದೆ.
ವಿರಾಟ್’ಗೆ ಕಾರುಗಳೆಂದರೆ ತುಂಬಾ ಇಷ್ಟ. ಅವರ ಬಳಿ ಆಡಿ ಕ್ಯೂ7, ಆಡಿ ಆರ್ ಎಸ್5, ಆಡಿ ಆರ್ 8 ಎಲ್ ಎಂ, ಆಡಿ ಎ8ಎಲ್ ನಂತಹ ಹಲವು ದುಬಾರಿ ಕಾರುಗಳ ಸಂಗ್ರಹವಿದ್ದು, ಇದರ ಬೆಲೆ ಕೋಟಿಗಟ್ಟಲೇ ಇದೆ. ಇದಲ್ಲದೇ ಕೊಹ್ಲಿ ಮುಂಬೈನಲ್ಲಿ 'ಒನ್8 ಕಮ್ಯೂನ್' ಹೆಸರಿನ ರೆಸ್ಟೋರೆಂಟ್ ಅನ್ನು ಸಹ ನಡೆಸುತ್ತಿದ್ದಾರೆ.
ಇನ್ನು ಅನುಷ್ಕಾ ಶರ್ಮಾ ಬಗ್ಗೆ ಮಾತನಾಡುವುದಾದರೆ, ಡಿಎನ್‌ಎ ವರದಿಯ ಪ್ರಕಾರ, ಅವರ ನಿವ್ವಳ ಮೌಲ್ಯ 250-300 ಕೋಟಿ ರೂ. ನಟಿಯ ವಾರ್ಷಿಕ ಗಳಿಕೆ 45 ಕೋಟಿ ರೂ.
ಅನುಷ್ಕಾ ಚಿತ್ರವೊಂದಕ್ಕೆ 7 ಕೋಟಿ ರೂ. ಚಾರ್ಜ್ ಮಾಡುತ್ತಾರಂತೆ. ಚಲನಚಿತ್ರಗಳ ಹೊರತಾಗಿ, ಅನುಷ್ಕಾ ಬ್ರಾಂಡ್ ಎಂಡಾರ್ಸ್‌ಮೆಂಟ್’ಗಳಿಂದಲೂ ಉತ್ತಮ ಮೊತ್ತವನ್ನು ಗಳಿಸುತ್ತಾರೆ. ಆಕೆ ಒಂದು ಜಾಹೀರಾತಿಗೆ ಸುಮಾರು 5-10 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ಈ ವರದಿಯ ಪ್ರಕಾರ ವಿರಾಟ್ ಕೊಹ್ಲಿ ಗಳಿಕೆಯಲ್ಲಿ ಪತ್ನಿ ಅನುಷ್ಕಾ ಶರ್ಮಾ ಅವರಿಗಿಂತ ಬಹಳ ಮುಂದಿದ್ದಾರೆ.