ನಿವೃತ್ತಿ ನಿರ್ಧಾರದ ಶಾಕ್ ಬೆನ್ನಲ್ಲೇ ಅಚ್ಚರಿಯ ಸಂಗತಿ ರಿವೀಲ್! ಈ ಕಾರಣಕ್ಕೆ ಭಾರತ ತೊರೆದು ಲಂಡನ್’ನಲ್ಲಿ ಸೆಟಲ್ ಆಗ್ತಿದ್ದಾರೆ ವಿರಾಟ್-ಅನುಷ್ಕಾ!
ICC T20 ವಿಶ್ವಕಪ್ 2024 ಗೆದ್ದ ನಂತರ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಲಂಡನ್’ಗೆ ಸೆಟಲ್ ಆಗುತ್ತಿದ್ದಾರೆ ಎಂಬ ವದಂತಿ ಅನೇಕ ದಿನಗಳಿಂದ ಚಾಲ್ತಿಯಲ್ಲಿದೆ
ಈ ಬೆನ್ನಲ್ಲೇ ಲಂಡನ್’ನಲ್ಲಿ ನೆಲೆಸಲು ನಿರ್ಧಾರ ಮಾಡಲು ಕಾರಣವೇನೆಂಬುದು ಸಹ ರಿವೀಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮತ್ತು ಆಪ್ತ ಮೂಲಗಳಿಂದ ಬಂದ ಮಾಹಿತಿ ಪ್ರಕಾರ, ವಿರುಷ್ಕಾ ದಂಪತಿ ಶಾಶ್ವತವಾಗಿ ಲಂಡನ್’ಗೆ ಶಿಫ್ಟ್ ಆಗಿದ್ದಾರೆ. ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಇದುವರೆಗೆ ಗಮನಿಸಿದಂತೆ ವಿರಾಟ್ ಆಗಲಿ, ಅನುಷ್ಕಾ ಆಗಲಿ ತಮ್ಮ ಮಕ್ಕಳ ಫೇಸ್ ರಿವೀಲ್ ಮಾಡಿಲ್ಲ. ಅವರನ್ನು ಖಾಸಗಿಯಾಗಿಯೇ ಬೆಳೆಸಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲದೆ, ಅನೇಕ ಸಂದರ್ಭಗಳಲ್ಲಿ ಮಕ್ಕಳ ಫೋಟೋ ತೆಗೆದುಕೊಳ್ಳಬೇಡಿ ಎಂದು ಮಾಧ್ಯಮಗಳಿಗೆ ವಿನಂತಿಸಿರುವುದು ಕೂಡ ಕಂಡುಬಂದಿದೆ.
ವಿಶ್ವಾಸನೀಯ ಮೂಲಗಳ ಪ್ರಕಾರ, ತಮ್ಮ ಮಕ್ಕಳು ಸೆಲೆಬ್ರಿಟಿಗಳಾಗಬಾರದು ಎಂದು ವಿರುಷ್ಕಾ ಆಸೆಯಂತೆ. ಸಾಮಾನ್ಯರಂತೆ ಬದುಕು ನಡೆಸಬೇಕು, ಅವರ ಫೋಟೋ ಹೊರಬಂದರೆ, ಎಲ್ಲೇ ಹೋದರೂ ಮಾಧ್ಯಮಗಳು ಅವರನ್ನು ಹಿಂಬಾಲಿಸುತ್ತವೆ. ಜೊತೆಗೆ ವಿರುಷ್ಕಾ ಪ್ರಭಾವ ಅವರ ಮೇಲೆ ಬೀರಬಾರದು ಎಂಬ ಉದ್ದೇಶದಿಂದ ದೇಶ ಬಿಟ್ಟು ದೂರ ಉಳಿಯಲು ಬಯಸಿದ್ದಾರಂತೆ.
ವಿರಾಟ್ ಯುರೋಪ್’ನಲ್ಲಿ ವಾಸಿಸಲು ಇಷ್ಟಪಡುತ್ತಿದ್ದಾರೆ. ಇದಕ್ಕೆ ಕಾರಣ ಅಲ್ಲಿನ ಜನರು ಅವರನ್ನು ಗುರುತಿಸುವುದಿಲ್ಲ. ಅಲ್ಲಿ ಸಾಮಾನ್ಯ ಜೀವನವನ್ನು ನಡೆಸಬಹುದು. ತಮ್ಮ ಕುಟುಂಬದ ಮೇಲೆ ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಬೀದಿಗಿಳಿಯಬೇಕು ಎಂಬ ಕಾರಣಕ್ಕೆ ಲಂಡನ್’ಗೆ ಶಿಫ್ಟ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಅಂದಹಾಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಯುಕೆ ಕಂಪನಿ ಮ್ಯಾಜಿಕ್ ಲ್ಯಾಂಪ್’ನ ನಿರ್ದೇಶಕರು. ಇದನ್ನು 2022 ರಲ್ಲಿ ಸ್ಥಾಪಿಸಲಾಗಿದೆ. ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಕಂಪನಿ ಇದಾಗಿದ್ದು,ಯುಕೆಯ ವೆಸ್ಟ್ ಯಾರ್ಕ್’ಷೈರ್’ನಲ್ಲಿದೆ.