ವಿರಾಟ್ ಕೊಹ್ಲಿ ಮತ್ತೆ ಅನುಷ್ಕಾ ಶರ್ಮಾ ವಾಸಿಸುತ್ತಿದ್ದಾರೆ ಈ ಐಷಾರಾಮಿ ಬಂಗಲೆಯಲ್ಲಿ, ಇದರ ಬೆಲೆ ಎಷ್ಟು ಗೊತ್ತಾ?
ದೊಡ್ಡ ಮನೆ ಪೀಠೋಪಕರಣಗಳು : ವಿರುಷ್ಕಾ ಅವರ ಕನಸಿನ ಮನೆ ಓಂಕಾರ್ 1973 ಅಪಾರ್ಟ್‌ಮೆಂಟ್‌ನ 35 ನೇ ಮಹಡಿಯಲ್ಲಿದೆ. ಅವರ ವಾಸದ ಕೋಣೆ ಸಾಕಷ್ಟು ವಿಶಾಲವಾಗಿದೆ. ಅಲ್ಲಿ ಆಧುನಿಕ ಪೀಠೋಪಕರಣಗಳನ್ನು ಇರಿಸಲಾಗುತ್ತದೆ ಮತ್ತು ಗೋಡೆಗಳಿಗೆ ಬಿಳಿ ಬಣ್ಣ ಬಳಿಯಲಾಗಿದೆ. ವಿರುಷ್ಕಾ ತನ್ನ ಮನೆಯಲ್ಲಿ ಮರದ ನೆಲಹಾಸನ್ನು ಮಾಡಿಸಿದ್ದಾರೆ. ಇದರೊಂದಿಗೆ, ಮರದ ಪೀಠೋಪಕರಣಗಳನ್ನು ಸಹ ಇರಿಸಲಾಗುತ್ತದೆ.
ಮನೆಯ ಗಾರ್ಡನ್ : ಆಗಾಗ್ಗೆ ಅನುಷ್ಕಾ ತನ್ನ ಮನೆಯ ಗಾರ್ಡನ್ ನಲ್ಲಿ ತೆಗೆದಿರುವ ಫೋಟೋಗಳನ್ನ ಹಂಚಿಕೊಂಡಿರುವುದನ್ನ ನೋಡಿರಬಹುದು. ಅನುಷ್ಕಾಗೆ ಗಿಡ-ಮರಗಳ ಮೇಲೆ ಅಪಾರ ಪ್ರೀತಿ.
ಇವರ ಮನೆ ಬಂಗಲೆಯ ಬಾಲ್ಕನಿ ಎಷ್ಟು ಸುಂದರ : ಈ ಐಷಾರಾಮಿ ಮನೆಯ ಬಾಲ್ಕನಿಯು ತುಂಬಾ ಸುಂದರವಾಗಿದೆ. ಹಬ್ಬದ ಸಂದರ್ಭದಲ್ಲಿ ಅನುಷ್ಕಾ ಮತ್ತು ವಿರಾಟ್ ಫೋಟೋಗಳನ್ನ ಇಲ್ಲಿ ಕ್ಲಿಕ್ಕಿಸಿ ಶೇರ್ ಮಾಡಿಕೊಳ್ಳುತ್ತಾರೆ. ದೀಪಾವಳಿಯಂದು, ಈ ದಂಪತಿಗಳು ಬಾಲ್ಕನಿಯಲ್ಲಿ ಫೋಟೋಗಳನ್ನ ತೆಗೆದುಕೊಂಡು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ಬಹಳ ಸುಂದರವಾಗಿದೆ ವಿರಾಟ್ ಕೊಹ್ಲಿ ಮನೆ : ವಿರಾಟ್ ಮತ್ತು ಅನುಷ್ಕಾ ಅವರ ಐಷಾರಾಮಿ ಮನೆ ಮುಂಬೈನ ವರ್ಲಿಯಲ್ಲಿ ಇದೆ. ಅವರ ಅಪಾರ್ಟ್ ಮೆಂಟ್ ನ ಹೆಸರು 'ಓಂಕಾರ 1973'. ಮದುವೆಯ ನಂತರ, ಈ ಇಬ್ಬರೂ 2017 ರಲ್ಲಿ ಈ ಮನೆಗೆ ಬಂದು ವಾಸ ಮಾಡುತ್ತಿದ್ದಾರೆ.
ವಿರಾಟ್ ಮನೆಯ ಬೆಲೆ ಎಷ್ಟು? : ಕಿಂಗ್ ಕೊಹ್ಲಿಯ ಮನೆಯ ಗಾತ್ರವು ಕಿಂಗ್ ಸೈಜ್ ನಲ್ಲೆ ಇದೆ, ಇದರಲ್ಲಿ 4 ಬೆಡ್‌ರೂಮ್, ಒಂದು ದೊಡ್ಡ ಹಾಲ್ ಇದೆ. ವಿರಾಟ್-ಅನುಷ್ಕಾ ಅವರ ಈ ಮನೆಯ ಒಟ್ಟು ಮೌಲ್ಯ 34 ಕೋಟಿ ರೂ. ಎಂದು ಹೇಳಲಾಗಿದೆ.