ವಿರಾಟ್- ಅನುಷ್ಕಾ ವಿವಾಹವಾದ ಆ ರೊಮ್ಯಾಂಟಿಕ್ ತಾಣ ಯಾವುದು? ಅಲ್ಲಿ ಒಂದು ರಾತ್ರಿಯ ವೆಚ್ಚ ಎಷ್ಟು ಗೊತ್ತಾ?

Fri, 27 Oct 2023-9:59 pm,

ಈ ವರದಿಯಲ್ಲಿ ವಿರಾಟ್ ಮತ್ತು ಅನುಷ್ಕಾ ಮದುವೆಯಾದ ಆ ರೊಮ್ಯಾಂಟಿಕ ತಾಣ ಯಾವುದು? ಅಲ್ಲಿ ಒಂದು ರಾತ್ರಿ ಉಳಿದುಕೊಳ್ಳಲು ತಗಲುವ ವೆಚ್ಚ ಎಷ್ಟು ಎಂಬೆಲ್ಲಾ ವಿಷಯದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.

ಫೋರ್ಬ್ಸ್‌’ನ ವರದಿಯ ಪ್ರಕಾರ, ಬೋರ್ಗೊ ಫಿನೋಚಿಯೆಟೊ ಎಂಬ ತಾಣ ಅತ್ಯಂತ ದುಬಾರಿ ವೆಡ್ಡಿಂಗ್ ಡೆಸ್ಟಿನೇಶನ್’ಗಳಲ್ಲಿ ಒಂದು. ಇಲ್ಲಿ ಒಂದು ವಾರ ಉಳಿದುಕೊಳ್ಳಬೇಕಾದಲ್ಲ ಬರೋಬ್ಬರಿ ರೂ. 94,83,210 ಪಾವತಿ ಮಾಡಬೇಕು.

ಅಂದರೆ ಒಂದು ರಾತ್ರಿಗೆ 13,54,744 ರೂ.  ಎಂಟು ನೂರು ವರ್ಷಗಳಷ್ಟು ಹಳೆಯದಾದ ಪ್ರದೇಶ ಇದಾಗಿದ್ದು, ಈ ತಾಣದ ಮಾಲೀಕ ಜಾನ್ ಫಿಲಿಪ್ಸ್.

ಇನ್ನು ವಿರುಷ್ಕಾ ಮದುವೆಗೆ ಕೇವಲ ಆಯ್ದ ಅತಿಥಿಗಳಿಗೆ ಮಾತ್ರ ಪ್ರವೇಶವಿತ್ತು. ಆಮಂತ್ರಣಗಳೊಂದಿಗೆ ಆಗಮಿಸಿದ ಅತಿಥಿಗಳಿಗೆ ಮಾತ್ರ ಪ್ರವೇಶವನ್ನು ನೀಡಲಾಗಿತ್ತು.

ಫ್ಲಾರೆನ್ಸ್ ವಿಮಾನ ನಿಲ್ದಾಣದಿಂದ ಒಂದು ಗಂಟೆ ದೂರದಲ್ಲಿರುವ ಟಸ್ಕನಿಯ ರಮಣೀಯ ಸ್ಥಳಗಳಲ್ಲಿ ಬೋರ್ಗೊ ನೆಲೆಗೊಂಡಿದೆ. ಐಷಾರಾಮಿ ರೆಸಾರ್ಟ್ 60 ಅಡಿ ಅಂಡಾಕಾರದ ಈಜುಕೊಳ, ಜಿಮ್, ಸ್ಪಾ ಮತ್ತು ಟೆನ್ನಿಸ್ ಕೋರ್ಟ್ ಅನ್ನು ಹೊಂದಿದೆ. ಬೋರ್ಗೊದಲ್ಲಿ 22 ಮಲಗುವ ಕೋಣೆಗಳಿವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link