ಇದು ಮನೆಯಲ್ಲ… ಅರಮನೆ! ಎಷ್ಟೊಂದು ಅದ್ಭುತವಾಗಿದೆ ನೋಡಿ ಸಾವಿರ ಕೋಟಿ ಒಡೆಯ ವಿರಾಟ್ ಕೊಹ್ಲಿ ಸಾಮ್ರಾಜ್ಯ
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪವರ್ ಕಪಲ್ ಎಂದೇ ಖ್ಯಾತಿ ಪಡೆದಿದ್ದಾರೆ.
ಈ ಜೋಡಿಗೆ ಸಾಕಷ್ಟು ಫ್ಯಾನ್ ಫಾಲೋವಿಂಗ್ ಇದೆ. ಅಂದಹಾಗೆ ಇವರ ಜೀವನಶೈಲಿ ಸಖತ್ ಅದ್ಧೂರಿಯಾಗಿದೆ.
ಭಾರತದ ಶ್ರೀಮಂತ ಸೆಲೆಬ್ರಿಟಿ ಜೋಡಿಗಳ ಪಟ್ಟಿಯಲ್ಲಿ ಇವರಿಬ್ಬರ ಹೆಸರು ಸೇರಿರುವುದು ನಿಮಗೆ ಗೊತ್ತೇ
ವರದಿಯ ಪ್ರಕಾರ, ವಿರಾಟ್ ಮತ್ತು ಅನುಷ್ಕಾ ಅವರ ಒಟ್ಟು ಸಂಪತ್ತು ಒಟ್ಟು 1200 ಕೋಟಿ ರೂ. ಇಬ್ಬರೂ ಮುಂಬೈ ಮತ್ತು ಅನೇಕ ದೊಡ್ಡ ನಗರಗಳಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದಾರೆ.
ಮುಂಬೈನ ವರ್ಲಿಯಲ್ಲಿ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ಅತ್ಯಂತ ಐಷಾರಾಮಿ ಫ್ಲಾಟ್ ಹೊಂದಿದ್ದಾರೆ. ಆದರೆ ಹರಿಯಾಣದ ಗುರುಗ್ರಾಂನಲ್ಲಿರುವ ಆಸ್ತಿ ಬಗ್ಗೆ ನಿಮಗೆ ತಿಳಿದಿದೆಯೇ?
ದೆಹಲಿಗೆ ಹೊಂದಿಕೊಂಡಿರುವ ಗುರುಗ್ರಾಮದಲ್ಲಿರುವ ವಿರಾಟ್ ಮತ್ತು ಅನುಷ್ಕಾ ಅವರ ಈ ಐಷಾರಾಮಿ ಮನೆಯಿದೆ. ಇದು ಕೇವಲ ಮನೆಯಲ್ಲ… ಅರಮನೆಗೂ ಸಮವಾಗಿದೆ.
ಗುರುಗ್ರಾಂನ ಡಿಎಫ್’ಎಲ್’ಸಿಟಿ 1 ನೇ ಹಂತದಲ್ಲಿದ್ದು, ಇದರ ಬೆಲೆ ಸುಮಾರು 80 ಕೋಟಿ ರೂ. ಇದನ್ನು ಪ್ರಸಿದ್ಧ ಇಂಟೀರಿಯರ್ ಡಿಸೈನರ್ ಕಾನ್ಫ್ಲುಯೆನ್ಸ್ ವಿನ್ಯಾಸಗೊಳಿಸಿದ್ದಾರೆ.