ಈ ಒಂದು ಘಟನೆ ಸಾಕು ಅನುಷ್ಕಾ ಕೊಹ್ಲಿ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಅನ್ನೋದಕ್ಕೆ..! ಗ್ರೇಟ್‌ ಅತ್ತಿಗೆ..

Thu, 12 Sep 2024-3:51 pm,

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಭಾರತದ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಜೋಡಿಗಳಲ್ಲಿ ಒಂದು. ಒಬ್ಬರು ಕ್ರಿಕೆಟ್ ತಾರೆ ಮತ್ತೊಬ್ಬರು ಸಿನಿಮಾ ಸೆಲೆಬ್ರಿಟಿ ಆಗಿರುವುದರಿಂದ ಎಲ್ಲರ ಕಣ್ಣು ಇವರ ಮೇಲಿದೆ. ಬಹಳ ದಿನಗಳಿಂದ ವಿರುಷ್ಕಾ ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವೇ ಬದುಕುತ್ತಿದೆ.  

ಇತ್ತೀಚೆಗೆ ಲಂಡನ್‌ನಲ್ಲಿರುವ ಕೊಹ್ಲಿ ಮತ್ತು ಅನುಷ್ಕಾ ಫೋಟೋ ವೈರಲ್ ಆಗಿದೆ. ವಿರಾಟ್ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ನೆಲೆಸಲು ಯೋಜಿಸುತ್ತಿದ್ದಾರೆ ಎಂಬ ವರದಿಗಳು ಇತ್ತೀಚೆಗೆ ಬಂದಿದ್ದವು. ಎರಡನೇ ಮಗು ಜನಿಸಿದಾಗ, ತಮ್ಮ ಖಾಸಗಿತನವನ್ನು ಗೌರವಿಸುವಂತೆ ಕೊಹ್ಲಿ ಕೇಳಿಕೊಂಡಿದ್ದರು..    

ಇದೇ ವೇಳೆ ಅನುಷ್ಕಾ ಶರ್ಮಾ ಪತಿ ವಿರಾಟ್‌ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಎನ್ನುವುದಕ್ಕೆ ಘಟನೆಯೊಂದು ಸಾಕ್ಷಿಯಾಗಿದೆ.. ಹೌದು.. ಫಾರ್ಮ್ ಕಳೆದುಕೊಂಡಾಗ ವಿರಾಟ್ ಕೊಹ್ಲಿಯನ್ನ ಟ್ರೋಲ್ ಮಾಡಲಾಗಿತ್ತು.. ಅಲ್ಲದೆ, ಅನುಷ್ಕಾರನ್ನೂ ದೂಷಿಸಲಾಯಿತು.   

ವಿರಾಟ್ ಅವರ ಪಂದ್ಯಗಳಿಗೆ ಹಾಜರಾಗಿದ್ದಕ್ಕಾಗಿ ಅನುಷ್ಕಾ ಅನ್‌ ಲಕ್ಕಿ ಅಂತ ಕೆಲ ನೆಟ್ಟಿಗರು ಟ್ರೋಲ್‌ ಮಾಡಿದ್ದರು. ಈ ಎಲ್ಲಾ ಮಾತುಗಳಿಗೆ ಹಳೆಯ ಸಂದರ್ಶನವೊಂದರಲ್ಲಿ, ಅನುಷ್ಕಾ ಶರ್ಮಾ ಮುಟ್ಟಿ ನೋಡಿಕೊಳ್ಳುವ ಹಾಗೆ ಪ್ರತಿಕ್ರಿಯೆಯನ್ನು ನೀಡಿದ್ದರು.. ಸಧ್ಯ ಈ ಒಂದು ವಿಚಾರ ಅಂತರ್ಜಾಲದಲ್ಲಿ ವೈರಲ್‌ ಆಗುತ್ತಿದೆ..   

ವಿರಾಟ್ ಎಂಟನೇ ವಯಸ್ಸಿನಿಂದ ಕ್ರಿಕೆಟ್ ಆಡುತ್ತಿದ್ದಾರೆ. ಅವರಿಗೆ ಕ್ರಿಕೆಟ್ ಬಿಟ್ಟು ಬೇರೇನೂ ಗೊತ್ತಿಲ್ಲ. ಅವರಿಗೆ ಕ್ರಿಕೆಟ್ ಮತ್ತು ತರಬೇತಿ ಮಾತ್ರ ಗೊತ್ತು. ಅದು ಅವರ ಜೀವನ. ಬಿಡುವಿನ ವೇಳೆ ಸಿಕ್ಕಾಗ ಬಾಲಿವುಡ್ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೆ, ಅಷ್ಟೇ.. ಅಂತಹವರ ಬಗ್ಗೆ ಕೆಲ ಜನರು ಮೂರ್ಖತನದಿಂದ ಮಾತನಾಡುತ್ತಾರೆ. ಅಂದರೆ ಒಬ್ಬ ಅಂತಾರಾಷ್ಟ್ರೀಯ ಆಟಗಾರನಿಗೆ ತನ್ನ ವೃತ್ತಿಜೀವನವನ್ನು ನೋಡಿಕೊಳ್ಳುವ ಸಾಮರ್ಥ್ಯವಿಲ್ಲವೇ? ಇದೆಲ್ಲ ನಿಮಗೆ ಹೇಗೆ ಅರ್ಥವಾಗುತ್ತದೆ? ನಿಮ್ಮ ಬದುಕನ್ನು ನೋಡಿಕೊಳ್ಳಿ ಎಂದು ಅನುಷ್ಕಾ ಸಂದರ್ಶನವೊಂದರಲ್ಲಿ ಹೇಳಿದ್ದರು...   

ಅಲ್ಲದೆ, 'ಇಂತಹ ವಿಷಯಗಳು ನನಗೆ ಅಪ್ರಸ್ತುತ.. ತಂದೆ ತೀರಿಕೊಂಡ ದಿನವೂ ವಿರಾಟ್ ಆಟ ಆಡಿದ್ದಾರೆ.. ಈಗ ಬಂದು ಪ್ರಶ್ನಿಸಿದರೆ ನೋವಾಗುವುದಿಲ್ಲವೇ ಅಂತ ಟ್ರೋಲ್‌ ಮಾಡುವವರ ವಿರುದ್ಧ ಅನುಷ್ಕಾ ಗುಡುಗಿದ್ದರು. ಸಧ್ಯ ಈ ಜೋಡಿ ತಮ್ಮ ಎರಡನೇ ಮಗುವಿನ ಜನನದ ನಂತರ ಲಂಡನ್‌ನಲ್ಲಿ ನೆಲೆಸಿದ್ದಾರೆ..   

ಇತ್ತೀಚೆಗೆ ಲಂಡನ್‌ನ ರೆಸ್ಟೋರೆಂಟ್‌ನಲ್ಲಿ ಅನುಷ್ಕಾ ಮತ್ತು ಕೊಹ್ಲಿ ಕಾಣಿಸಿಕೊಂಡಿದ್ದರು. ಈ ಕುರಿತ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು. ದಂಪತಿಗಳು ಸಾಮಾನ್ಯರಂತೆ ಜೀವನವನ್ನು ನಡೆಸಲು ಶಾಶ್ವತವಾಗಿ ಲಂಡನ್‌ನಲ್ಲಿ ವಾಸವಾಗುತ್ತಿದ್ದಾರೆ ಎಂಬ ಊಹಾಪೋಹಗಳೂ ಸಹ ಇವೆ.. ಮುಂದೆ ಏನಾಗುತ್ತೆ ಅಂತ ನೋಡ್ಬೇಕು..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link