ವಿರುಷ್ಕಾ ಮದುವೆ ಫೋಟೋಗಳು...!
ಇಟಲಿಯಲ್ಲಿ, ಫ್ಲಾರೆನ್ಸ್ನಲ್ಲಿ, ಡಿಸೆಂಬರ್ 11, 2017 ರಂದು ನಡೆದ ವಿರುಷ್ಕಾ ವಿವಾಹದಲಿ ಈ ಇಬ್ಬರ ಕುಟುಂಬಸ್ಥರು ಮತ್ತು ವಿಶೇಷ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಬಳಿಕ ವಿರಾಟ್ ಮತ್ತು ಅನುಷ್ಕಾ ಇಬ್ಬರೂ ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ತಮ್ಮ ವಿವಾಹದ ಶುಭ ಸುದ್ದಿಯನ್ನು ಹಂಚಿಕೊಂಡರು. ವಿರಾಟ್ ಕೊಹ್ಲಿಯವರ ಈ ಟ್ವೀಟ್ ಅನ್ನು ಸಾಕಷ್ಟು ರೀಟ್ವೀಟ್ ಆಗಿದ್ದು, ಅವರ ಮದುವೆಯ ಪೋಟೋ ರೆಕಾರ್ಡ್ ನಿರ್ಮಿಸಿತ್ತು.
ವಿರಾಟ್-ಅನುಷ್ಕಾ ಪಂಜಾಬಿ ಸಂಪ್ರದಾಯದಲ್ಲಿ ಮದುವೆಯಾದರು .46 ವರ್ಷ ವಯಸ್ಸಿನ ಪಂಜಾಬಿ ಬ್ರಾಹ್ಮಣ ಪುರೋಹಿತರ ನೇತೃತ್ವದಲ್ಲಿ ಈ ಧಾರ್ಮಿಕ ಸಮಾರಂಭ ನೆರವೇರಿತು. ಪಂಜಾಬ್ನ ಕಪುರ್ಥಾಲಾ ಜಿಲ್ಲೆಯ ಗ್ರಾಮದ ನಿವಾಸಿ ಪವನ್ ಕುಮಾರ್ ವಿರುಷ್ಕಾ ರನ್ನು ದಾಂಪತ್ಯ ಜೀವನದಲ್ಲಿ ಬಂಧಿಸಿದ ಪುರೋಹಿತರು.
ವಿರಾಟ್ ಮತ್ತು ಅನುಷ್ಕಾ ಇಟಲಿಯಲ್ಲಿ ಅತ್ಯಂತ ಸುಂದರ ಸ್ಥಳದಲ್ಲಿ 2017ರ ಡಿಸೆಂಬರ್ 11 ರಂದು ವಿವಾಹವಾದರು. ಬಳಿಕ ಡಿಸೆಂಬರ್ 21ರಂದು ದೆಹಲಿಯಲ್ಲಿ ಆರತಕ್ಷತೆ ಏರ್ಪಡಿಸಿದ್ದರು.
ದೆಹಲಿಯಲ್ಲಿನ ಅವರ ಆರತಕ್ಷತೆಗೆ ದಂಪತಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಿದ್ದರು.
ದೆಹಲಿಯ ಹೋಟೆಲ್ ತಾಜ್ನಲ್ಲಿ ನಡೆದ ಅದ್ಧೂರಿ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿ ದಂಪತಿಗೆ ಶುಭಾಶಯ ಕೋರಿದರು.
ದೆಹಲಿಯಲ್ಲಿ ನಡೆದ ಈ ಅದ್ಧೂರಿ ಆರತಕ್ಷತೆಯಲ್ಲಿ ದಂಪತಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಎಲ್ಲರ ಕಣ್ಮನ ಸೆಳೆದರು.
ದೆಹಲಿ ರಿಸೆಪ್ಷನ್ ಬಳಿಕ ಈ ದಂಪತಿ 2017ರ ಡಿಸೆಂಬರ್ 26 ರಂದು ಮುಂಬೈನಲ್ಲಿ ಗ್ರ್ಯಾಂಡ್ ರಿಸೆಪ್ಷನ್ ಏರ್ಪಡಿಸಿದ್ದರು.
ಈ ರಿಸೆಪ್ಷನ್ ನಲ್ಲಿ ಬಾಲಿವುಡ್ ನ ಹಲವು ತಾರೆಯರು ಭಾಗಿಯಾಗಿದ್ದರು.
ಕ್ರಿಕೆಟ್ ತಂಡದ ಹಲವು ನಾಯಕರೂ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.