`ನನ್ನನ್ನು ಬ್ಯಾನ್‌ ಮಾಡ್ಬೇಡಿ ಪ್ಲೀಸ್... ನಾನು ತುಂಬಾ ಒಳ್ಳೆಯ ವ್ಯಕ್ತಿ` - ಪರಿಪರಿಯಾಗಿ ಬೇಡಿಕೊಂಡ ವಿರಾಟ್‌ ಕೊಹ್ಲಿ.. ಸೆನ್ಸೇಷನಲ್‌ ಹೇಳಿಕೆ ವೈರಲ್

Tue, 06 Aug 2024-6:52 pm,

ವಿರಾಟ್ ಕೊಹ್ಲಿ ಮೈದಾನಕ್ಕೆ ಬಂದರೆ ಸಾಕು ಅಲ್ಲಿನ ಕ್ರೇಜ್‌ ಬೇರೆ ರೀತಿಯಲ್ಲೇ ಇರುತ್ತದೆ. ತಮ್ಮ ಆಕ್ರಮಣಕಾರಿ ಆಟದ ಶೈಲಿಗೆ ಪ್ರಸಿದ್ಧರಾಗಿರುವ ವಿರಾಟ್‌ ಒಂದೊಮ್ಮೆ ಮ್ಯಾಚ್ ರೆಫರಿ ಬಳಿ "ಐ ಆಮ್ ವೆರಿ ಸಾರಿ, ದಯವಿಟ್ಟು ನನ್ನನ್ನು ಬ್ಯಾನ್ ಮಾಡಬೇಡಿ" ಎಂದು ಕೇಳಿಕೊಂಡಿದ್ದರು.

 

2011–12ರ ಸಮಯ. ಆಸ್ಟ್ರೇಲಿಯಾದ ಭಾರತ ಪ್ರವಾಸವು ಕೊಹ್ಲಿಯ ಟೆಸ್ಟ್ ವೃತ್ತಿಜೀವನದ ಪ್ರಮುಖ ಅಂಶವಾಗಿತ್ತು. ಭಾರತ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸುವ ಮೊದಲು, ಜೂನಿಯರ್ ಟೆಸ್ಟ್ ಆಟಗಾರನಾಗಿದ್ದ ವಿರಾಟ್ ಕೊಹ್ಲಿಗೆ ಚೊಚ್ಚಲ ಪ್ರವೇಶದ ನಂತರ ಕಡಿಮೆ ಅವಕಾಶಗಳು ಬರುತ್ತಿದ್ದವು.

 

ಆದರೆ, ಈ ಟೆಸ್ಟ್ ಸರಣಿಯಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲ ಪಂದ್ಯದಿಂದಲೇ ಕೊಹ್ಲಿಯನ್ನು ಬೆಂಬಲಿಸಿ, ಪಂದ್ಯವನ್ನಾಡಲು ಅವಕಾಶ ನೀಡಿದ್ದರು.

 

ವಿರಾಟ್ ಕೊಹ್ಲಿಗೆ ಎಂಎಸ್ ಧೋನಿ ಬೆಂಬಲ ನೀಡಿದ್ದರೂ ಸಹ, ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಮೈದಾನದಲ್ಲಿ ತೋರಿದ ವರ್ತನೆಯಿಂದಾಗಿ ಮೂರನೇ ಟೆಸ್ಟ್‌ನಲ್ಲಿ ಅವರು ಅವಕಾಶ ಪಡೆಯುವುದೇ ಅನುಮಾನವಾಗಿತ್ತು.

 

ಆಸ್ಟ್ರೇಲಿಯಾದ ಕೆಲ ಪ್ರೇಕ್ಷಕರು ಆಟಗಾರರಿಗೆ ತೊಂದರೆ ನೀಡುತ್ತಾರೆ ಎಂಬುದು ತಿಳಿದ ವಿಚಾರವೇ. ಅದೇ ರೀತಿ ಎರಡನೇ ಟೆಸ್ಟ್‌ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಬೌಂಡರಿ ಲೈನ್‌ʼನಲ್ಲಿ ಫೀಲ್ಡಿಂಗ್ ಮಾಡುವಾಗ ಘಟನೆಯೊಂದು ನಡೆದಿತ್ತು.

 

ಪ್ರೇಕ್ಷಕರು ವಿರಾಟ್ ಕೊಹ್ಲಿಗೆ ಕೀಟಲೆ ಮಾಡಿದಾಗ, ಪ್ರತಿಕ್ರಿಯಿಸಿದ ಅವರು ಮಧ್ಯದ ಬೆರಳನ್ನು ತೋರಿಸಿದ್ದರು. ವಿರಾಟ್ ಅವರ ಈ ನಡವಳಿಕೆಯಿಂದಾಗಿ, ಅವರು ನಿಷೇಧಕ್ಕೆ ಒಳಗಾಗುವ ಭೀತಿ ಎದುರಾಗಿತ್ತು. ಆದರೆ ವಿರಾಟ್ ಮ್ಯಾಚ್ ರೆಫರಿಯಲ್ಲಿ ಮನವಿ ಮಾಡಿ, ನಿಷೇಧದಿಂದ ಪಾರಾದರು. ಇದೀಗ ಈ ವಿಷಯವನ್ನು ಅವರೇ ಬಹಿರಂಗಪಡಿಸಿದ್ದಾರೆ.

 

ಟೈಮ್ಸ್ ನೌ ಸಂದರ್ಶನದಲ್ಲಿ ಮಾತನಾಡಿದ್ದ ವಿರಾಟ್‌, "ಮ್ಯಾಚ್ ರೆಫರಿ (ರಂಜನ್ ಮದುಗಲ್ಲೆ) ಮರುದಿನ ನನ್ನನ್ನು ಅವರ ಕೋಣೆಗೆ ಕರೆದರು. ನಾನು 'ಏನಾಯಿತು?' ಎಂಬಂತಿದ್ದೆ. ನಿನ್ನೆ ಬೌಂಡರಿಯಲ್ಲಿ ಏನಾಯಿತು? ಎಂದರು. ಅದಕ್ಕೆ ನಾನು, "ಏನೂ ಇಲ್ಲ, ಇದು ಕೇವಲ ತಮಾಷೆ" ಎಂದು ಹೇಳಿದೆ. ನಂತರ ಅವರು ಪತ್ರಿಕೆಯನ್ನು ನನ್ನ ಮುಂದೆ ಎಸೆದರು. ಮೊದಲ ಪುಟದಲ್ಲಿ ನನ್ನ ದೊಡ್ಡ ಚಿತ್ರವಿತ್ತು ಅದನ್ನು ನೋಡಿದ ನಾನು "ಈ ವಿಚಾರಕ್ಕೆ ಸಂಬಂಧಿಸಿ ಕ್ಷಮೆ ಇರಲಿ.  ನನ್ನನ್ನು ನಿಷೇಧಿಸಬೇಡಿ. ನಾನು ಒಳ್ಳೆಯ ವ್ಯಕ್ತಿ. ಚಿಕ್ಕವನೆಂದು ಅರ್ಥಮಾಡಿಕೊಳ್ಳಿ" ಎಂದು ಹೇಳುತ್ತಾ ಪರಿಪರಿಯಾಗಿ ಬೇಡಿಕೊಂಡಿದ್ದೆ ಎಂದು ಹೇಳಿದ್ದಾರೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link