ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷ ಪೂರೈಸಿದ ಕಿಂಗ್..! ಕಹ್ಲಿ ಹೆಸರನಲ್ಲಿರುವ ವಿಶೇಷ ದಾಖಲೆಗಳ್ಯಾವು ಗೊತ್ತಾ..?
ಟೀಂ ಇಂಡಿಯಾದ ಸ್ಟಾರ್ ಆಟಗಾರ..ಕ್ರಿಕೆಟ್ ಜಗತ್ತಿನ ಸರದಾರ ಕಿಂಗ್ ಕೊಹ್ಲಿ ಅವರಿಗಿಂದು (ಆಗಸ್ಟ್ 18) ರಂದು ಅಂತರಾಷ್ಟ್ರಿಯಾ ಕ್ರಿಕೆಟ್‌ನಲ್ಲಿ 16 ಪೂರೈಸಿದ ಸಂಭ್ರಮ.
ಕಿಂಗ್ ಕೊಹ್ಲಿ ಅವರನ್ನು ರನ್ ಮೆಷಿನ್ ಎಂದೇ ಕರೆಯಲಾಗುತ್ತದೆ. ಕೊಹ್ಲಿ ಅವರ ಬ್ಯಾಟಿಂಗಗ ಪರಿಗೆ ಸೆಪೆರೇಟ್ ಫ್ಯಾನ್ ಬೇಸ್ ಇದೆ ಅಂತಲೇ ಹೇಳಬಹುದು.
ಕಿಂಗ್ ಕೊಹ್ಲಿ 2008 ರಿಂದ ಇಲ್ಲಿಯವರೆಗೆ ಟೀಂ ಇಂಡಿಯಾದ ಕ್ರಿಕೆಟ್ ಆಡುತ್ತಿದ್ದಾರೆ, ಟೀಂ ಇಂಡಿಯಾದ ಪರ ಕ್ರಿಕೆಟ್ ಆಡಲು ಶುರು ಮಾಡಿದ ಕೊಹ್ಲಿ ಅವರ ಅಂತರಾಷ್ಟ್ರೀಯ ಕ್ರಿಕೆಟ್ ಪಯಣಕ್ಕೆ ಇಂದು 16 ವರ್ಷದ ಸಂಭ್ರಮ.
ಈ 16 ವರ್ಷಗಳು ಪೂರೈಸಿದ ಸಂಬ್ರಮದಲ್ಲಿ ವಿರಾಟ್ ಕೊಹ್ಲಿ ಅವರು ಮಾಡಿದ ಕೆಲವು ದಾಖಲೆಗಳ ಕುರಿತು ನಾವಿಂದು ನೋಡೋಣ...
2008ರ ಆಗಸ್ಟ್ 18ರಂದು ಕೊಹ್ಲಿ ತಮ್ಮ ಮೊದಲ ಪಂದ್ಯವನ್ನು ಶ್ರೀಲಂಕಾದ ವಿರುದ್ಧ ಆಡಿದರು.
2009ರಲ್ಲಿ ಕೊಹ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತಮ್ಮ ಮೊದಲ ಶತಕವನ್ನು ಸಿಡಿಸಿದರು.
2011ರಲ್ಲಿ ವಿರಾಟ್ ಕೊಹ್ಲಿ ವಿಶ್ವಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದರು.
2011ರ ಫೆಬ್ರವರಿಯಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ತಮ್ಮ ಎರಡನೇ ಶತಕ ಸಿಡಿಸಿದ್ದರು.
ಕಿಂಗ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಅರ್ಧ ಶತಕ ಹೊಂದಿರುವ ಔಿಶ್ವದ ಮೊದಲ ಬ್ಯಾಟರ್ ಆಗಿದ್ದಾರೆ.
ಕಿಂಗ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ 4ನೇ ಬ್ಯಾಟರ್ ಎಂಬ ದಾಖಲೆ ಸೃಷ್ಟಿಸಿದ್ದಾರೆ.
ಈವರೆಗೂ ಆಡಿರುವ 533 ಪಂದ್ಯಗಲಲ್ಲಿ ವಿರಾಟ್ ಕೊಹ್ಲಿ 26942 ರನ್ ಗಳಿಸಿದ್ದಾರೆ.
ಕಿಂಗ್ ಕೊಹ್ಲಿ ಈ ವರೆಗೂ ಆಡಿರುವ ಅಂತಾರಾಷ್ಟ್ರೀಯಾ ಕ್ರಿಕೆಟ್‌ನಲ್ಲಿ 80 ಶತಕ ಹಾಗೂ 140 ಅರ್ಧ ಶತಕ ಸಿಡಿಸಿದ್ದಾರೆ.