`ಯಶಸ್ಸು ಎಂಬುದು ಅಂಗಡಿಯಲ್ಲಿ ಸಿಗುವ ವಸ್ತುವಲ್ಲ`..ವಿರಾಟ್‌ ಕುರಿತು ರೋಹಿತ್‌ ಶಾಕಿಂಗ್‌ ಹೇಳಿಕೆ..!

Mon, 19 Aug 2024-7:15 am,

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರನಾಗಿ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷಗಳನ್ನು ಪೂರೈಸಿದ್ದಾರೆ. ಆಗಸ್ಟ್ 18, 2008 ರಂದು, ವಿರಾಟ್ ಕೊಹ್ಲಿ ಶ್ರೀಲಂಕಾದಲ್ಲಿ ಏಕದಿನ ಸರಣಿಯ ಮೂಲಕ ಭಾರತ ಕ್ರಿಕೆಟ್‌ ತಂಡಕ್ಕೆ ಪಾದಾರ್ಪಣೆ ಮಾಡಿದರು.

ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಆಡಿದ ವಿರಾಟ್ ಕೊಹ್ಲಿ 22 ಎಸೆತಗಳಲ್ಲಿ 12 ರನ್ ಗಳಿಸಿದರು.  

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದವರು, ಸಚಿನ್ ತೆಂಡೂಲ್ಕರ್ ನಂತರ ಅತಿ ಹೆಚ್ಚು ರನ್ ಗಳಿಸಿದವರು ಕೊಹ್ಲಿ, ಹೀಗೆ ಕಿಂಗ್‌ ಹಲವು ದಾಖಲೆಗಳನ್ನು ಮಾಡಿದ್ದಾರೆ.  

ಈ ಬಗ್ಗೆ ಪ್ರತಿಕ್ರಿಯಿಸಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ. ವಿರಾಟ್ ಕೊಹ್ಲಿ ಸ್ಪೂರ್ತಿದಾಯಕ ಆಟಗಾರ, ಯಾವಾಗಲೂ ಗೆಲ್ಲಲು ಬಯಸುತ್ತಾರೆ. ಅವರ ಗೆಲುವಿನ ಆಸೆಗೆ ಸಾಟಿಯೇ ಇಲ್ಲ. ವಿರಾಟ್ ಕೊಹ್ಲಿಯನ್ನು ನೋಡಿದಾಗಲೆಲ್ಲ ಮೈದಾನಕ್ಕೆ ಒಂದು ರೀತಿಯ ಎನರ್ಜಿ ತರುತ್ತಾರೆ.  

ಅವರು ಹಲವು ವರ್ಷಗಳಿಂದ ಭಾರತ ತಂಡದಲ್ಲಿ ಆಡಿದ್ದಾರೆ. ಅವರ ಅನುಭವ ಭಾರತ ತಂಡಕ್ಕೆ ಬಹಳ ಮುಖ್ಯ. ನೀವು ಅಂಗಡಿಯಲ್ಲಿ ಯಶಸ್ಸನ್ನು ಖರೀದಿಸಲು ಸಾಧ್ಯವಿಲ್ಲ. ಹೋರಾಟದ ಮೂಲಕ ಸಾಧಿಸಬಹುದು, ಇದಕ್ಕಾಗಿ ಶ್ರಮಿಸಬೇಕು. ವಿರಾಟ್ ಕೊಹ್ಲಿ ಇದೆಲ್ಲವನ್ನೂ ಮಾಡಿದ್ದಾರೆ.  

ಹಾಗಾಗಿ ವಿರಾಟ್ ಕೊಹ್ಲಿಗೆ ನನ್ನ ಶುಭಾಶಯಗಳು. ನಾನು ಕೊಹ್ಲಿಯನ್ನು ನೋಡಿದಾಗಲೆಲ್ಲಾ ಅವರ ಕ್ರಿಕೆಟ್ ವಿಭಿನ್ನ ಮಟ್ಟದಲ್ಲಿರುತ್ತದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.   

ಇನ್ನೂ, ಮುಂಬರುವ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link