ಅನುಷ್ಕಾಗೂ ಮುನ್ನ ಈ 6 ನಟಿಯರ ಜೊತೆ ಡೇಟಿಂಗ್ ಮಾಡಿದ್ರು ವಿರಾಟ್! ಅದರಲ್ಲಿ ಒಬ್ಬಳು ಕರ್ನಾಟಕದ ಖ್ಯಾತ ಹೀರೋಯಿನ್
ವಿರಾಟ್ ಕೊಹ್ಲಿ ಅನುಷ್ಕಾ ಜೊತೆ ಮದುವೆಯಾಗುವ ಮುನ್ನ ಆರು ನಟಿಯರ ಜೊತೆ ಡೇಟಿಂಗ್ ಮಾಡಿದ್ದರು ಎನ್ನಲಾಗಿದೆ. ಆ ನಟಿಯರು ಯಾರೆಂಬುದನ್ನು ಈ ವರದಿಯಲ್ಲಿ ತಿಳಿಯೋಣ.
ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುವ ನಟಿ ಸಾಕ್ಷಿ ಅಗರ್ವಾಲ್ ಜೊತೆ ವಿರಾಟ್ ಹೆಸರು ತಳುಕು ಹಾಕಿತ್ತು. ಆದರೆ ಇವರಿಬ್ಬರ ಸಂಬಂಧ ಹೆಚ್ಚು ಕಾಲ ಉಳಿದಿರಲಿಲ್ಲ. ಕೊಹ್ಲಿಯ ಕ್ರಿಕೆಟ್ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಈ ಸಂಬಂಧ ಸುದ್ದಿಯಾಗಿದ್ದು, ಅಷ್ಟರಲ್ಲೇ ಕೊನೆಗೊಂಡಿತ್ತು ಎಂದು ಹೇಳಲಾಗಿದೆ. ಸಾಕ್ಷಿ ಅಗರ್ವಾಲ್ ತಮಿಳು, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಾರಾ ಜೇನ್ ಡಯಾಸ್ ಹೆಸರು ಕೂಡ ವಿರಾಟ್ ಕೊಹ್ಲಿ ಜೊತೆ ಕೇಳಿಬಂದಿತ್ತು. ಈಕೆ B-ಟೌನ್‌ನ ರೂಪದರ್ಶಿ ಮತ್ತು ನಟಿ. ಜೊತೆಗೆ ಈಕೆ ಫೆಮಿನಾ ಮಿಸ್ ಇಂಡಿಯಾ 2007 ರ ವಿಜೇತರಾಗಿದ್ದರು. ಆದರೆ ವೃತ್ತಿಜೀವನದ ಬದ್ಧತೆಗಳ ಕಾರಣದಿಂದ ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ ಎಂದು ಹೇಳಲಾಗುತ್ತದೆ.
ದಕ್ಷಿಣ ಭಾರತದ ಇನ್ನೊಬ್ಬ ಪ್ರತಿಷ್ಠಿತ ನಟಿ ಸಂಜನಾ ಗಲ್ರಾನಿ ಜೊತೆಯೂ ವಿರಾಟ್ ಕೊಹ್ಲಿ ಡೇಟಿಂಗ್ ಮಾಡಿದ್ದರು ಎಂಬ ಸುದ್ದಿ ಹರಡಿತ್ತು. ಆದರೆ ಸ್ವತಃ ಗಲ್ರಾನಿ ಅವರೇ ಈ ವದಂತಿಗೆ ಅಂತ್ಯ ಹಾಡದ್ದು, ನಮ್ಮಿಬ್ಬರ ಮಧ್ಯೆ ಉತ್ತಮ ಸ್ನೇಹವಿದೆಯಷ್ಟೇ ಎಂದಿದ್ದರು.
ಬಹುಭಾಷಾ ನಟಿ ತಮನ್ನಾ ಭಾಟಿಯಾ ಕೂಡ ವಿರಾಟ್ ಜೊತೆ ಡೇಟ್ ಮಾಡಿದ್ದರು ಎಂದು ಹೇಳಲಾಗುತ್ತದೆ. ಕೊಹ್ಲಿ ಮತ್ತು ತಮನ್ನಾ ಒಟ್ಟಿಗೆ ಜಾಹೀರಾತು ಶೂಟ್ ಮಾಡಿದ್ದು, ಅದಾದ ನಂತರ ಇವರಿಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು ಎನ್ನಲಾಗಿದೆ. ಆದರೆ ಈ ಪ್ರೇಮ ಹೆಚ್ಚು ಕಾಲ ಉಳಿಯದೆ ಬ್ರೇಕಪ್ ಹಾದಿ ಹಿಡಿದಿತ್ತು.
ಬ್ರೆಜಿಲಿಯನ್ ಮಾಡೆಲ್-ನಟಿ ಇಸಾಬೆಲ್ ಲೈಟೆ ಮತ್ತು ವಿರಾಟ್ ಪ್ರೀತಿಯಲ್ಲಿದ್ದರು ಎಂದು ಅನೇಕ ವರದಿಗಳು ಹೇಳುತ್ತವೆ.ಈ ಜೋಡಿ ಸಿಂಗಾಪುರದಲ್ಲಿ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. 2013 ರವರೆಗೆ ಸುಮಾರು ಎರಡು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಈ ಜೋಡಿ, ಹಠಾತ್ತನೆ ಬೇರ್ಪಟ್ಟರು.
ಇನ್ನು ಇವರಷ್ಟೇ ಅಲ್ಲದೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಜೊತೆಗೂ ಮೂವಿ ಡೇಟ್ ಮಾಡಿದ್ದಾರೆ ಎಂದು ಹೇಳುತ್ತದೆ. ಇದರ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಹರಿದಾಡಿತ್ತು.