ಅನುಷ್ಕಾಗೂ ಮೊದಲು ಈ ನಟಿಯರ ಜೊತೆ ಡೇಟಿಂಗ್ ಮಾಡಿದ್ರು ಕೊಹ್ಲಿ! ಅದ್ರಲ್ಲಿ ಒಬ್ಬಳು ಕನ್ನಡದ ಹೆಸರಾಂತ ನಟಿ

Sat, 17 Feb 2024-6:09 pm,
Virat Kohli Rumoured Girlfriends

ಭಾರತ ತಂಡದ ಮಾಜಿ ನಾಯಕ ಮತ್ತು ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಜನಮನ ಗೆದ್ದಿದ್ದಾರೆ. ಆದರೆ ಇದರ ಜೊತೆಗೆ ಅವರ ಪ್ರೇಮ ಜೀವನವೂ ಸಖತ್ ಸುದ್ದಿಯಲ್ಲಿದೆ.

Virat Kohli Rumoured Girlfriends

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ಮದುವೆಗೂ ಮೊದಲು, ಕೆಲ ನಟಿಯರೊಂದಿಗೆ ವಿರಾಟ್ ಹೆಸರು ಕೇಳಿಬಂದಿತ್ತು.

Virat Kohli Rumoured Girlfriends

ಭಾರತೀಯ ಚಿತ್ರರಂಗದ ಕೆಲವು ನಟಿಯರ ಜೊತೆಗೆ ಬ್ರೆಜಿಲ್ ರೂಪದರ್ಶಿಯ ಹೆಸರೂ ಈ ಪಟ್ಟಿಯಲ್ಲಿ ಸೇರಿದೆ. ಕೆಲವು ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಬ್ರೆಜಿಲಿಯನ್ ಮಾಡೆಲ್ ಇಸಾಬೆಲ್ ಲೇಟಿ ಅವರು ಸಂದರ್ಶನವೊಂದರಲ್ಲಿ ಕೊಹ್ಲಿಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಒಪ್ಪಿಕೊಂಡಿದ್ದರು. 2014 ರಲ್ಲಿ, ಇಸಾಬೆಲಿ ಲೀಟಿ ಸಂದರ್ಶನವೊಂದರಲ್ಲಿ ತಾನು ಮತ್ತು ವಿರಾಟ್ ಸುಮಾರು 2 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದೇವೆ ಎಂದು ಹೇಳಿದ್ದರು.

2007ರಲ್ಲಿ ಮಿಸ್ ಇಂಡಿಯಾ ಪಟ್ಟ ಗೆದ್ದಿದ್ದ ಸಾರಾ ಜೇನ್ ಡೈಸ್ ಹೆಸರು ಕೂಡ ವಿರಾಟ್ ಕೊಹ್ಲಿ ಜೊತೆ ತಳುಕು ಹಾಕಿಕೊಂಡಿದೆ. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಬಹಿರಂಗಪಡಿಸದಿದ್ದರೂ, ವರದಿಗಳ ಪ್ರಕಾರ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಅವರು ಪರಸ್ಪರ ಬ್ರೇಕ್ಅಪ್ ಮಾಡಿಕೊಂಡಿದ್ದರು.

ಬಾಲಿವುಡ್ ನಟಿ ತಮನ್ನಾ ಭಾಟಿಯಾ ಜೊತೆ ವಿರಾಟ್ ಕೊಹ್ಲಿ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. 2012 ರ ಕೊನೆಯಲ್ಲಿ, ಇಬ್ಬರ ನಡುವೆ ಉತ್ತಮ ಸ್ನೇಹ ಕಂಡುಬಂದಿತು. ಆದರೆ, ಈ ಬಗ್ಗೆ ಇಬ್ಬರೂ ಬಹಿರಂಗವಾಗಿ ಮಾತನಾಡಿರಲಿಲ್ಲ.

ಇನ್ನು ವಿರಾಟ್ ಕೊಹ್ಲಿ ಕನ್ನಡ ಚಿತ್ರರಂಗದ ನಟಿ ಸಂಜನಾ ಅವರ ಹೆಸರು ಕೂಡ ಈ ಪಟ್ಟಿಯಲ್ಲಿ ಸೇರಿದೆ. 2009 ರಲ್ಲಿ, ಇಬ್ಬರ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಸುದ್ದಿಗಳು ವರದಿಯಾಗಿದ್ದವು. ಆದರೆ ಆ ಸಮಯದಲ್ಲಿ ಸಂಜನಾ, ಕೊಹ್ಲಿಯೊಂದಿಗಿನ ಸಂಬಂಧದ ಬಗ್ಗೆ ನಿರಾಕರಿಸಿದ್ದರು. ಇದು ಕೇವಲ ಸ್ನೇಹವಷ್ಟೇ ಎಂದು ಖಡಕ್ ಆಗಿ ನುಡಿದಿದ್ದರು ನಟಿ ಸಂಜನಾ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link