ವಿರಾಟ್‌ ಕೊಹ್ಲಿ ತಿನ್ನುವ ಅಕ್ಕಿಯ ಬೆಲೆ ಕೇಳಿದ್ರೆ ಶಾಕ್‌ ಆಗುವಿರಿ.. ಒಂದು ಕೆಜಿಗೆ ಎಷ್ಟು ಗೊತ್ತಾ?

Mon, 04 Nov 2024-1:34 pm,

ಭಾರತ ಕ್ರಿಕೆಟ್‌ ತಂಡದ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ ತಿನ್ನುವ ಅಕ್ಕಿಯ ಬೆಲೆ ಕೇಳಿದರೆ ಎಂಥವರಿಗೂ ಶಾಕ್‌ ಆಗುತ್ತದೆ.

ರನ್ ಮೆಷಿನ್ ಎಂದೇ ಖ್ಯಾತಿ ಪಡೆದ ವಿರಾಟ್ ಕೊಹ್ಲಿ ಫಿಟ್‌ ಆಗಿರಲು ಅವರು ಸೇವಿಸುವ ಆಹಾರವೂ ಕಾರಣವಾಗಿದೆ. ಕೊಹ್ಲಿ ಫಿಟ್ನೆಸ್‌ ಎಂಥವರಿಗೂ ಸ್ಫೂರ್ತಿ ನೀಡುತ್ತದೆ. 

ಫಿಟ್ನೆಸ್‌ ಬಗ್ಗೆ ಹೆಚ್ಚು ಕಾಳಜಿ ವಹಿಸುವ ವಿರಾಟ್‌ ಕೊಹ್ಲಿ ಮೊಸರು, ಡೈರಿ ಉತ್ಪನ್ನಗಳು, ಗೋಧಿ ಹಿಟ್ಟಿನ ಚಪಾತಿಗಳನ್ನು ತಿನ್ನುವುದಿಲ್ಲ. ಕಾರ್ಬೋಹೈಡ್ರೇಟ್‌ ಹೆಚ್ಚಿರುವ ಯಾವ ಊಟವನ್ನೂ ವಿರಾಟ್‌ ಸೇವಿಸುವುದಿಲ್ಲ. 

ವಿರಾಟ್‌ಕೊಹ್ಲಿ ಡಯಟ್‌ನಲ್ಲಿ ಒಂದು ವಿಶೇಷ ಅಕ್ಕಿಯಿಂದ ತಯಾರಾಗು ಅನ್ನವೂ  ಸೇರಿದೆ. ಈ ಅನ್ನ ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ. ಕೊಹ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ಅಕ್ಕಿಯ ಅನ್ನವನ್ನು ತಿನ್ನುವುದಿಲ್ಲವಂತೆ. 

ಕೊಹ್ಲಿ ತಿನ್ನುವ ಈ ಅಕ್ಕಿ ಆಹಾರ ಸಂಸ್ಕರಣಾ ಘಟಕದಲ್ಲಿ ವಿಶೇಷ ರೀತಿಯಲ್ಲಿ ತಯಾರಾಗುತ್ತದೆ. ಗ್ಲುಟನ್ ಮುಕ್ತವಾಗಿರುವ ಅಕ್ಕಿಯ ಅನ್ನವನ್ನೇ ಕೊಹ್ಲಿ ತಿನ್ನುತ್ತಾರಂತೆ. 

ಕಡಿಮೆ ಕಾರ್ಬೋಹೈಡ್ರೇಟ್‌ ಹೊಂದಿರುವ ಈ ವಿಶೇಷ ಅಕ್ಕಿಯ ಬೆಲೆ ಕೆಜಿಗೆ ಸುಮಾರು 400 ರಿಂದ 500 ರೂ ಅಂತೆ. ಸಿಹಿ ತಿಂಡಿಗಳನ್ನಂತೂ ಕೊಹ್ಲಿ ಮುಟ್ಟುದೇ ಇಲ್ಲವಂತೆ. ಚೋಲೆ ಬಟೋರೆ ಕೊಹ್ಲಿಯ ನೆಚ್ಚಿನ ಆಹಾರ.

ಸ್ಟಾರ್ ಸ್ಪೋರ್ಟ್ಸ್ ಸಂದರ್ಶನವೊಂದರಲ್ಲಿ, ಕೊಹ್ಲಿ ತಮ್ಮ ಆಹಾರ ಪದ್ಧತಿಯನ್ನು ಬಹಿರಂಗಪಡಿಸಿದರು. ವಿಟಮಿನ್‌ಗಳು, ಪ್ರೋಟೀನ್ ಹೆಚ್ಚಿರುವ ಆಹಾರ ತಿನ್ನುವುದಾಗಿ ತಿಳಿಸಿದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link