ವಿರಾಟ್’ಗೆ ಸೌತ್’ನ ಈ ಹೀರೋ ಅಂದ್ರೆ ತುಂಬಾ ಇಷ್ಟ: ಆತ ಪ್ರಶಸ್ತಿ ಗೆಲ್ಲುತ್ತಿದ್ದಂತೆ ನಿಂತಲ್ಲೇ ಡ್ಯಾನ್ಸ್ ಮಾಡಿದ್ರಂತೆ ಕೊಹ್ಲಿ!

Sun, 30 Jun 2024-3:42 pm,

ಇತ್ತೀಚೆಗೆಯಷ್ಟೇ ಟಿ20 ವಿಶ್ವಕಪ್  2024 ಮುಕ್ತಾಯಗೊಂಡಿದೆ. ಟೀಂ ಇಂಡಿಯಾ 17 ವರ್ಷಗಳ ಬಳಿಕ ಟ್ರೋಫಿ ಗೆದ್ದಿದ್ದು, ಬಹುದಿನಗಳ ಕನಸು ನೆರವೇರಿದೆ. ಇನ್ನೊಂದೆಡೆ ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆ, ವಿರಾಟ್ ಕೊಹ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ

ಅಂದಹಾಗೆ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ದಕ್ಷಿಣ ಭಾರತದ ಓರ್ವ ನಟನೆಂದರೆ ಪಂಚಪ್ರಾಣವಂತೆ. ಆತ ಬೇರಾರು ಅಲ್ಲ, ತೆಲುಗು ನಟ ಜೂನಿಯರ್ ಎನ್‌’ಟಿಆರ್.

 ‘Road and Alcohol Awareness Program' ಎಂಬ ಜಾಗೃತಿ ಕಾರ್ಯಕ್ರಮವನ್ನು NDTV ಆಯೋಜಿಸಿತ್ತು, ಇದರಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ ಮತ್ತು ಜೂನಿಯರ್ ಎನ್‌’ಟಿಆರ್, ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ಅಪಾಯಗಳ ಬಗ್ಗೆ ಅರಿವು ಮೂಡಿಸಿದ್ದರು.

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, “ಜೂನಿಯರ್ ಎನ್‌’ಟಿಆರ್ ನನ್ನ ಆತ್ಮೀಯ ಗೆಳೆಯ. ನಟನಾಗಿ ತುಂಬಾ ಮೆಚ್ಚಿಕೊಂಡಿದ್ದೇನೆ. RRRನಲ್ಲಿ ಎನ್‌’ಟಿಆರ್‌ ಅಭಿನಯವನ್ನು ವಿವರಿಸಲು ಪದಗಳೇ ಸಾಲದು. ಆಸ್ಕರ್ ಗೆದ್ದಿದ್ದ ಸಂದರ್ಭದಲ್ಲಿ ನಾನು ‘ನಾಟು, ನಾಟು’ ಹಾಡಿಗೆ ಕುಣಿದು ಕುಪ್ಪಳಿಸಿದ್ದೆ” ಎಂದು ಹೇಳಿದ್ದಾರೆ.

ಅಂದಹಾಗೆ ‘Road and Alcohol Awareness Program' ಕಾರ್ಯಕ್ರಮ'ದ ಬ್ರಾಂಡ್ ಅಂಬಾಸಿಡರ್‌’ಗಳಾಗಿ ಕೊಹ್ಲಿ ಮತ್ತು ಜೂನಿಯರ್ ಎನ್‌’ಟಿಆರ್ ಆಯ್ಕೆಯಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link