ಕ್ರಿಕೆಟ್‌ ಲೋಕವೇ ಮೆಚ್ಚಿದ ಆಟಗಾರ ವಿರಾಟ್ ಕೊಹ್ಲಿ...‌ ಆದ್ರೆ ವಿರಾಟ್‌ʼಗೆ ಈ ಕ್ರಿಕೆಟರ್ ಅಂದ್ರೆ ಪಂಚ್ರಪ್ರಾಣ! ʼಆʼ ಕ್ರಿಕೆಟರ್ ಯಾರು ಗೊತ್ತಾ?

Mon, 21 Oct 2024-1:47 pm,

ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್‌’ಮನ್ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್‌’ನ ದಂತಕಥೆ. ಈ ಆಟಗಾರನಿಗೆ ಒಬ್ಬರಲ್ಲ, ಇಬ್ಬರಲ್ಲ… ಕೋಟಿ ಕೋಟಿ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಇಂದು ಕ್ರಿಕೆಟ್‌ ಜಗತ್ತೇ ಮೆಚ್ಚಿಕೊಂಡಿರುವ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು.

 

ಅಂದಹಾಗೆ ಕ್ರಿಕೆಟ್‌ ಲೋಕವೇ ಶಹಬ್ಬಾಷ್‌ ಎಂದು ಹೇಳಿರುವ ವಿರಾಟ್‌ ಕೊಹ್ಲಿಗೆ ಕೂಡ ಒಬ್ಬ ಫೇವರೇಟ್ ಕ್ರಿಕೆಟರ್ ಇದ್ದಾರಂತೆ. ಅಷ್ಟಕ್ಕೂ ಆ ಆಟಗಾರ ಯಾರು ? ಎಂಬುದನ್ನು ಮುಂದೆ ತಿಳಿದುಕೊಳ್ಳೋಣ.

 

ವಿಶ್ವಕಪ್ 2023 ರ ಮೊದಲು ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ವಿರಾಟ್ ತಮ್ಮ ನೆಚ್ಚಿನ ಕ್ರಿಕೆಟಿಗ ಯಾರೆಂಬುದನ್ನು ಬಹಿರಂಗಪಡಿಸಿದ್ದರು.

 

ಇಂಗ್ಲೆಂಡ್ ತಂಡದ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಪ್ರಸ್ತುತ ತನ್ನ ನೆಚ್ಚಿನ ಕ್ರಿಕೆಟಿಗ ಎಂದು ಬಹಿರಂಗಪಡಿಸಿದ್ದಾರೆ.

 

ಬೌಲಿಂಗ್ ಮತ್ತು ಬ್ಯಾಟಿಂಗ್‌’ನಲ್ಲಿ ಅದ್ಭುತ ಪ್ರದರ್ಶನ ನೀಡುವ ಸಾಮರ್ಥ್ಯ ಬೆನ್ ಸ್ಟೋಕ್ಸ್ ಅವರಲ್ಲಿದೆ. ಒಂದೊಮ್ಮೆ ನಿವೃತ್ತಿ ಪಡೆದಿದ್ದ ಈತ, ವಿಶ್ವಕಪ್‌ ಕಾರಣದಿಂದ ಕಂಬ್ಯಾಕ್‌ ಮಾಡಿದ್ದರು.

 

ಬೆನ್ ಸ್ಟೋಕ್ಸ್ ಸ್ಟಾರ್ ಆಲ್ ರೌಂಡರ್. ಟೆಸ್ಟ್‌ ಕ್ರಿಕೆಟ್’ನಲ್ಲಿ ಇಂಗ್ಲೆಂಡ್‌ ತಂಡದ ನಾಯಕತ್ವ ವಹಿಸಿದ್ದವರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link