ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ನಂಬರ್ ಅನ್ನು ಫೋನ್‌ನಲ್ಲಿ ಏನಂತ ಸೇವ್ ಮಾಡಿದ್ದಾರೆ ನೋಡಿ..!
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಹಳೆಯ ವಿಡಿಯೋವೊಂದು ಇತ್ತಿಚೆಗೆ ವೈರಲ್ ಆಗಿದೆ.
ಅನುಷ್ಕಾ ಶರ್ಮಾ ತಮ್ಮ ಫೋನ್‌ನಲ್ಲಿ ವಿರಾಟ್ ಕೊಹ್ಲಿ ಅವರ ಮೊಬೈಲ್ ನಂಬರ್‌ನ್ನು ಯಾವ ಹೆಸರಿನಲ್ಲಿ ಸೇವ್ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಆದರೆ ಇಲ್ಲಿ ಒಂದು ಟ್ವಿಸ್ಟ್ ಇದೆ. ಈ ಸಂದರ್ಶನದಲ್ಲಿ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ದಂಪತಿಗಳು ತಪ್ಪು ಉತ್ತರಗಳನ್ನು ನೀಡಬೇಕಾಗಿತ್ತು.
ಅನುಷ್ಕಾ ಶರ್ಮಾ ಅವರನ್ನು ವಿರಾಟ್ ಫೋನ್ ನಂಬರ್ ನಿಮ್ಮ ಮೊಬೈಲ್‌ನಲ್ಲಿ ಯಾವ ಹೆಸರಿನಲ್ಲಿ ಸೇವ್ ಮಾಡಿದ್ದೀರಿ ಎಂದು ಕೇಳಿದರು.
ಅದಕ್ಕೆ ನಟಿ ಅನುಷ್ಕಾ ಶರ್ಮಾ 'ಪತಿ ಪರಮೇಶ್ವರ್' ಎಂದು ಉತ್ತರಿಸಿದರು. ವಿರಾಟ್ ಕೊಹ್ಲಿಗೂ ಇದೇ ಪ್ರಶ್ನೆ ಕೇಳಿದಾಗ ಅವರು 'ಡಾರ್ಲಿಂಗ್' ಎಂದು ಹೇಳಿದ್ದಾರೆ.