Virat Kohli: ಮುರಿದುಬಿತ್ತು ವಿರಾಟ್ ಕೊಹ್ಲಿಯ 8 ವರ್ಷಗಳ ಸಂಬಂಧ! ಸುದೀರ್ಘ ಒಡನಾಟ ಅಂತ್ಯಗೊಳಿಸಲು ಕಾರಣ ಇದುವೇ…
ಪೂಮಾ ಬ್ರಾಂಡ್’ನೊಂದಿಗಿನ ತಮ್ಮ ಎಂಟು ವರ್ಷಗಳ ಪಾಲುದಾರಿಕೆಯನ್ನು ಕೊನೆಗೊಳಿಸಲು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಂದಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಭಾರತದ ಅಗ್ರ ಕ್ರಿಕೆಟಿಗ ವಿರಾಟ್ 2017 ರಲ್ಲಿ PUMA ಜೊತೆಗೆ 110 ಕೋಟಿ ರೂಪಾಯಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅಂದಹಾಗೆ ಈ ಬ್ರಾಂಡ್ ಭಾರತದಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವುದಕ್ಕೆ ವಿರಾಟ್ ಕೊಹ್ಲಿ ಕೊಡುಗೆಯು ಅಪಾರವಾಗಿದೆ.
ಆದರೆ, ವಿರಾಟ್ ಕೊಹ್ಲಿ ಬ್ರ್ಯಾಂಡ್’ನೊಂದಿಗಿನ ತನ್ನ ಸಂಬಂಧವನ್ನು ಕೊನೆಗೊಳಿಸಲು ಸಿದ್ಧವಾಗಿರುವುದರಿಂದ ಒಪ್ಪಂದವು ಇನ್ನು ಮುಂದೆ ಅಸ್ತಿತ್ವದಲ್ಲಿರುವುದಿಲ್ಲ ಎಂದು ವರದಿಗಳು ಹೇಳುತ್ತಿವೆ.
ವೈಯಕ್ತಿಕ ಕಾರಣಗಳಿಂದಾಗಿ ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯ ಮೊದಲ ಎರಡು ಟೆಸ್ಟ್‌ಗಳಲ್ಲಿ ವಿರಾಟ್ ಭಾಗವಹಿಸಿರಲಿಲ್ಲ.
ಅಂದಹಾಗೆ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಮೇ 2023ರಲ್ಲಿ PUMA ಇಂಡಿಯಾದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಗಂಗೂಲಿ ಅವರು ಸ್ಥಾಪಿಸಿದ ಕ್ರೀಡಾ ಪಾದರಕ್ಷೆಗಳ ಬ್ರ್ಯಾಂಡ್ ಎಜಿಲಿಟಾಸ್ ಸ್ಪೋರ್ಟ್ಸ್’ನೊಂದಿಗೆ ಕೈಜೋಡಿಸಲು ಯೋಜಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಎಜಿಲಿಟಾಸ್’ನೊಂದಿಗಿನ ಒಪ್ಪಂದವು, ಬ್ರ್ಯಾಂಡ್ ಫೇಸ್ ಆಗುವುದು ಮಾತ್ರವಲ್ಲದೆ, ಆ ಕಂಪನಿಯಲ್ಲಿ ಪಾಲುದಾರಿಕೆಯನ್ನು ಸಹ ಹೊಂದಿರುತ್ತಾರೆ ಎಂದು ಹೇಳಿದೆ. ಆದರೆ ಎಜಿಲಿಟಾಸ್ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.