ಟೀಂ ಇಂಡಿಯಾಗೆ ಮತ್ತೆ ವಿರಾಟ್ ಕೊಹ್ಲಿ ನಾಯಕತ್ವ… ರೋಹಿತ್ ಶರ್ಮಾ ಪಾರುಪತ್ಯ ಅಂತ್ಯ!?
ಸೆಂಚುರಿಯನ್ ಟೆಸ್ಟ್’ನಲ್ಲಿ ಭಾರತ ತಂಡ ಆತಿಥೇಯ ತಂಡದ ವಿರುದ್ಧ 32 ರನ್’ಗಳಿಂದ ಸೋಲು ಕಂಡಿತ್ತು. ಇದೀಗ ಉಭಯ ತಂಡಗಳ ನಡುವಿನ ಸರಣಿಯ ಎರಡನೇ ಮತ್ತು ಕೊನೆಯ ಪಂದ್ಯ ಜನವರಿ 3 ರಿಂದ 7 ರವರೆಗೆ ಕೇಪ್ ಟೌನ್’ನ ನ್ಯೂಲ್ಯಾಂಡ್ಸ್’ನಲ್ಲಿ ನಡೆಯಲಿದೆ.
ಈ ಪಂದ್ಯವನ್ನು ಗೆದ್ದರೆ ರೋಹಿತ್ ಶರ್ಮಾ, ವಿಶೇಷವಾದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರ್ಪಡೆಗೊಳಿಸಲಿದ್ದಾರೆ.
ಅಂದಹಾಗೆ ಈ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ಲೋಕದಲ್ಲಿ ಒಂದು ವಿಷಯ ಭಾರೀ ಚರ್ಚೆಯಾಗುತ್ತಿದೆ. ಅದೇನೆಂದರೆ, ವಿರಾಟ್ ಕೊಹ್ಲಿಗೆ ಮತ್ತೆ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ನಾಯಕತ್ವವನ್ನು ನೀಡುವುದು.
ಇದಕ್ಕೆ ಕಾರಣ, ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ದಿನದ ಅಂತಿಮ ಸೆಷನ್’ಗೆ ಮುನ್ನ ವಿರಾಟ್ ಕೊಹ್ಲಿ ತಂಡವನ್ನು ಹುರಿದುಂಬಿಸಿ ಮಾತನಾಡುತ್ತಿದ್ದರು. ಈ ದೃಶ್ಯ ಕಂಡ ಫ್ಯಾನ್ಸ್ ಮತ್ತೆ ಟೀಂ ಇಂಡಿಯಾಗೆ ವಿರಾಟ್ ನಾಯಕತ್ವ ಬರುವ ಸೂಚನೆ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಸಾಮಾನ್ಯವಾಗಿ ನಾಯಕ ರೋಹಿತ್ ಶರ್ಮಾ ತಂಡವನ್ನು ಪ್ರೇರೇಪಿಸುವಂತೆ ಮಾತನಾಡುತ್ತಾರೆ. ಆದರೆ ಅಂದು ವಿರಾಟ್ ಈ ಕೆಲಸ ಮಾಡುತ್ತಿರುವುದು ಕಂಡುಬಂದಿತ್ತು.
ಅಂದಹಾಗೆ ಕೊಹ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ. ಇವರ ಅವಧಿಯಲ್ಲಿ ಭಾರತ ದೇಶ-ವಿದೇಶಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಇತಿಹಾಸ ನಿರ್ಮಿಸಿತ್ತು.
ಇದೀಗ ದಕ್ಷಿಣ ಆಫ್ರಿಕಾದಲ್ಲಿ ಭಾರತ ಟೆಸ್ಟ್ ಫಾರ್ಮಾಟ್’ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ. ಇದೇ ಕಾರಣದಿಂದ ರೋಹಿತ್ ಶರ್ಮಾರನ್ನು ಪದವಿಯಿಂದ ಕೆಳಗಿಳಿಸಿ, ಬೇರೊಬ್ಬ ಆಟಗಾರನಿಗೆ ನಾಯಕತ್ವ ನೀಡಲು ಬಿಸಿಸಿಐ ಪ್ಲಾನ್ ನಡೆಸಿದೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗ, ವಿರಾಟ್ ಕೊಹ್ಲಿ ಬಳಿಯೇ ಮತ್ತೆ ನಾಯಕತ್ವ ಹುಡುಕಿಕೊಂಡು ಬರುತ್ತಿದೆಯೇನೋ ಎಂಬುದು ಸದ್ಯದ ಮಾತು.