RCB ಗೆ ಮತ್ತೆ ವಿರಾಟ್ ನಾಯಕ! ಐಪಿಎಲ್’ನಲ್ಲಿ ಮತ್ತೊಮ್ಮೆ ಕೊಹ್ಲಿ ಕ್ಯಾಪ್ಟನ್ಸಿ ಹವಾ?
ಸಾಮಾನ್ಯವಾಗಿ ಐಪಿಎಲ್ ಶುರುವಾದಾಗಲೆಲ್ಲಾ, ಈ ಸಲ ಕಪ್ ನಮ್ದೇ ಎಂದು ಹೇಳುತ್ತಾ ಅಭಿಯಾನ ಶುರು ಮಾಡುವ ಆರ್ ಸಿ ಬಿ ಫೈನಲ್ ಪ್ರವೇಶಿಸದೇ 7 ವರ್ಷಗಳೇ ಕಳೆದಿವೆ.
ಅಂದಹಾಗೆ ಇದೀಗ ಫಾಪ್ ಡು ಪ್ಲೆಸಿಸ್ ನಾಯಕತ್ವದ ಬಗ್ಗೆ ಹಲವರು ಅಸಮಾಧಾನ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಆರ್ ಸಿ ಬಿ ಮ್ಯಾನೇಜ್ಮೆಂಟ್ ವಿರಾಟ್ ಕೊಹ್ಲಿ ಮತ್ತೆ ತಂಡದ ನಾಯಕನನ್ನಾಗಿಸಲು ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ.
ಈ ನಿರ್ಧಾರಕ್ಕೆ ಪ್ರಮುಖ ಕಾರಣ ಏನೆಂದರೆ, ಡುಪ್ಲೆಸಿಸ್ ಕಳೆದ ಎರಡು ಸೀಸನ್’ಗಳಿಂದ ಆರ್ಸಿಬಿ ತಂಡವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಇವರ ನಾಯಕತ್ವದಲ್ಲಿ ಒಟ್ಟು 27 ಪಂದ್ಯಗಳನ್ನಾಡಿದ ಆರ್ಸಿಬಿ, 14 ಪಂದ್ಯಗಳಲ್ಲಿ ಗೆದ್ದಿದ್ದು, 13 ಪಂದ್ಯಗಳಲ್ಲಿ ಸೋತಿದೆ.
ಇನ್ನು ಡುಪ್ಲೆಸಿಸ್ ನಾಯಕತ್ವದ ಬಗ್ಗೆ ಭಾರೀ ಭರವಸೆ ಹೊಂದಿದ್ದ, ನಿರ್ವಹಣಾ ಮಂಡಳಿ, ಇದೀಗ ಅಸಮಾಧಾನಗೊಂಡಿದೆ. ಅಷ್ಟೇ ಅಲ್ಲದೆ, ವಿರಾಟ್ ಕೊಹ್ಲಿಗೆ ನಾಯಕತ್ವ ನೀಡುವ ಚಿಂತನೆಯಲ್ಲಿದೆಯಂತೆ.
ಈ ಹಿಂದೆ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿದ್ದಾಗ, RCB 3 ಬಾರಿ ಪ್ಲೇಆಫ್ಸ್ ಪ್ರವೇಶಿಸಿತ್ತು. ಜೊತೆಗೆ ಒಂದು ಬಾರಿ ಫೈನಲ್ ಪಂದ್ಯವನ್ನಾಡಿತ್ತು. ಆದರೆ ಫಾಫ್ ಡುಪ್ಲೆಸಿಸ್’ಗೆ ಇದ್ಯಾವುದೂ ಸಾಧ್ಯವಾಗಿರಲಿಲ್ಲ. ಜೊತೆಗೆ ಡುಪ್ಲೆಸಿಸ್ ನಿವೃತ್ತಿಯ ಅಂಚಿನಲ್ಲಿದ್ದಾರೆ.
ಈ ಎಲ್ಲಾ ಕಾರಣಗಳಿಂದಾಗಿ ಐಪಿಎಲ್ನಲ್ಲಿ ಮತ್ತೆ ವಿರಾಟ್ ಕೊಹ್ಲಿ ನಾಯಕತ್ವ ಹವಾ ಕಾಣಬಹುದೇ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.